ಎಂ.ಕೆ.ಹುಬ್ಬಳ್ಳಿ.(ಅ.16)ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಕಿತ್ತೂರ ತಾಲೂಕಿನ ಕೊನೆಯ ಹಳ್ಳಿ ವೀರಾಪೂರ ಗ್ರಾಮದಲ್ಲಿ ಶನಿವಾರ ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಯಿತು.
ಮುಂಜಾನೆ ಸರಿಯಾದ ಸಮಯಕ್ಕೆ ಬಸ್ ನಲ್ಲಿ ಹಲವು ಇಲಾಖೆ ಅಧಿಕಾರಿಗಳ ಜೊತೆ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆಗಮನ.ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಕಾರ್ಯಕ್ರಮ ಸತ್ಯವ್ವ ಮಂದಿರದಲ್ಲಿ ಪೂಜೆಯೊಂದಿಗೆ ಪ್ರಾರಂಭವಾಯಿತು.
ಮುಂದೆ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಕಲಿಕೋಪಕರಣ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಸುಂದರವಾಗಿ ವಿಜ್ಞಾನದ ಹಲವು ಅಂದದ ಪ್ರಯೋಗಳ ಕಂಗೋಳಿಸಿರುವದನ್ನು ಕಣ್ಮನ ಸೆಳೆದವು.
ಊರೆಲ್ಲಾ ಕಾಲ್ನಡಿಗೆಯಲ್ಲಿ ಸುತ್ತಿ ಜನರ ಸಮಸ್ಯೆಗಳ ಆಲಿಸಿದರು,ವಿಧ್ಯಾರ್ಥಿಗಳೊಂದಿಗೆ ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘದೊಂದಿಗೆ ಸಂವಾದ ನಡೆಸಿದರು.ಹಲುವಾರು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ ಹೀರೆಮಠ ಹಾಡು ಹಾಡುತ್ತಿರುವುದು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾಗೂ ಕಿತ್ತೂರ ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿ ಆರ್.ಟಿ ಬಳಿಗಾರ,ಜಿಲ್ಲಾ ಉಪನಿರ್ದೇಶಕರ ಕಛೇರಿಯ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ ಅಕ್ಷರ ದಾಸೋಹ ಅಧಿಕಾರಿ ಪ್ರಕಾಶ ಮೆಳವಂಕಿ , ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ ಸಿಬ್ಬಂದಿ ಹಾಗೂ ಕಂದಾಯ, ಕೃಷಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.