ಕೇಂದ್ರ ಸರ್ಕಾರ ದಿಂದ 10 ರೂ.ಗೆ LED ಬಲ್ಬ್ ವಿತರಣೆ

ನವದೆಹಲಿ : ಗ್ರಾಮೀಣ ಜನತೆಗೆ ಕೇಂದ್ರ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ಗ್ರಾಮ ಉಜಾಲಾ ಯೋಜನೆಯಡಿಯಲ್ಲಿ ಕರ್ನಾಟಕ ಸೇರಿದಂತೆ ಐದು ರಾಜ್ಯಗಳ ಗ್ರಾಮಗಳಲ್ಲಿ 10 ರೂ.ಗೆ ರಿಯಾಯಿತಿ ದರದಲ್ಲಿ ಎಲ್ ಇಡಿ ಬಲ್ಬ್ ವಿತರಿಸಲಿದೆ.

ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಅಂಗವಾಗಿ ಡಿಸೆಂಬರ್ 14ರಿಂದ ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ 5 ರಾಜ್ಯಗಳ ಗ್ರಾಮಗಳಲ್ಲಿ 10 ರೂ. ರಿಯಾಯಿತಿ ದರದಲ್ಲಿ ಎಲ್ ಇಡಿ ಬಲ್ಬ್ ಅನ್ನು ವಿತರಿಸಲಿದೆ. ಈ ಯೋಜನೆಯಡಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿ 5 ರಾಜ್ಯಗಳಲ್ಲಿ ಡಿಸೆಂಬರ್ 14 ರಿಂದ ಒಟ್ಟು 2,579 ಹಳ್ಳಿಗಳಲ್ಲಿ ಬಲ್ಬ್ ಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಿದೆ.

ಈ ಎಲ್ ಇಡಿ ಬಲ್ಪ್ ಮೂರು ವರ್ಷ ಗ್ಯಾರಂಟಿವುಳ್ಳ 7 ವ್ಯಾಟ್ ಹಾಗೂ 12 ವ್ಯಾಟ್ ಸಾಮಾರ್ಥ್ಯ ಹೊಂದಿದ್ದು, ಬಲ್ಪ್ ಗಳನ್ನು ಸರ್ಕಾರಿ ಸ್ವಾಮ್ಯದ ಸಿ.ಎಸ್.ಇ.ಎಲ್ ಕಂಪನಿ ಒದಗಿಸಲಿದೆ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";