ಧಾರವಾಡ ಬಾಡಿ ಬಿಲ್ಡರ್ ಪ್ರಭಾಕರ ಆತ್ಮಹತ್ಯೆ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಧಾರವಾಡ: ನಗರದ ಹೊಸ ಯಲ್ಲಾಪುರದಲ್ಲಿ ಬಾಡಿ ಬಿಲ್ಡರ್‌ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.

ಪ್ರಭಾಕರ ಆನಂದಪ್ಪ ಕಬ್ಬಾರ (40) ಎಂಬಾತನೇ ಮೃತಪಟ್ಟ ದುರ್ದೈವಿ. ಮನೆಯ ಮೇಲ್ಬಾವಿಯಲ್ಲಿ ನೇಣು ಹಾಕಿಕೊಂಡಿದ್ದಾನೆ.

ಸುಮಾರು ವರ್ಷಗಳಿಂದ ಆಟೊ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಪ್ರಭಾಕರ ಸಾಕಷ್ಟು ಸಾಲ ಮಾಡಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ ಎನ್ನಲಾಗಿದೆ. ಕಾರಣ ಸಾಲ ಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. 

ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article
";