ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಮಾಡುವುದೂ ಇಲ್ಲ ಊಹಾಪೋಹಗಳಿಗೆ ತೆರೆ ಎಳೆದ ಮಾಜಿ ಸಚಿವ ಡಿ. ಬಿ. ಇನಾಮದಾರ
ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಮಾಜಿ ಸಚಿವರು ಕಾಂಗ್ರೆಸ್ ಹಿರಿಯ ನಾಯಕರಾದ ಡಿ.ಬಿ.ಇನಾಮದಾರ ಅವರು ಅನುಕೂಲಸಿಂಧು ರಾಜಕಾರಣಕ್ಕೆ ಮುಂದಾದರಾ? ಅನ್ನೋ ಬಗ್ಗೆ ಕ್ಷೇತ್ರದಲ್ಲಿ ಹಬ್ಬಿದ ಗುಸು ಗುಸು ಸುದ್ದಿಗೆ ಸ್ಪಷ್ಟೀಕರಣ ನೀಡಿದ್ದು ರಾಜಕಾರಣದ ಸುದೀರ್ಘ 40 ವರ್ಷಗಳ ಅವಧಿಯಲ್ಲಿ ಈ ವರೆಗೂ ಯಾವ ಹೊಂದಾಣಿಕೆ ರಾಜಕಾರಣವನ್ನೂ ಮಾಡಿಲ್ಲ ಮುಂದೆಯೂ ಮಾಡುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ಹೋರಾಡಿದ ಪಕ್ಷ ಕಾಂಗ್ರೆಸ್. ನಾನು ಯಾವತ್ತೂ ಪಕ್ಷಕ್ಕೆ ನಿಷ್ಠನಾಗಿ ಈ ವರೆಗೂ ಕೆಲಸ ಮಾಡಿದ್ದೇನೆ ಮುಂದೆಯೂ ಮಾಡುತ್ತೇನೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಯಾವುದೇ ತರಹದ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ.ಎಲ್ಲರೂ ಒಟ್ಟಾಗಿ ಪಕ್ಷದ ಸಂಘಟನೆ ಮಾಡುವ ಮೂಲಕ ಈ ಬಾರಿ ಕಿತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸೋಣ ಎಂದು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣದ ಬಗ್ಗೆ ಇತ್ತೀಚೆಗೆ ಗುಲ್ಲೆದ್ದಿದ್ದು ಈ ಬಗ್ಗೆ ಜನಸಾಮಾನ್ಯರ ಅನಿಸಿಕೆಗಳನ್ನು ಆಧರಿಸಿ ಸುದ್ದಿ-ಸದ್ದು.ಕಾಂ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಮೇಶ ಗೌರಿಯವರು “ಅಡ್ಜಸ್ಟಮೆಂಟ್ ಪಾಲಿಟಿಕ್ಸಗೆ ಮುಂದಾದ್ರ ಧಣಿ! ಹೊಂದಾಣಿಕೆ ಹೊಗೆಗೆ ಕಿತ್ತೂರು ಕೈ ಕಾರ್ಯಕರ್ತರು ಕಂಗಾಲು” ಎಂಬ ಶೀರ್ಷಿಕೆಯಲ್ಲಿ ವರದಿ ಮಾಡಿದ್ದರು, ಅವರ ಮಾಡಿದ ವರದಿ ರಾಜ್ಯದಾದ್ಯಂತ ವೈರಲ್ ಆಗುತ್ತಿರುವ ಬೆನ್ನಲ್ಲೇ ತತ್‌ಕ್ಷಣ ಮಾಜಿ ಸಚಿವರು ಕಾಂಗ್ರೆಸ್ ಮುಖಂಡರು ಆದ ಡಿ. ಬಿ. ಇನಾಮದಾರ ಅವರು ಈ ರೀತಿ ಸ್ಪಷ್ಟೀಕರಣ ನೀಡಿದ್ದಾರೆ.
ಆ ಮೂಲಕ ಕಾರ್ಯಕರ್ತರು ಮತ್ತಷ್ಟು ಉತ್ಸುಕರಾಗಿದ್ದು ಕ್ಷೇತ್ರದಲ್ಲಿ ಸಂಘಟನೆ ಚುರುಕಾವುದರಲ್ಲಿ ಸಂಶಯವಿಲ್ಲ.