ವರದಿ:ಪ್ರವೀಣ ಗಿರಿ
ಚನ್ನಮ್ಮನ ಕಿತ್ತೂರು: ಇದು ಐತಿಹಾಸಿಕ ಕಿತ್ತೂರಿಗೆ ಹೊಂದಿಕೊಂಡಿರುವ ಪ್ರಮುಖ ರಸ್ತೆ. ಮಲ್ಲಾಪೂರ ಸೇರಿದಂತೆ ಅನೇಕ ಗ್ರಾಮಗಳಿಗೆ ಇದು ಪ್ರಮುಖ ಸಂಪರ್ಕ ಕೊಂಡಿ. ಆದರೆ ಸದ್ಯದ ಈ ರಸ್ತೆಯ ಪರಿಸ್ಥಿತಿ ನೋಡಿದರೇ ಜನಪ್ರತಿನಿಧಿಗಳಿಗೆ ಬಲು ಪ್ರೀತಿ.
ಹೌದು.ಕಿತ್ತೂರು-ಬೈಲಹೊಂಗಲ ತಾಲೂಕಿಗೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ರಸ್ತೆಯು ಸಂಪೂರ್ಣ ಹಾಳಾಗಿದ್ದು ಸವಾರರು ಹೈರಾಣಾಗಿದ್ದು ಹಿಡಿ ಶಾಪ ಹಾಕುತ್ತಿದ್ದಾರೆ. ಆಸ್ಪತ್ರೆಯ ಮುಂದೆ ತಗ್ಗು ಇಲ್ಲಿನ ಶಕುಂತಲಾ ಗಡಗಿ ಆಸ್ಪತ್ರೆಯ ಕೂಗಳತೆಯ ದೂರದಲ್ಲಿಯೇ ರಸ್ತೆ ಮಧ್ಯೆ ದೊಡ್ಡ ತಗ್ಗು ಬಿದ್ದಿದ್ದು ಜನರ ಆಕ್ರೋಶಕ್ಕೆ ಮಣಿದು ರಸ್ತೆಗೆ ತೆಪೆ ಹಕ್ಕುವ ಕಾರ್ಯ ಮಾಡಿ ಮುಗಿಸಿದ್ದಾರೆ. ಹಲವು ಬೃಹತ್ ವಾಹನಗಳು ಇಲ್ಲಿ ಸಿಕ್ಕಿಹಾಕಿಕೊಂಡಿವೆ. ಬೈಕ್ ಸವಾರರ ಸ್ಥಿತಿಯಂತೂ ಅಯೋಮಯವಾಗಿದೆ ದಿನಕ್ಕೆ ಏನಿಲ್ಲವೆಂದರೂ ಇಬ್ಬರಾದರೂ ರಸ್ತೆ ಹದಗೆಟ್ಟ ಪರಿಣಾಮ ಬಿದ್ದು ಪೆಟ್ಟು ಹಚ್ಚಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಸಮೀರ ಮಠದ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರಮುಖ ರಸ್ತೆ ಇದಾಗಿದ್ದರಿಂದ ಪ್ರತಿದಿನ ಅವರಾದಿ, ಮಲ್ಲಾಪೂರ, ಬಸಾಪೂರ, ಚಿಕ್ಕನಂದಿಹಳ್ಳಿ, ದೇಮಟ್ಟಿ, ಕೊಟಬಾಗಿ, ಜಮಳೂರು, ಸಂಗೋಳ್ಳಿ, ಕಲಬಾಂವಿ ಸೇರಿದಂತೆ ಅನೇಕ ಹಳ್ಳಿಯ ಜನರು ಬರುತ್ತಾರೆ ಆದರೆ ಅವರೆಲ್ಲ ರಸ್ತೆಯ ದೂಳಿನಿಂದಾಗಿ ಕಂಗೆಟ್ಟು ಹೋಗಿ ಜನರು ಹಿಡಿ ಶಾಪ ಹಾಕುತಿದ್ದಾರೆ.
ಪ್ರತಿ ವರ್ಷ ಉತ್ಸವದ ಸಂದರ್ಭದಲ್ಲಿ ಊರು ಅಂದಗೊಳಿಸುವ ನಿಟ್ಟಿನಲ್ಲಿ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡಲಾಗುತ್ತಿತ್ತು. ಈ ವರ್ಷವೂ ಮಾಡಲಾಗಿದ್ದರೂ ಕಾಮಗಾರಿ ಪ್ರಯೋಜನವಾಗಿಲ್ಲ ಎಂಬುದು ಸಮೀಪದ ಗ್ರಾಮಗಳ ಜನರ ವಾದ. ರಸ್ತೆ ಸುಧಾರಣೆ ಮಾಡದಿದ್ದರೇ ಉಗ್ರ ಹೋರಾಟಕ್ಕೆ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಸಂಘನೆಯು ಮುಂದಾಗಿದೆ.
ಚುನಾವಣೆ ನಂತರ ಮಾಡಿ, ಮೊದಲು ರಸ್ತೆ ಮಾಡಿ ಎಂಬುದಾಗಿ ಕಿತ್ತೂರು ಪಟ್ಟಣದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲದಿದ್ದರೇ ಇದು ಜನರ ಮೇಲೆ ಪರಿಣಾಮ ಬೀರಬಹುದು(?)
“ಜನರ ಶಾಪ ತಟ್ಟುವುದರೊಳಗೆ ರಸ್ತೆ ಕಾಮಗಾರಿ ಶುರು ಮಾಡಿ ಪುಣ್ಯ ಕಟ್ಟಿಕೊಳ್ಳಿ.“
ರಾಜು ಬಾವನ್ನವರ, ಮುಖಂಡರು ಮಲ್ಲಾಪೂರ |
“ರಸ್ತೆ ಸುಧಾರಣೆ ಮಾಡದಿದ್ದರೆ ಜನರ ಒಳತಿಗಾಗಿ ಹೋರಾಟ ಮಾಡಲಾಗುವುದು.” ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘಟನೆ |