ಸೇವಾ ನಿರತ ಬಿಎಸ್ಎಫ್ ಯೋಧನ ತಾಯಿ ಕೊಲೆ ಪ್ರಕರಣ! ಕೊಡಲೆ ಆರೋಪಿಗಳನ್ನು ಬಂಧಿಸಿ: ಸಿಪಿಐಎಂ ಆಗ್ರಹ

ಉಮೇಶ ಗೌರಿ (ಯರಡಾಲ)

ಲಿಂಗಸೂರು:ಬಿಎಸ್ಎಫ್ ಯೋಧನ ತಾಯಿಯನ್ನು ಕೊಲೆ ಮಾಡಿದ ಆರೋಪಿಗಳನ್ನು ತಕ್ಷಣ ಬಂಧಿಸ ಬೇಕು.ಎಂದು ಸಿಪಿಐಎಂ ಪಕ್ಷವು ಲಿಂಗಸ್ಗೂರು ಡಿವೈಎಸ್ಪಿ ಮುಖಾಂತರ ರಾಯಚೂರು ಜಿಲ್ಲಾ ಪೋಲಿಸ್ ವರಿಷ್ಠರಿಗೆ ಮನವಿ ಸಲ್ಲಿಸಿದರು

ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು ರಾಜಕೀಯ ಪ್ರಭಾವಕ್ಕೆ ಮಣಿದು ನಿರ್ಲಕ್ಷ್ಯ ವಹಿಸಿದರೆ ಜಿಲ್ಲೆಯಾದ್ಯಂತ ಸಿಪಿಐಎಂ ಪಕ್ಷವು ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಯೋಧನ ತಾಯಿಯನ್ನು ಕೊಲೆ ಮಾಡಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಯೋಧನ ಕುಟುಂಬಕ್ಕೆ ಸೂಕ್ತ ರಕ್ಷಣೆಗೆ ಒತ್ತಾಯಿಸಿ ಪ್ರತಿಭಟನೆ ಮುಖಾಂತರ ಮನವಿ ಸಲ್ಲಿಸಲಾಯಿತು.

ಲಿಂಗಸುಗೂರು ತಾಲೂಕಿನ ನಿಲೋಗಲ್ ಗಾಮ್ರದ ಭಾರತೀಯ ಸೇನೆಯ ಸೇವಾನಿರತ ಬಿಎಸ್ಎಫ್ ಸೈನಿಕ ಅಮರೇಶ ರವರ ಮನೆಯ ಮುಂದಿರುವ ಚರಂಡಿ ವಿಷಯಕ್ಕೆ ಅದೇ ಗ್ರಾಮದ ಸುಮಾರು 20ಕ್ಕೂ ಹೆಚ್ಚು ಜನರು ಕೂಡಿಕೊಂಡು ಮಾರಾಣಾಂತಿಕ ಹಲ್ಲೆ ನಡೆಸಿ ಯೋಧನ ತಾಯಿ ಈರಮ್ಮ ಅವರ ಕೊಲೆ ಮಾಡಿದ್ದಾರೆ.

ಕೂಡಲೇ ಅವರನ್ನು ಯಾವ ಪ್ರಭಾವಕ್ಕೊಳಗಾಗದೇ ಅವರನ್ನು ಬಂಧಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಲಿಂಗಸ್ಗೂರು ತಾಲೂಕು ಸಮಿತಿ ಆಗ್ರಹಿಸುತ್ತದೆ.

ಹತ್ಯೆಗೆ ಕಾರಣರಾದ ಹಂತಕರನ್ನು ರಾಜಕೀಯ ಪ್ರಭಾವದಿಂದಾಗಿ ಬಂಧಿಸುವ ಬದಲಾಗಿ ಕೊಲೆಗಡುಕರಿಗೆ ರಕ್ಷಣೆ ನೀಡಲಾಗುತ್ತಿದೆ.

ದೇಶದ ರಕ್ಷಣೆ ಮಾಡುವ ವೀರಯೋಧರ ಬಗ್ಗೆ ಡೊಂಗೀ ಭಾಷಣ ಮಾಡುವ ಬಿಜೆಪಿ ಈಗ ದೇಶ ಕಾಯೋ ಯೋಧನ ಕುಟುಂಬದ ಮೇಲೆ ಅಕ್ರಮ ಗುಂಪು ಕಟ್ಟಿಕೊಂಡು ಕೊಲೆ ಮಾಡಲಾಗಿದೆ.

ಆದರೆ ಬಿಜೆಪಿ ಈ ಬಗ್ಗೆ ತುಟಿಯೂ ಬಿಚ್ಚದೇ ಮೌನವಾಗಿದೆ. ಇದರಿಂದ ಬಿಜೆಪಿಯ ನಕಲೀ ದೇಶಪ್ರೇಮ ಎಂದು ಸಾಬೀತಾದಂತಾಗಿದೆ.

ಯೋಧನ ಕುಟುಂಬದ ಮೇಲೆಯೇ ಕೊಲೆಗಡುಕರು ಸುಳ್ಳು ಪ್ರಕರಣ ದಾಖಲಿಸಿರುವುದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ದೇವದುರ್ಗ ತಾಲೂಕು ಸಮಿತಿಯು ತಿವ್ರವಾಗಿ ಖಂಡಿಸುತ್ತದೆ,

ಕೊಲೆ ಮಾಡಿದ ಪ್ರಮುಖ ಆರೋಪಿ ಬಿಜೆಪಿ ಸ್ಥಳೀಯ ಮುಖಂಡ ಶರಣಪ್ಪ ಹಾಲಾಪೂರವರನ್ನು ಬಂಧಿಸದೆ ಇರುವುದರಿಂದ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಕೊಲೆ ಪ್ರಕರಣವನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ಸುಳ್ಳು ಪ್ರಕರಣ ದಾಖಲಿಸಲು ಕಾರಣರಾಗಿದ್ದರೇ ಕೊಲೆಯ ಆರೋಪಿಗಳೆ ಯೋಧನ ಕುಟುಂಬದ ಮೇಲೆ ಸುಳ್ಳು ಪ್ರಕಣ ದಾಖಲಿಸಿರುವುದನ್ನು ನೋಡಿದರೆ ಪೋಲಿಸ್ ಇಲಾಖೆಯ ಮೇಲೆ ಅನುಮಾನಕ್ಕೆ ದಾರಿಯಾಗಿದೆ. ಕೊಲೆ ನಡೆದು ವಾರ ಕಳೆದರೂ ಪ್ರಮುಖ ಆರೋಪಿಯನ್ನು ಬಂದಿಸಿಲ್ಲ.

ಈ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶರಣಪ್ಪ ಹಾಲಾಪೂರವರನ್ನೊಳಗೊಂಡಂತೆ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನ ಕ್ರಮ ಜರುಗಿಸಬೇಕು. ಹಾಗೂ ಯೋಧನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಒಂದು ವೇಳೆ ರಾಜಕೀಯ ಪ್ರಭಾವಕ್ಕೆ ಮಣಿದು ನಿರ್ಲಕ್ಷ್ಯವಹಿಸಿದರೆ ಜಿಲ್ಲೆಯಾದ್ಯಂತ ಸಿಪಿಐಎಂ ಪಕ್ಷವು ಹೋರಾಟವನ್ನು ತೀವ್ರಗೊಳಿಸಲಾಗುವುದೆಂದು ಈ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು, ತಾಲೂಕು ಸಮಿತಿ ಸದಸ್ಯರಾದ ಮಹ್ಮದ್ ಹನೀಫ್, ಆಂಜನೇಯ ನಾಗಲಾಪೂರು, ಹತ್ಯಗೀಡಾದ ಈರಮ್ಮ ಅವರ ಮಗನಾದ ಯೋಧ ಅಮರೇಶ ನಿಲೋಗಲ್, ಬಾಬಾಜಾನಿ, ನಿಂಗಪ್ಪ ಎಂ, ತಿಪ್ಪಣ್ಣ ನಿಲೋಗಲ್, ಹಸೇನ್ ಸಾಬ್, ವೆಂಕಟೇಶ, ಇಸ್ಮಾಯಿಲ್, ಅಲೀಮ್ ಪಾಷಾ, ಹೈದರ್ ಪಾಷಾ, ಮಣಿಸಿಂಗ್, ಶಬ್ಬೀರ್, ಹಸನ್, ರಮೇಶ ನಿಲೋಗಲ್, ಅಕ್ಬರ್ ಪಾಷಾ ಸೇರಿದಂತೆ ಮುಂತಾದವರು ಇದ್ದರು.

ವರದಿ: ಮಂಜುನಾಥ ಕುಂಬಾರ

Share This Article
";