ಬೆಳಗಾವಿ: 2018 ರ ಬಳಿಕ ಬೆಳಗಾವಿಯಲ್ಲಿ ಈ ಬಾರಿ ಮತ್ತೆ ಅಧಿವೇಶನ ನಡೆಸಲಾಗುತ್ತಿದೆ. ಅಧಿವೇಶನ ನಡೆಸಲೂ ಅನೇಕ ಸವಾಲುಗಳನ್ನ ಈ ಬಾರಿ ಎದುರಿಸಬೇಕಾಗುತ್ತಿದೆ. ಕೋರೊನಾದಂತಹ ಸಮಸ್ಯೆ ಎದುರಾಗಿದೆ. ಸಿದ್ಧತೆಗಳೊಂದಿಗೆ ಮುಂಜಾಗೃತೆಯೊಂದಿಗೆ ಅಧಿವೇಶನವನ್ನ ನಡೆಸಲಾಗುತ್ತಿದೆ. ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗಳಿಗೆ ಅವಕಾಶ ಮಾಡಿಕೊಡಲಾಗುವದು. ಕೋವಿಡ್ ಹಿನ್ನೆಲೆ ಈ ಬಾರಿ ಶಾಲಾ ಮಕ್ಕಳಿಗೆ ಅಧಿವೇಶನ ನೋಡಲೂ ಬರಲು ಅವಕಾಶವಿಲ್ಲ ಎಂದು ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಗುರುವಾರ ಬೆಳಿಗ್ಗೆ ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದ ಕುರಿತು ಈಗಾಗಲೆ ಎಲ್ಲ ಸಿದ್ಧತೆಗಳ ಮಾಡಿ ಸಭೆ
ನಡೆಸಿದ್ದೇವೆ. 3 ವರ್ಷದ ಬಳಿಕ ಡಿ.13ರಿಂದ 24ರ ವರೆಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದೆ.
ಈ ಅಧಿವೇಶನ ಹಿನ್ನೆಲೆಯಲ್ಲಿ ಅನೇಕ ಸವಾಲುಗಳು ನಮ್ಮ ಮುಂದೆ ಇವೆ. ಕರೋನಾ ಸುದ್ದಿ ಆತಂಕ ತಂದಿವೆ. ಸಮಾಲೋಚನೆ ಮಾಡಿ ಇವತ್ತಿನ ದಿನ ವರೆಗೆ ಅಧಿವೇಶನ ಮಾಡುವ ನಿರ್ಮಾಣ ಮಾಡಿದ್ದೇವೆ. ಸಿದ್ಧತೆ ಮಾಡಿ ನಡೆಸಬೇಕು ಎಂದಿದ್ದೇವೆ. ಪರಿಸ್ಥಿತಿ ಹೀಗೆ ಇರುತ್ತೆ ವಿಶ್ವಾಸ ಇದೆ. ಅತಿವೃಷ್ಟಿಯಿಂದ ಆಗಿರುವ ಹಾನಿ ತಕ್ಷಣ ಸ್ಪಂದಿಸಿ ಸರಿದೂಗಿಸುವ ಸವಾಲ ಇದೆ. ಲೋಕಲ ಬಾಡಿ 14 ಫಲಿತಾಂಶ ಇದೆ. ಬೆಳಗಾವಿಯಲ್ಲಿ ಚುನಾವಣೆ ಫಲಿತಾಂಶ ಇರುವದರಿಂದ ಜಿಲ್ಲಾಡಳಿತ ಮೇಲೆ ಬಹಳ ಜವಾಬ್ದಾರಿ ಬಹಳ ಇದೆ. ಶಾಸಕರಿಗೆ ಅಧಿಕಾರಿಗಳ ವಸತಿ ವ್ಯವಸ್ಥೆ ಹೊಂದಿರುವ
ಕಾರ್ಯ ನಡೆದಿದೆ. ಆಹಾರ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದ್ದೇವೆ. ವಾಹನ ವ್ಯವಸ್ಥೆ ಗೆ ಸೂಚಿಸಲಾಗಿದೆ ಎಂದು ಹೇಳಿದರು.
ಇನ್ನು ಕೆಲಸಗಳು ಬಾಕಿ ಇವೆ. ಸಭೆಗಳು ನಡೆಸಿದ್ದೇವೆ. ವಿದ್ಯಾರ್ಥಿಗಳಿಗೆ ಕಾಲಾಪ ನೋಡಲು ಈ ಬಾರಿ ಅವಕಾಶ ಇಲ್ಲ. ಸಾರ್ವಜನಿಕ ರಿಗೆ. ಅವಕಾಶ ಇದೆ.
ಎಲ್ಲ ಕಾರ್ಯಕಲಾಪಗಳು ಎಂದಿನಂತೆ ನಡೆಯಲಿದೆ. ಸರಕಾರದಿಂದ ಯಾವ ಬಿಲ್ ಗಳು ಬಂದಿಲ್ಲ. ಇನ್ನು ಕಾಲಾವಕಾಶ ಇದೆ. ನೋಡೊನ. ಸರಕಾರಕ್ಕೆ ಸೂಚನೆ ನೀಡಲಾಗಿದೆ. ಸದನದಲ್ಲಿ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಮೊದಲ ದಿನ ಶ್ರದ್ಧಾಂಜಲಿ ನಡೆಯಲಿದೆ ಎಂದು ಹೇಳಿದರು.
ಕಲಾಪ ನಡೆಸುವ ವೇಳೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗದಲ್ಲಿ ನಾವು ವಿಶ್ವಾಸ ಹೆಚ್ಚಿಸಬೇಕಾಗಿದೆ. ಜನ ನಮ್ಮನ್ನು ನೋಡುತ್ತಿರುತ್ತಾರೆ. ವಿಧಾನ ಸಭೆ ಅಥವಾ ಪರಿಷತ್ ನಲ್ಲಿ ಮೀರಿ ನಡೆದುಕೊಂಡದರೆ ಕಠಿಣ ಕ್ರಮ ಖಂಡಿತ.ಸದನದಲ್ಲಿ ವ್ಯವಸ್ಥೆ ಚರ್ಚೆ ನಡೆಯಬೇಕಾಗುತ್ತದೆ. ಲೋಕಸಭಾ
ರಾಜ್ಯಸಭೆಯಲ್ಲಿ ನಡೆಯುತ್ತಿರುವ ಸನ್ನಿವೇಶ ನೋವು ತರುತ್ತಿದೆ. ಲೋಕಸಭಾ ಯಲ್ಲಿ ಈ ರೀತಿಯಾದರೆ ವಿಧಾನ ಸಭೆ ಸದನ ಹೇಗೆ ಎಂದು. ಎಲ್ಲ ಸದಸ್ಯರು ಕಡ್ಡಾಯವಾಗಿ ಬಂದು ಹಾಜರಿದ್ದು ಕಲಾಪದಲ್ಲಿ ಚರ್ಚೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಡಿ.4-೫ ರಂದು ಸ್ಪೀಕರ್ ಸನಾವೇಶ ನಡೆಯಲಿದೆ. ದೆಹಲಿಯಲ್ಲಿ ಈ ಸಮಾವೇಶದಲ್ಲಿ ನಾವು ಭಾಗವಹಿಸುತ್ತೇವೆ. ಸದಸ್ಯರು ಸದನದಲ್ಲಿ ಅಶಿಸ್ತಿನಿಂದ ವರ್ತಿಸುವದು ಸರಿಯಾದ
ಕ್ರಮವಲ್ಲ. ಸಂಸದೀಯ ವ್ಯವಸ್ಥೆ ನುಡಿದರು ಬೆಂಗಳೂರಿನ ಅಧಿಕಾರಿಗಳು ಇವತ್ತಿನ ದಿನಮಾನಗಳಲ್ಲಿ ಯಾವ ಹೆದರಿಕೆ ಇರುವದಿಲ್ಲ. ಅದಕ್ಕಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಯಾವ ತೊಂದರೆ ಇರುವದಿಲ್ಲ. ಇಂತಹ ಸನ್ನಿವೇಶ ಕಂಡು ಬರದ ಹಿನ್ನೆಲೆಯಲ್ಲಿ ಇಲ್ಲಿ ಅಧಿವೇಶನ ನಡೆಸಲಾಗುತ್ತದೆ. ಅಧಿಕಾರ ವರ್ಗ ನಮಗೂ ಕೂಡಾ ಬೆಳಗಾವಿಯಲ್ಲಿ ಅಧಿವೇಶನ ನಡೆಸದಂತೆ ಕೋರಿದ್ದಾರೆ. ಆದರೆ ಅಂತಹ ಸೋಂಕು ಹರಡುವ ಸನ್ನಿವೇಶ ಯಾವದು ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಇದೇ ವೇಳೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಸಿಮ್ಲಾದಲ್ಲಿ ಎರಡು ಕಡೆ ಸದನ ನಡೆಸಲಾಗುತ್ತದೆ. ಅದೇ ರೀತಿ ಇಲ್ಲೂ ಶಾಸಕ ಭವನ ನಿರ್ಮಾಣಕ್ಕೆ ಸಿಎಂ ಗೆ ಸೂಚಿಸಲಾಗಿದೆ. ಈ ಬಾರಿಯು ಒತ್ತಾಯ ಮಾಡುತ್ತೇವೆ. ಪ್ರಯತ್ನ ಮಾಡುತ್ತೇವೆ ಎಂದು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ, ಅಧಿವೇಶನ ವಿಶೇಷ ಅಧಿಕಾರಿ ಸುರೇಶ ಇಟ್ನಾಳ, ಬೆಳಗಾವಿ ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ, ನಗರ ಪೊಲೀಸ ಆಯುಕ್ತ ತ್ಯಾಗರಾಜನ, ಹೆಚ್ಚುವರಿ ಎಸ್.ಪಿ ಅಮರನಾಥ ರೆಡ್ಡಿ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.