”ಬಿಜೆಪಿಯಲ್ಲಿ ಮೋದಿ ಬಿಟ್ಟು ಪ್ರಧಾನಿ ಆಗಲು ಯಾರು ಬೇರೆ ಗಂಡಸರು ಇಲ್ವಾ.?”:ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ವಿವಾದಾತ್ಮಕ ಹೇಳಿಕೆ

ಮೈಸೂರು: ”ಬಿಜೆಪಿಯಲ್ಲಿ ಮೋದಿ ಬಿಟ್ಟು ಪ್ರಧಾನಿ ಆಗಲು ಯಾರು ಬೇರೆ ಗಂಡಸರು ಇಲ್ವಾ?” ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಇದೆ . ಯಡಿಯೂರಪ್ಪ ಅವರಿಗೆ ಮಾನ ಮರ್ಯಾದೆ ಇದೆಯಾ ? ಯಡಿಯೂರಪ್ಪ ಅವರು ನರೇಂದ್ರ ಮೋದಿ ಅವರಿಗಿಂತ ಸೀನಿಯರ್. ನೀವು ಮತ್ತೊಮ್ಮೆ ಮೋದಿ ಪ್ರಧಾನಿ ಮಾಡಲು ಹೊರಟಿದ್ದೀರಾ? ಬಿಜೆಪಿಯಲ್ಲಿ ಮೋದಿ ಬಿಟ್ಟು ಪ್ರಧಾನಿ ಆಗಲು ಯಾರು ಬೇರೆ ಗಂಡಸರು ಇಲ್ವಾ ಎಂದು ಪ್ರಶ್ನೆ ಮಾಡಿದರು.

ಮಹಿಳಾ ಮೀಸಲಾತಿಯಲ್ಲಿ ಸೋನಿಯಾ ಶ್ರಮ
ಕೇಂದ್ರ ಹಾಗೂ ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮೀಸಲಾತಿಯ ಹಿಂದೆ ಸೋನಿಯಾ ಗಾಂಧಿ ಅವರ ಶ್ರಮವಿದೆ. ಈ ಬಗ್ಗೆ ಸೋನಿಯಾ, ಪ್ರಿಯಾಂಕ ಹಾಗೂ ರಾಹುಲ್ ಗಾಂಧಿ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಈ ಹಿಂದೆಯೇ ಕೇಂದ್ರದಲ್ಲಿ ಒಕ್ಕೂಟ ಸರ್ಕಾರ ಇದ್ದಾಗ ಈ ಬಗ್ಗೆ ಪ್ರಸ್ತಾಪಸಲಾಗಿತ್ತು. ಆದರೆ ಮೈತ್ರಿ ಒಕ್ಕೂಟದಲ್ಲಿ ಸ್ವಲ್ಪ ತಡವಾಯಿತು. ಹೈದರಾಬಾದ್ ನಲ್ಲಿ INDIA ಒಕ್ಕೂಟ ಸಭೆ ನಡೆದಿದ್ದರಿಂದ ಬಿಜೆಪಿಗರು ವಿಚಲಿತರಾಗಿದ್ದಾರೆ.ಮಹಿಳಾ ಮೀಸಲಾತಿಯ 33% ನಲ್ಲಿಯೂ ಇಂಟರ್ನಲ್ ಕೋಟ ಕೊಡಬೇಕು. ಅಂತ ಲಕ್ಷ್ಮಣ ಆಗ್ರಹಿಸಿದರು.
ಕಾವೇರಿ ನೀರು ಬಿಡ್ತಿಲ್ಲ..
ರಾಜ್ಯದ ಜಲಾಶಯದಲ್ಲಿ 42 ಟಿ ಎಂ ಸಿ ನೀರು ಇದೆ. ಇದರಲ್ಲಿ ಬೆಂಗಳೂರಿನ ಕುಡಿಯುವ ನೀರಿಗೆ 24 ಟಿಎಂಸಿ ಬೇಕಾಗಿದೆ. 25 ಟಿಎಂಸಿ ಮೈಸೂರು ಭಾಗಕ್ಕೆ ಬೇಕಾಗಿದೆ. 2024 ರ ಜೂನ್‌ವರೆಗೂ ಇಷ್ಟು ನೀರು ಕುಡಿಯಲು ಬೇಕಾಗಿದೆ. ನಾವು‌ ತಮಿಳುನಾಡಿಗೆ ನೀರು ಬಿಟ್ಟಿಲ್ಲ. ನಾವು ನೀರು ಬಿಟ್ಟಿರುವುದು ಗದ್ದೆಗಳಿಗೆ. ಸೆಪ್ಟೆಂಬರ್ 8 ರಂದೇ ನೀರು ಬಂದ್ ಮಾಡಲಾಗಿದೆ.ಈಗ ಬಿಟ್ಟಿರುವ ನೀರು ಕಾಲುವೆಗಳಿಗೆ ಹೋಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಸ್ಪಷ್ಟನೆ ನೀಡಿದರು.
ಚೈತ್ರಾ ಬಿಜೆಪಿ, ಆರೆಸ್ಸೆಸ್ ಬೇನಾಮಿ
ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಚೈತ್ರಾ ಕುಂದಾಪುರ ಬಿಜೆಪಿ ಆರ್ ಎಸ್ ಎಸ್‌ನ ಬೇನಾಮಿ. ಇನ್ನು ಎರಡು ದಿನದಲ್ಲಿ ಇವರ ಹಿಂದೆ ಇರುವ ಗುಂಪು ಎಷ್ಟು ಹಣ ಪಡೆದಿದ್ದಾರೆ ಯಾರಿಗೆ ಹೋಗಿದೆ ಅನ್ನುವುದನ್ನು ಪೊಲೀಸರು ಕೊಡುತ್ತಾರೆ ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 17ಕ್ಕೂ ಹೆಚ್ಚು ಜನರು ಮೋಸ ಹೋಗಿದ್ದಾರೆ. 23 ಜನಕ್ಕೆ ಟಿಕೆಟ್ ಕೊಡಿಸ್ತೀವಿ ಅಂತ ಅವರಿಂದ ಹಣ ಪಡೆದಿದ್ದಾರೆ. 40 ಜನರು ಈ ಟಿಕೆಟ್ ಪಡೆಯುವ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. 185 ಕೋಟಿಯ ವ್ಯವಹಾರ ಇಲ್ಲಿ ಆಗಿದೆ. ಟಿಕೆಟ್ ನೀಡಿ ಕೋಟ್ಯಾಂತರ ಹಣ ಪಡೆಯಲಾಗಿದೆ. ಚೈತ್ರಾ ಕುಂದಾಪುರ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಅರಗ ಜ್ಞಾನೇಂದ್ರ ಜೊತೆ ನೇರ ಸಂಪರ್ಕ ಹೊಂದಿದ್ದಾರೆ ಅಂತ ಆರೋಪ ಮಾಡಿದರು.
ಪಿಎಸ್ ಐ ಹಗರಣಕ್ಕೂ ಚೈತ್ರಾಗೂ ಲಿಂಕ್?
ಮೈಸೂರು ಭಾಗದಲ್ಲೂ ಇಬ್ಬರು ಹಣ ಕೊಟ್ಟು ಕಳೆದುಕೊಂಡಿದ್ದಾರೆ. 9 ಜನರ ತಂಡದಿಂದ ಮೋಸದ ಕೃತ್ಯವಾಗಿದೆ. ಇವರೆಲ್ಲಾ ಬಿಜೆಪಿ ಹಾಗೂ ಅರ್ ಎಸ್ ಎಸ್ ಕಾರ್ಯಕರ್ತರು. ಬಿಜೆಪಿ ಹರಿಶ್ಚಂದ್ರನ ಮೊಮ್ಮಕ್ಕಳು ಅನ್ನುತ್ತಾರೆ. ಇವರ ಯೋಗ್ಯತೆ ಏನು ಅನ್ನೋದು ಬಹಿರಂಗಪಡಿಸಬೇಕು. ಪಿಎಸ್‌ಐ ಹಗರಣಕ್ಕೂ ಚೈತ್ರಾಗೂ ಸಂಬಂಧವಿದೆಯಾ ಅನ್ನೋ ಬಗ್ಗೆ ತನಿಖೆಯಾಗಬೇಕು ಸಿ ಟಿ ರವಿ, ಯಡಿಯೂರಪ್ಪ, ಸೂಲಿಬೆಲೆ ಜೊತೆ ಈಕೆಯ ಸಂಬಂಧ ಏನು ಅನ್ನೋದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಚೈತ್ರಾ ಪಿಎಸ್‌ಐ ಹಾಗೂ ನಾಲ್ಕಕ್ಕೂ ಹೆಚ್ಚು ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ. ಚೈತ್ರಾಗೆ ಜೈಲಿನಲ್ಲಿರುವ ಕೆಲವರ ಸಂಪರ್ಕ ಇದೆ. ಈ ಬಗ್ಗೆ ನಮ್ಮ ಸರ್ಕಾರದಿಂದ ಪ್ರಾಮಾಣಿಕ ತನಿಖೆ ಮಾಡಿಸುತ್ತೇವೆ ಎಂದು ಹೇಳಿದರು. ಬಿಜೆಪಿಯವರು ಅತ್ಯಂತ ಭ್ರಷ್ಟರು. ಯಡಿಯೂರಪ್ಪ ಚೆಕ್ ಮೂಲಕ ಹಣ ಪಡೆದವರು. ಕೆ ಎಸ್ ಈಶ್ವರಪ್ಪ ಗುತ್ತಿಗೆದಾರರಿಂದ ಹಣ ಪಡೆದ ಆರೋಪಿ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮೇಲೂ ಭ್ರಷ್ಟಾಚಾರದ ಆರೋಪವಿದೆ.
ಕೃಪೆ:ವಿಕ
Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";