ಭಗವಾನ್ ಬಾಹುಬಲಿ ಬಗ್ಗೆ ವಿವಾದಾತ್ಮಕ ಹೇಳಿಕೆ: ಅಥಣಿ ಜೈನ ಸಮಾಜದ ಮುಖಂಡರಿಂದ ಖಂಡನೆ

ಅಥಣಿ: ವಿಶ್ವದ ಅದ್ಭುತಗಳಲ್ಲೊಂದಾದ ಶ್ರವಣಬೆಳಗುಳದ ಏಕ ಶಿಲಾಮೂರ್ತಿ ಭಗವಾನ ಬಾಹುಬಲಿ ಸ್ವಾಮಿಯ ಬಗ್ಗೆ ಅಯೂಬ್ ಖಾನ್ ಎಂಬ ವ್ಯಕ್ತಿಯು ಜೈನ ಧರ್ಮ ಹಾಗೂ ಜೈನ ಧರ್ಮದ ಆರಾಧ್ಯ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು , ಇದು ಜೈನ ಧರ್ಮದ ನಿಂದನೆ ಹಾಗೂ ಸಮಾಜದಲ್ಲಿ ಸಾಮರಸ್ಯ ಕದಡುವ ಹೇಳಿಕೆ ಯಾಗಿದ್ದು, ಅಥಣಿ ಜೈನ ಸಮಾಜದ ವತಿಯಿಂದ ಈ ಹೇಳಿಕೆಯನ್ನು ಖಂಡಿಸುತ್ತೇವೆ. ಸಮಾಜದಲ್ಲಿ ಸಾಮರಸ್ಯ ಕದಡುವ ಇಂತಹ ಹೇಳಿಕೆ ನೀಡಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಅಥಣಿ ಜೈನ ಸಮಾಜದ ಒತ್ತಾಯಿಸಿದರು.

ಅವರು ಬುಧವಾರ ತಹಶೀಲ್ದಾರ್ ದುಂಡಪ್ಪ ಕೋಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ನಂತರ ಅಥಣಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕುಮಾರ್ ಹಾಡ್ಕಾರ ಅವರಿಗೆ ದೂರು ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಒಂದು ಧರ್ಮದ ಭಾವನೆಗಳ ಹಾಗೂ ನಮ್ಮ ದೇಶದ ಕೀರ್ತಿಯ ಕಳಸವಾಗಿರುವ ಗೊಮ್ಮಟೇಶನಿಗೆ ಬಟ್ಟೆ ಧರಿಸುವ ಬಗ್ಗೆ ಹೇಳಿಕೆ ನೀಡಿರುವುದು . ಜೈನ ಧರ್ಮಿಯರ ಭಾವನೆಗಳಿಗೆ ಧಕ್ಕೆ ತಂದಿರುತ್ತದೆ. ಆಯೂಬ್ ಖಾನ್ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಜೈನ ಸಮಾಜದ ಮುಖಂಡ ರಾಜು ನಾಡಗೌಡ ಮಾತನಾಡಿ ನಮ್ಮ ಜೈನ ಧರ್ಮದ ಆರಾಧ್ಯ ದೇವರಾದ ಭಗವಾನ ಬಾಹುಬಲಿ ಸ್ವಾಮಿಯ ಕುರಿತು ಮೈಸೂರಿನ ಅಯೂಬ್ ಖಾನ್ ಎಂಬ ಮುಸ್ಲಿಮ್ ವ್ಯಕ್ತಿ ಅವಹೇಳನಕಾರಿಯಾಗಿ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿರುವದು ಜೈನ ಧರ್ಮಿಯರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ. ಇಂತಹ ಘಟನೆಗಳು ಮರುಕಳಿಸಬಾರದು ಮತ್ತು ಈ ರೀತಿ ಹೇಳಿಕೆ ನೀಡಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ನ್ಯಾಯವಾದಿ ಕಲ್ಲಪ್ಪ ವಣಜೋಳ ಮಾತನಾಡಿ ಬಾಹುಬಲಿ ಮೂರ್ತಿಗೆ ಚಡ್ಡಿ ಹಾಕಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಅಯೂಬ್ ಖಾನ್ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಆತನ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ನೋವು ದೂರು ನೀಡಿದ್ದೇವೆ. ರಾಜ್ಯಾದ್ಯಂತ ಈ ವಿವಾದಾತ್ಮಕ ಹೇಳಿಕೆಯನ್ನು ಜೈನ ಮುಖಂಡರು ಖಂಡಿಸಿದ್ದಾರೆ. ರಾಜ್ಯ ಸರ್ಕಾರ ಅಯೂಬ್ ಖಾನ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಈ ಸಂಧರ್ಭದಲ್ಲಿ ಜೈನ ಸಮಾಜದ ಮುಖಂಡರಾದ ಅರುಣ್ ಯಲಗುದ್ರಿ, ಅಮರ ದುರ್ಗಣ್ಣವರ, ದೀಪಕ್ ಕಡೋಲಿ, ಅಶೋಕ ದಾನಗೌಡರ, ಅಪ್ಪಾಸಾಬ ಪಾಟೀಲ, ಅಶೋಕ ಪಡನಾಡ, ರಾಜೇಂದ್ರ ಪಾಟೀಲ್, ಶ್ರೀಕಾಂತ್ ಅಸ್ಕಿ, ಪುಷ್ಪಕ ಪಾಟೀಲ, ವಿದ್ಯಾಧರ ಡುಮ್ಮನವರ , ಅಮೂಲ ಕಾಂತೆ, ರಾಘವೇಂದ್ರ ಹಳಿಂಗಳಿ, ನೇಮಿನಾಥ ನಂದಗಾವ, ಬಸಗೌಡ ಮುಗ್ಗನವರಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ: ಅಬ್ಬಾಸ್ ಮುಲ್ಲಾ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";