‘Pay-CM ಬೆನ್ನಲೇ Say-CM’ ಎಂದು ಕೂಗಲು ಶುರುಮಾಡಿದ ಕಾಂಗ್ರೆಸ್

ರಾಜ್ಯ ಸರ್ಕಾರದ ಆಡಳಿತ ವೈಖರಿ ವಿರುದ್ಧ ಹರಿಹಾಯುತ್ತಿರುವ ಕರ್ನಾಟಕ ಕಾಂಗ್ರೆಸ್ ಇದೀಗ ಮತ್ತೊಂದು ಅಭಿಯಾನ ಶುರುಮಾಡಿದೆ. ಇಷ್ಟು ದಿನ Pay-CM ಮೂಲಕ ಬಿಜೆಪಿಗರ ಕಣ್ಣು ಕೆಂಪಾಗುವಂತೆ ಮಾಡಿದ್ದ ಕಾಂಗ್ರೆಸ್, ಈಗ ‘Say-CM‘ ಎಂದು ಕೂಗಲು ಶುರುಮಾಡಿದೆ!

ಹಗರಣಗಳ ತಲೆಗಳು, ಅಹಂಕಾರದ ಮುಖಗಳು-ಕಾಂಗ್ರೆಸ್.

ಹಗರಣಗಳ ತಲೆಗಳು, ಅಹಂಕಾರದ ಮುಖಗಳಿಗೆ ಕೇಳಿದ ಪ್ರಶ್ನೆಗಳಿಗೆ ಇನ್ನೂ ಉತ್ತರಿಸಿಲ್ಲ. ಒಂದು ಉತ್ತರಕ್ಕೆ ಇನ್ನೆಷ್ಟು ಪ್ರಶ್ನೆಗಳು ಬೇಕು. 50 ಪ್ರಶ್ನೆಗಳಿಗೆ ಉತ್ತರಿಸಲಾಗದ ನಿಮಗೆ 550 ಪ್ರಶ್ನೆಗಳ ಉತ್ತರಿಸುವ ತಾಕತ್ತಿದ್ಯಾ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಜೊತೆಗೆ ರಾಜ್ಯ ಸರ್ಕಾರದ ಹಲವು ಹಗರಣಗಳನ್ನ ಪ್ರಸ್ತಾಪಿಸಿ ಕಾಂಗ್ರೆಸ್ ಪ್ರಶ್ನೆಗಳ
ಶುರುಮಳೆಗೈದಿದೆ.

90 ಪರ್ಸೆಂಟ್ ವಚನ ವಂಚನೆ: ಬಿಜೆಪಿ 90 ಪರ್ಸೆಂಟ್ ವಚನ ವಂಚನೆ ಮಾಡಿದೆ ಎಂದು ಗೇಲಿ ಮಾಡಿದೆ. ಅಲ್ಲದೇ ನಾವು ಹಾಗೂ ಜನರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ಇದೆಯಾ ಎಂದು ಪ್ರಶ್ನೆ ಕಾಂಗ್ರೆಸ್ ಮಾಡಿದೆ. ಜೊತೆಗೆ ಈ ಎಲ್ಲಾ ವಿಚಾರಗಳನ್ನ
ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದೆ.

Say-CM ಅಭಿಯಾನದಲ್ಲಿ ಬಿಜೆಪಿಯ ಆಶ್ವಾಸನೆಗಳ ಪ್ರಸ್ತಾಪ..!

• ರಾಜ್ಯದ ಜವಳಿ ಮತ್ತು ಕರಕುಶಲ ಉತ್ಪನ್ನಗಳನ್ನ ಉತ್ತೇಜಿಸಲು ವಿಶ್ವದಾದ್ಯಂತ ಕಾವೇರಿ ಎಂಪೋರಿಯಂಗಳ ಸ್ಥಾಪನೆ.
• ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷೆ ಬೋಧಿಸುವುದು.

• ಸೌಲಭ್ಯ ಲಭ್ಯತೆಗೆ ಕಟ್ಟಡ ನಿರ್ಮಾಣ ಕಾರ್ಮಿಕರನ್ನ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಕೇಂದ್ರೀಯ ಒಕ್ಕೂಟಕ್ಕೆ ನೋಂದಿಯಿಸುತ್ತೇವೆ.

• 180 ದಿನಗಳಲ್ಲಿ ಕಬ್ಬು ಬೆಳಗಾರರ ಬಾಕಿ ಹಣವನ್ನು ಸಕ್ಕರೆ ಕಾರ್ಖಾನೆಗಳಿಂದ ಕೊಡಿಸಲಾಗುವುದು.

• ಸೋಲಿಗರ ಕಲ್ಯಾಣಕ್ಕಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಲು ರೂಪಾಯಿ 25 ಕೋಟಿ ನೀಡುತ್ತೇವೆ.

• ಕರ್ನಾಟಕದಲ್ಲಿ ಬಸವಳಿದಿರುವ ಜೈನ ಬಸದಿಗಳು ಹಾಗೂ ತೀರ್ಥಂಕರ ಪ್ರತಿಮೆಗಳನ್ನ ಮರು ಸ್ಥಾಪಿಸಯತ್ತೇವೆ.

• ಕೋಮು ಪ್ರೇತಿತ ಕೊಲೆಗಳ ಕ್ಷಿಪ್ರ ತನಿಖೆ ಹಾಗೂ ಕಾನೂನು ಕ್ರಮಕ್ಕೆ ಎಐಟಿ ಮತ್ತು ಫಾಸ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆ.
• ಅಡಿಕೆ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಅಡಿಕೆ ಮಂಡಳಿಯನ್ನ ಸ್ಥಾಪಿಸಲಾಗುವುದು.

• ತಿಪುಟೂರಿನಲ್ಲಿ ‘ಕಲ್ಪವೃಕ್ಷ’ ಹೆಸರಿನಡಿ ವಿಶ್ವದರ್ಜೆಯ ತೆಂಗು ಸಂಶೋಧನಾ ಕೇಂದ್ರವನ್ನ ಸ್ಥಾಪಿಸಲಾಗುವುದು ಎಂದಿದ್ದ ಬಿಜೆಪಿಗೆ ಉತ್ತರ ಇದೆಯಾ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";