ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ವಿನಯ
ಕುಲಕರ್ಣಿ ಹೆಸರು ಅಂತಿಮಗೊಳಿಸಿದ
ಕಾಂಗ್ರೆಸ
ಧಾರವಾಡ: ಮೇ 10 ರಂದು ನಡೆಯುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ
ಕಾಂಗ್ರೆಸ್ ಪಕ್ಷ ಇಂದು ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಧಾರವಾಡ ಗ್ರಾಮೀಣ ಮತ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವರು ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡ ವಿನಯ
ಕುಲಕರ್ಣಿ ಅವರ ಹೆಸರನ್ನು ಅಂತಿಮಗೊಳಿಸಿದೆ.
ಇವರು ಶಿಗ್ಗಾಂವಿ ಮತಕ್ಷೇತ್ರದಿಂದ ಸ್ಪರ್ಧೆ
ಮಾಡಲಿದ್ದಾರೆ ಎಂಬ ಗುಮಾನಿಗೆ ತೆರೆ ಎಳೆಯಲಾಗಿದೆ
ಧಾರವಾಡ ಗ್ರಾಮೀಣ ಮತಕ್ಷೇತ್ರದಿಂದ
ಸ್ಪರ್ಧೆ ಮಾಡುವಂತೆ ವಿನಯ ಕುಲಕರ್ಣಿ ಅವರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹೀಗಾಗಿ 2018 ರಲ್ಲಿ ಜರುಗಿದ ಚುನಾವಣೆಯಂತೆ ಈ ವರ್ಷ ಸಹ ಧಾರವಾಡ ಗ್ರಾಮೀಣ ಕ್ಷೇತ್ರದ ರಾಜಕೀಯ ರಣಕಣ ರಂಗೇರಲಿದೆ.
ವಿನಯ ಕುಲಕರ್ಣಿ ಅವರಿಗೆ ಧಾರವಾಡ ಗ್ರಾಮೀಣ
ಕ್ಷೇತ್ರದಿಂದಲೇ ಟಿಕೆಟ್ ನೀಡಬೇಕು ಎಂದು ಅವರ
ಅಭಿಮಾನಿಗಳು ಇತ್ತೀಚೆಗೆ ಅವರ ಮನೆ ಎದುರು
ಉಪವಾಸ ಸತ್ಯಾಗ್ರಹ ಮಾಡಿದ್ದರು. ಇವುಗಳ ನಡುವೆ ವಿನಯ ಕುಲಕರ್ಣಿ ಅವರು ಧಾರವಾಡ
ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧೆ ನಡೆಸಲು ಒಪ್ಪಿಗೆ ಬಂದಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಂತಾಗಿದೆ. ಈ ಬಾರಿ ವಿನಯ ಕುಲಕರ್ಣಿ ಅವರ ಗೆಲವು ಕಟ್ಟಿಟ್ಟ ಬುಟ್ಟಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಕಾನೂನು ಕಂಟಕದಿಂದ ಅವರು ಜಿಲ್ಲೆಯಲ್ಲಿ ಬರುವಂತಿಲ್ಲಾ. ಅವರು ಹೊರಗಿದ್ದುಕೊಂಡು ಚುನಾವಣೆ ಎದುರಿಸುತ್ತಾರೋ ಅಥವಾ ಅವರಿಗೆ ಧಾರವಾಡ
ಜಿಲ್ಲಾ ಪ್ರವೇಶಕ್ಕೆ ಅನುಮತಿ ಸಿಗಲಿದೆಯೋ ಎಂದು ಕಾದು ನೋಡಬೇಕಾಗಿದೆ.