ಬೆಳಗಾವಿ: ಅಮಾಯಕ ಶಿಕ್ಷಕನಿಂದ ಹಣ ಪಡೆದು ಕೋಲೆ ಬೆದರಿಕೆ ಮತ್ತು ಅಧಿಕಾರ ದುರುಪಯೋಗ ಪಡೆಸಿಕೊಂಡ ಆರೋಪದಡಿ ಬೆಳಗಾವಿ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯಕುಮಾರ ಹೆಬಳಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸಿಂಧೂರಲಕ್ಷ್ಮಣ್ ವಲ್ಲೆಪೂರಕರ ಅವರು ಶಿಕ್ಷಣ ಇಲಾಖೆಗೆ ದೊರು ಸಲ್ಲಿಸಿದ್ದಾರೆ.
ಬೆಳಗಾವಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಜಯಕುಮಾರ ಹೆಬಳಿ ಅವರು ತಮ್ಮ ಅಧಿಕಾರದ ಪ್ರಭಾವ ಬೆಳೆಸಿಕೊಂಡು ಅಮಾಯಕ ಶಿಕ್ಷಕರಬ್ಬರನ್ನು ಅಮಾನತು ಮಾಡಿಸಿ ಅವರಿಂದ ಹಣ ಪಡೆದುಕೊಂಡ ಬಗ್ಗೆ ಸಾಮಾಜಿಕ ಜಾಲತಾನಗಳಲ್ಲಿ ಸಾಕ್ಷಷ್ಟು ಸುದ್ದಿ ಹರಿದಾಡಿವೆ. ಮತ್ತು ದೈಹಿಕ ಶಿಕ್ಷಕನಾಗಿದ್ದು ಮಕ್ಕಳಿಗೆ ಕ್ರೀಡಾ ಭೋದನೆ ಮಾಡದೆ, ಜನಪ್ರತಿನಿಧಿಗಳಂತೆ ಪ್ರತಿ ದಿನ ಕಾರ್ಯಕ್ರಮಗಳಲ್ಲಿ ಭಾಗ ವಹಿಸಿ ಭಾಷನ ಮಾಡುತ್ತಾ ಸರಕಾರದ ಸಂಬಳ ದುರುಪಯೋಗ ಬಳಿಸಿಕೊಳುತ್ತಿದ್ದಾನೆ.
ಅಲ್ಲದೇ ಅಂಗವಿಕಲ ಶಿಕ್ಷಕನಿಂದ ರೂ.60,000/- ಹಣ ಪಡೆದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದು, ಆ ಅಂಗವಿಕಲ ಶಿಕ್ಷಕ ಜೀವ ಬಯದಿಂದ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ತನಿಖೆ ಕೈಕೊಂಡು ಅಮಾಯಕರಿಂದ ಹಣ ಪಡೆದು ಶೋಕಿ ಮಾಡುತ್ತಿರುವ ಜಯಕುಮಾರ ಹೆಬಳಿ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಸೆಪ್ಟೆಂಬರ್ 29 ರಂದು ಶಿಕ್ಷಣ ಇಲಾಖೆ ಆಯುಕ್ತರಿಗೆ ದೂರು ಕೊಟ್ಟಿದ್ದಾರೆ.
ಇದಲ್ಲದೇ ಸಾಕಷ್ಟು ಮಾಧ್ಯಮದಲ್ಲಿ ಈ ಕುರಿತು ವರದಿಯಾಗಿದ್ದು,ಸಿಂಧೂರಲಕ್ಷ್ಮಣ ಅವರು ಕೂಡ ದೂರು ಕೊಟ್ಟು ಮೂರು ವಾರ ಕಳೆದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ವಿಪರ್ಯಾಸ.
ಈ ಪ್ರಕರಣದ ದಿಕ್ಕು ತಪ್ಪಿಸಲು ಅಧ್ಯಕ್ಷ ಜಯಕುಮಾರ ಹೆಬಳಿ ಸಂಘದ ಲೆಟರ್ ಹೆಡ್ ಮೂಲಕ ಆರೋಪ ಮಾಡಿದವರ ಮೇಲೆ ನ್ಯಾಯಾಲಕ್ಕೆ ಹೋಗಲು ಅನುಮತಿ ಕೋರಿ ಇಲಾಖೆಗೆ ಮನವಿ ಸಲ್ಲಿಸಿ ಮುಗ್ಧ ನೌಕಕರ ಮನ ಸಳೆಯುವ ಹುನ್ನಾರ ಮಾಡಿದ್ದಾರೆ.
ಇನ್ನಾದರೂ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುತ್ತಾರೆಯೇ ಎಂದು ಕಾದುನೋಡಬೇಕಾಗಿದೆ.