ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ದಿನವನ್ನ ದಾಸೋಹ ದಿನವನ್ನಾಗಿ ಘೋಷಣೆ: ಸಿಎಂ ಬೊಮ್ಮಾಯಿ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ತುಮಕೂರು: ಸಿದ್ದಗಂಗಾ ಮಠದ ನಡೆದಾಡುವ ದೇವರೆಂದೇ ಪ್ರಸಿದ್ದಿಯಾದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಲಿಂಗೈಕ್ಯರಾದ ದಿನವನ್ನ “ದಾಸೋಹ ದಿನ” ವನ್ನಾಗಿ ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು

ಸಿದ್ದಗಂಗಾ ಮಠದಲ್ಲಿ ಶ್ರೀಗಳ ಗದ್ದುಗೆಗೆ 2 ನೇ ವರ್ಷದ “ಲಕ್ಷ ಪುಷ್ಪ ಬಿಲ್ವಾರ್ಜನೆ” ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ನಾನು ಸಾಕಷ್ಟು ಬಾರಿ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದಿದ್ದೇನೆ ಅವರು ಮಾಡಿರೋ ಸೇವೆ ಅನನ್ಯ. ಆಧುನಿಕ ಭಾರತದಲ್ಲಿ ಅವರು ಮಾಡಿದ ಸೇವೆಯ ಸಮಯದಲ್ಲಿ ನಾವು ನೀವು ಇರುವುದೇ ಅದೃಷ್ಟ.

ದಾಸೋಹ ದಿನದ ಆಚರಣೆಯ ರೂಪುರೇಷಗಳನ್ನ ಸಿದ್ದಲಿಂಗ ಶ್ರೀಗಳ ಜೊತೆ ಚರ್ಚಿಸಲಾಗುವುದು ಎಂದರು.

 

Share This Article
";