ಲಿಂಗಸುಗೂರು ಸಿ .ಪಿ.ಐ ಮಹಾಂತೇಶ ಸಜ್ಜನ್ ನೇತೃತ್ವದಲ್ಲಿ ಮುದಗಲ್ಲ ಕೋಟೆಯ ಸ್ವಚ್ಚತಾ ಕಾರ್ಯ.

ಉಮೇಶ ಗೌರಿ (ಯರಡಾಲ)

ಮುದಗಲ್ಲ : ಕೋಟೆ ಸ್ವಚ್ಛತೆಗೆ ದಿನದಿಂದ ದಿನಕ್ಕೆ ಸಂಘ, ಸಂಸ್ಥೆಗಳು ವಿವಿಧ ಇಲಾಖೆ ಅಧಿಕಾರಿಗಳು ಸ್ವಚ್ಛತೆಗೆ ಮುಂದಾಗಿದ್ದಾರೆ.

ಲಿಂಗಸುಗೂರು ಸಿ.ಪಿ.ಐ ಮಹಾಂತೇಶ ಸಜ್ಜನ್ ನೇತೃತ್ವದಲ್ಲಿ 1996/1997 ರ ಸಾಲಿನ ಎಸ್ಸೆಸ್ಸೆಲ್ಸಿ ಗೆಳೆಯರ ಜತೆ ಸ್ವಚ್ಚತಾ ಕಾರ್ಯ ಇಂದು ನಡೆಯಿತು.

ಕಳೆದ ಅನೇಕ ದಿನಗಳಿಂದ ಹಲವಾರು ಸಂಘ ಸಂಸ್ಥೆಯವರು, ಮಾಜಿ ಯೋಧರು, ಮಾಜಿ ಶಾಸಕರಾದ ದಿವಂಗತ ಎಂ. ಗಂಗಣ್ಣ ಅಭಿಮಾನಿ ಬಳಗದ ವತಿಯಿಂದ ಕೋಟೆ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಐತಿಹಾಸಿಕ ಕೋಟೆಯ ಉಳಿವಿಗಾಗಿ ತಮ್ಮ ಶ್ರಮದಾನ ಮಾಡಿದ್ದಾರೆ. ಇದಕ್ಕೆ ಜನರಿಂದ ಹೆಚ್ಚಿನ ಸ್ಪಂದನೆ ಸಿಗುತ್ತಿದ್ದು, ಮಹಾಂತೇಶ ಸಜ್ಜನ್ ಲಿಂಗಸುಗೂರು ಸಿ .ಪಿ.ಐ ಅವರ ನೇತೃತ್ವದಲ್ಲಿ ಅವರ 1996/1997 ನೇ ಸಾಲಿನ 10 ನೇ ತರಗತಿಯ ಗೆಳೆಯರ ಬಳಗದ ವತಿಯಿಂದ ಮುದಗಲ್ ಕೋಟೆ ಸ್ವಚ್ಛತಾ ಕಾರ್ಯ ಮಾಡಲಾಯಿತು.

ಪ್ರತಿಯೊಬ್ಬರು ತಮ್ಮ ಸ್ವಯಂ ಪ್ರೇರಿತರಾಗಿ ಕೋಟೆಯ ಸ್ವಚ್ಛಗೊಳಿಸಿದಲ್ಲಿ ಕೋಟೆಯ ಸಂಪೂರ್ಣ ಸ್ವಚ್ಛವಾಗಿ ಸುಂದರ ತಾಣವಾಗಲು ಸಾಧ್ಯವಿದೆ ಎಂದು ಸಿಪಿಐ ಮಹಾಂತೇಶ ಸಜ್ಜನ್ ಹೇಳಿದರು.

ಸಂತೋಷ ಕುಮಾರ್, ಚಂದ್ರ ಕಾಂತ ವಿಶ್ವಕರ್ಮ,ನಿಲಕಂಠ ಜರಕಲ್ ,ಮಾರುತಿ,ಆರೋಗಪ್ಪ,ಶ್ರೀಲೇಶ ಚತ್ರಗಾರ,ವೀರಯ್ಯ ಹಳೆಪೇಟೆ,ಸುರೇಶ ಚಲುವಾದಿ, ಹುಸೇನ್, ಅಬ್ದುಲ್, ಅಂಬಕ್ಕ ಜೀಡಿ,ಸುದಾ,ಮಮತಾ,ದೀಪಾ ಶಟ್ಟಿ,ನಾಗರಾಜ್ ಕುಂಬಾರ, ಸ್ಥಳೀಯರಾದ ಗುರು ಬಸಪ್ಪ ಸಜ್ಜನ್, ಅಶೋಕ ಗೌಡ ಪಾಟೀಲ್, ಎಸ್ ಎ ನಹೀಮ್,ನಾಗರಾಜ್ ತಳವಾರ, ಮೈಬುಪಾಶ ಬಾರಿಗಿಡ, ಮಲ್ಲಪ್ಪ ಮಾಟೂರು ಇತರರು ಉಪಸ್ಥಿತರಿದ್ದರು

ವರದಿ: ಮಂಜುನಾಥ ಕುಂಬಾರ

Share This Article
";