ಬ್ರೇಕಿಂಗ್ ನ್ಯೂಸ್: ಮಧ್ಯಪ್ರದೇಶದಲ್ಲಿ ತರಬೇತಿ ನಿರತ ಯುದ್ಧ ವಿಮಾನ ಪತನ

ಉಮೇಶ ಗೌರಿ (ಯರಡಾಲ)

ನವದೆಹಲಿ: ತರಬೇತಿ ನಿರತ ಭಾರತೀಯ ವಾಯು ಸೇನೆಯ ಮೀರಜ್‌-2000 ವಿಮಾನ ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ಸ್ವಲ್ಪ ಸಮಯದ ಹಿಂದೆ ಪತನಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ದುರ್ಘಟನೆಯಲ್ಲಿ ಪೈಲಟ್ ಸುರಕ್ಷಿತವಾಗಿ ಪ್ಯಾರಾಚೂಟ್ ಮುಖಾಂತರ ಹೊರಗೆ ಹಾರಿದ್ದು, ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ಭಾರತೀಯ ವಾಯುಪಡೆ ಟೈಟ್ ಮೂಲಕ ತಿಳಿದು ಬಂದಿದೆ. ಮೂಲಗಳ ಪ್ರಕಾರ, ಪೈಲಟ್‌ಗೆ ತರಬೇತಿ ನೀಡುತ್ತಿದ್ದಾಗ ಯುದ್ಧ ವಿಮಾನವು ಭಿಂದ್ ನಗರ ಭಾಗದಿಂದ ಆರು ಕಿ.ಮೀ ದೂರದಲ್ಲಿ ಪತನಗೊಂಡಿದೆ.ಇದರಿಂದಾಗಿ ಭಾರೀ ಅನಾಹುತ ತಪ್ಪಿದೆ.

ಮೀರಜ್‌-2000 ಯುದ್ಧ ವಿಮಾನವು ಗ್ವಾಲಿಯರ್ ಏರ್ ಬೇಸ್‌ನಿಂದ ಹೊರಟಿತ್ತು. ಘಟನಾ ಸ್ಥಳಕ್ಕೆ ತನಿಖಾ ಅಧಿಕಾರಿಗಳು ದೌಡಾಯಿಸಿದ್ದಾರೆ. ಪತನಗೊಳ್ಳಲು ಕಾರಣವೇನು ಎಂದು ತನಿಖೆ ನಡೆದಿದೆ.

 

Share This Article
";