ಮುಖ್ಯ ಮಂತ್ರಿಯಾಗಲು ಸ್ವಜಾತಿಯವರಿಂದಲೇ ವಿರೋಧ ಸಮಸ್ತ ಅಂಗಾಯತ ಹೋರಾಟ ವೇದಿಕೆ ಮುಖ್ಯಸ್ಥ : ಬಿ, ಎಮ್ ಚಿಕ್ಕನಗೌಡರ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಬೆಳಗಾವಿ ಡಿ 23: “(ನಿರಾ) ಆನೆ ಸಾಗುತ್ತಿದೆ ಸ್ಟಾನ ಬೊಗಳಿತ್ತಿದೆ” ಎಂಬ ಗಾದೆಮಾತು ನೆನಪಿಗೆ ಬರುತ್ತಿದೆ. ಪಂಚಮಸಾಲಿ ಸಮಾಜದವರು ಮುಖ್ಯಮಂತ್ರಿ ಆಗುವುದಾದರೆ ಪಂಚಮಸಾಲಿ ಸಮಾಜ ನಾಯಕರೆಂದು ಬಿಂಬಿಸಿಕೊಳ್ಳುವವರು ಬಹಿರಂಗವಾಗಿ ಟೀಕಿಸಿದಾಗ ಈ ಗಾದೆ ಮಾತು ನೆನಪಿಸುತ್ತದೆ.

ಭ್ರಷ್ಟರು ಸುಳ್ಳು ಹೇಳುವವರು ಮುಖ್ಯ ಮಂತ್ರಿ ಆಗಬಾರದು ಎನ್ನುವದಾದರೆ ಚುನಾಯಿತ ಪ್ರತಿನಿಧಿಗಳ ಮೇಲಿನ ಶೇ. 40ರ ಭ್ರಷ್ಟಾಚಾರ ಆರೋಪ ಕುರಿತು ಪಕ್ಷಕ್ಕೂ ರಾಜ್ಯಕ್ಕು ಒಳ್ಳೆಯ ಹೆಸರು ಬರಬೇಕಾದರೆ ಸದನದಲ್ಲಿ ತೆಪ್ಪಗೆ ಕುಳಿತುಕೊಳ್ಳದೇ ಮಾತನಾಡಿರಿ. ಭ್ರಷ್ಟರಲ್ಲದ ಸುಳ್ಳಹೇಳದ ಶಾಸಕ ಸಂಸದರು ಇದ್ದಾರೆಯೇ? ಯೋಗ್ಯತೆ ಇದ್ದರೆ ನೀವು ಮುಖ್ಯ ಮಂತ್ರಿಯಾಗಿ ನಿಮ್ಮನ್ನು ಪಂಚಮಸಾಲಿ ಸಮಾಜದ ಪರವಾಗಿ ಸ್ವಾಗತಿಸುತ್ತೇವೆ. ಪಂಚಮಸಾಲಿಯವರಿಗೆ 2ಎ ಮೀಸಲಾತಿ ಪಟ್ಟಿಯಲ್ಲಿ ಸೇರಿಸುವುದು ಇತ್ಯರ್ಥವಾಗದೆ ಇರುವಾಗ ಪ್ರಬಲ ಮಾರಾಠಾ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಸದನದಲ್ಲಿ ಮಾತನಾಡಿದ್ದೀರಿ ಇನ್ನುಳಿದ ಲಿಂಗಾಯತ ಒಳಪಂಗಡಗಳನ್ನು 2ಎ ಮೀಸಲಾತಿಗೆ ಸೇರಿಸುವಂತೆಯೂ ಒತ್ತಾಯಿಸುತ್ತಿರಿ. ಶೇ 5ರ 22 ಮೀಸಲಾತಿಗೆ 3ಬಿ ಯಲ್ಲಿರುವ ಎಲ್ಲಾ ಸಮುದಾಯ ಸೇರಿಸುವದಾದಲ್ಲಿ 3ಬಿ ಮೀಸಲಾತಿ ಪಟ್ಟಿಯ ಶೇ. 5 ಮೀಸಲಾತಿ ಯಾರಿಗೆ?’

ಸಚಿವ ಮುರುಗೇಶ ನಿರಾಣಿ

ಮೂರು ಲಕ್ಷದ ಸೂಟು ಹೊಲಿಸಿದವರು ಸಿಎಂ ಆಗುವುದಿಲ್ಲಾ ಎಂದು ಟೀಕಿಸಿದ್ದೀರಿ ಶ್ರೀ.ಮುರಗೇಶ ನಿರಾಣಿಯವರು ಐದು ಲಕ್ಷದ ಸೂಟು ಧರಿಸುತ್ತಾರೆ ಇನ್ನೂ ಹತ್ತು ಶುಗರ್ ಫ್ಯಾಕ್ಟರಿ ಖರೀದಿಸುತ್ತಾರೆ ನೀವೂ ಅವರಿಗೆ ನಿಮ್ಮ ಕೈಯಿಂದ ಹಣ ನೀಡುತ್ತಿರಾ ಎಂದು ವೇದಿಕೆಯ ಮುಖ್ಯ ಸಂಘಟಕರಾದ ಶ್ರೀ.ಬಿ.ಎಂ, ಚಿಕ್ಕನಗೌಡರ ಪ್ರಶ್ನಿಸಿದ್ದಾರೆ. ಸಿ.ಎಂ. ಆಗುವೇ ಎಂದು ಹುಚ್ಚನಂತೆ ಒಬ್ಬ ಓಡಾಡುತ್ತಿದ್ದಾನೆ ಎಂದು ನಿರಾಣಿಯವರಿಗೆ ನೀವು ಅಪರೋಕ್ಷವಾಗಿ ಹೇಳಿಕೆ ನೀಡಿದ್ದೀರಿ. ನಿರಾಣಿಯವರು ಇದುವರೆಗೆ ಬಹಿರಂಗವಾಗಿ ಎಲ್ಲಿಯೂ ತಾವು ಮುಂದೆ ಮುಖ್ಯ ಮಂತ್ರಿಗಳಾಗುವುದಾಗಿ ಹೇಳಿಕೆ ನೀಡಿಲ್ಲ. ಆ ರೀತಿಯಾದ ಹೇಳಿಕೆಯನ್ನು ಹಿಂದೆ ನೀವೇ ನೀಡಿರುತ್ತೀರಿ ಎಂದು ಆಗ್ರಹಿಸಿರುತ್ತಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";