ಮುತ್ತಿಗೆ ಮುಷ್ಕರ ಗಲಾಟೆ ಮಾಡಿ ಸುವರ್ಣ ವಿಧಾನ ಸೌಧವನ್ನು ಸತ್ಯಾಗ್ರಹ ಸೌಧವನ್ನಾಗಿಸಿದ್ದಾರೆ:-ಬಿ.ಎಂ.ಚಿಕ್ಕನಗೌಡರ

ಬಿ.ಎಂ.ಚಿಕ್ಕನಗೌಡರ
ಉಮೇಶ ಗೌರಿ (ಯರಡಾಲ)

ಬೆಳಗಾವಿ( ಡಿ.04):ಕೇಂದ್ರ ಸರ್ಕಾರ ರೈತ ವಿರೋಧಿ 3 ಕೃಷಿ ಮಸೂದೆಗಳನ್ನು ಶಾಸನಬದ್ದವಾಗಿ ಹಿಂಪಡೆಯಲಾಗಿದ್ದು ರಾಜ್ಯದಲ್ಲಿಯು ವಾಪಸ್ ಪಡೆಯುವದು ಮುಖ್ಯಮಂತ್ರಿಗಳಿಗೆ ಅನಿವಾರ್ಯವಾಗಿದೆ. ಈ ಕುರಿತು ಒತ್ತಾಯಿಸಬೇಕೆ ಹೊರತು ಮುತ್ತಿಗೆ ಹಾಕುವುದರಿಂದ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಸಿಗಲಾರದು ಎಂದು ಸಮಸ್ತ ಲಿಂಗಾಯತ ಹೋರಾಟ ವೇದಿಕೆಯ ಮುಖ್ಯ ಸಂಘಟಿಕರಾದ ಬಿ.ಎಂ.ಚಿಕ್ಕನಗೌಡರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರವು ಶಾಸನಬದ್ಧವಾಗಿ ರೈತ ವಿರೋಧಿ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದೆ. ಅದೇ ರೀತಿ ರಾಜ್ಯ ಸರ್ಕಾರವು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ವಾಪಸ್ ಪಡೆಯುವಂತೆ ಆಗ್ರಹಿಸಿ ಡಿ 13ರಂದು ವಿಧಾನ ಮಂಡಲ ಚಳಿಗಾಲದ ಅಧಿವೇಶನದ ವೇಳೆ ಬೆಳಗಾವಿ ಸುವರ್ಣ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ದಿನಪತ್ರಿಕೆಯೊಂದಕ್ಕೆ ತಿಳಿಸಿದ್ದರು.

ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂಬ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ರಚಿಸಲಾಗಿದ್ದು ಈ ಹಿಂದೆ ಅಧಿವೇಶನ ನಡೆದಾಗಲೆಲ್ಲ ಸತ್ಯಾಗ್ರಹ ಮುತ್ತಿಗೆ ಗಲಾಟೆ ಇದರಲ್ಲಿಯೇ ಅಮೂಲ್ಯ ಸಮಯ ವ್ಯರ್ಥವಾಗುತ್ತಿತ್ತು. ಕಳೆದ ಎರಡು ವರ್ಷಗಳಿಂದ ಕೊರೋನಾ ಮಾರಿಯಿಂದ ಅಧಿವೇಶನ ನಡೆದಿಲ್ಲಾ.

ದಕ್ಷಿಣದ ಪ್ರಮುಖ ಹೋರಾಟಗಾರರು ಬೆಂಗಳೂರಿನ ಅಧಿವೇಶನ ನಡೆದಾಗ ಮೌನ ಸಮ್ಮತಿ ನೀಡಿ ಬೆಳಗಾವಿ ಅಧಿವೇಶನ ನಡೆದಾಗಲೆಲ್ಲ ‌ಮುತ್ತಿಗೆ ಮುಷ್ಕರ ಗಲಾಟೆ ಮಾಡಿ ಸುವರ್ಣ ವಿಧಾನ ಸೌಧವನ್ನು ಸತ್ಯಾಗ್ರಹ ಸೌಧವನ್ನಾಗಿಸಿದ್ದಾರೆ.

ಉತ್ತರ ಕರ್ನಾಟಕದವರು ಮುಖ್ಯಮಂತ್ರಿಗಳಾಗಿ ಅಧಿವೇಶನ ಎದುರಿಸಿತ್ತಿರುವ ಸಂದರ್ಭದಲ್ಲಿ ಸಮಸ್ಯೆಗಳ ಕುರಿತು ಸಾಹಾನುಭೂತಿಯಿಂದ ವರ್ತಿಸುವಂತೆ ಹೋರಾಟಗಾರರಲ್ಲಿ ಸಮಸ್ತ ಲಿಂಗಾಯತ ಹೋರಾಟ ವೇದಿಕೆಯ ಮುಖ್ಯ ಸಂಘಟಿಕರಾದ ಬಿ.ಎಂ.ಚಿಕ್ಕನಗೌಡರ ವಿನಂತಿಸಿದ್ದಾರೆ.

Share This Article
";