ಲಾಡ್ಜ್‌ವೊಂದರಲ್ಲಿ ಯುವತಿಯೊಂದಿಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ:ಬಿಜೆಪಿ ಮಖಂಡ

ಉಮೇಶ ಗೌರಿ (ಯರಡಾಲ)

ಮೈಸೂರು : ಚಿನ್ನದ ಅಂಗಡಿ ಮಾಲೀಕ, ಬಿಜೆಪಿ ಮಖಂಡ ಜಗನ್ನಾಥ ಶೆಟ್ಟಿ ಹನಿಟ್ರ್ಯಾಪ್ ಸುಳಿಗೆ ಸಿಲುಕಿ, 50 ಲಕ್ಷ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಅವರು ಸಲ್ಮಾ ಭಾನು ವಿರುದ್ಧ ಕೇಸ್‌ ದಾಖಲಿಸಿದರು,ಆಕೆಯನ್ನು ಪೊಲೀಸು ಅರೆಸ್ಟ್ ಸಹ ಮಾಡಿದ್ದಾರೆ. ಆದ್ರೆ, ಇದೀಗ ಇದೇ ಬಿಜೆಪಿ ಮಖಂಡ ಜಗನ್ನಾಥ ಶೆಟ್ಟಿ ಯುವತಿಯೊಂದಿಗೆ ಲಾಡ್ಜ್‌ವೊಂದರಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದು, ವಿಡಿಯೋ ಫುಲ್ ವೈರಲ್ ಅಗಿದೆ. ಹೌದು..ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಮುಖಂಡ, ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಶೆಟ್ಟಿ, ಮಂಡ್ಯದ ಶ್ರೀನಿಧಿ ಗೋಲ್ಡ್​ ಮಾಲೀಕ ಜಗನ್ನಾಥ್ ಶೆಟ್ಟಿ ಮೈಸೂರಿನ ಲಾಡ್ಜ್‌ವೊಂದರಲ್ಲಿ ಯುವತಿಯೊಂದಿಗೆ ಇರುವುದರನ್ನು ಸಲ್ಮಾ ಗ್ಯಾಂಗ್ ರೆಡ್​ ಹ್ಯಾಂಡ್‌ ಆಗಿ ಹಿಡಿದಿದೆ.

ಕಾಲೇಜ್ ಲೆಕ್ಚರರ್ ಎಂದು ಹೇಳಿಕೊಂಡು ಟ್ಯೂಷನ್‌ ಹೇಳಿಕೊಡುತ್ತೇನೆ ಎಂದ ಯುವತಿಯನ್ನು ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದಾರೆ. ಯುವತಿ ಜೊತೆ ಜಗನ್ನಾಥ್ ಇರುವ ವಿಚಾರ ತಿಳಿದು ಅಲರ್ಟ್ ಆದ ಸಲ್ಮಾ ಗ್ಯಾಂಗ್​​ ತಕ್ಷಣ ಮೈಸೂರಿನ ದರ್ಶನ್ ಲಾಡ್ಜ್‌ಗೆ ನುಗ್ಗಿದ್ದಾರೆ. ಒಳ ನುಗ್ಗುತ್ತಿದ್ದಂತೆ ಗ್ಯಾಂಗ್ ವಿಡಿಯೋ ಚಿತ್ರೀಕರಣ ಮಾಡಿದ್ದು, ಯುವತಿ, ಜಗನ್ನಾಥ ಶೆಟ್ಟಿಗೆ ಮನಬಂದಂತೆ ಥಳಿಸಿದ್ದಾರೆ. ಯುವತಿಯೊಂದಿಗೆ ಇರುವ ವಿಡಿಯೋ ಫುಲ್ ವೈರಲ್ ಆಗಿದೆ.ಈ ಹಿನ್ನೆಲೆಯಲ್ಲಿ ಈ ಹಿಂದೆ ಹನಿಟ್ರ್ಯಾಪ್ ಕೇಸ್ ನೀಡಿದ್ದ ಜಗನ್ನಾಥ ಶೆಟ್ಟಿ ನಡೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

 

Share This Article
";