ಹಿಂಡಲಗಾ ಜೈಲಿನಿಂದ ಬಿಜೆಪಿ ಸದಸ್ಯ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಿಡಿಯೋ ಕಾಲ್‌ ಮೂಲಕ ಭಾಗಿ

ಉಮೇಶ ಗೌರಿ (ಯರಡಾಲ)

ಬೆಳಗಾವಿ: ಜೈಲಿನಿಂದಲೇ ಆರೋಪಿಯೊಬ್ಬ ವಿಡಿಯೋ ಕಾಲ್ ಮೂಲಕ ಪುರಸಭೆ ಸಾಮಾನ್ಯ ಸಭೆಗೆ ಹಾಜರಾಗಿ ತನ್ನ ವಾರ್ಡ್ ಕುರಿತು ಸಭೆಯಲ್ಲಿ ಚರ್ಚೆ ನಡೆಸಿರುವ ಘಟನೆ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪುರಸಭೆಯ 14ನೇ ವಾರ್ಡ್​ನ ಬಿಜೆಪಿ ಸದಸ್ಯ ಉಮೇಶ ಕಾಂಬಳೆ ಎಂಬ ಆರೋಪಿ ಸಾಮಾನ್ಯ ಸಭೆಯಲ್ಲಿ ವಿಡಿಯೋ ಕಾಲ್​ ಮೂಲಕ ಭಾಗಿಯಾಗಿದ್ದಾರೆ.

ಕಳೆದ ಎಂಟು ತಿಂಗಳ ಹಿಂದೆ ಕಂಟ್ರಿ ಪಿಸ್ತೂಲ್ ಬಳಸಿ ಗುಂಡಿಕ್ಕಿ ಮಹಿಳೆಯ ಕೊಲೆ ಆರೋಪದಲ್ಲಿ ಬೆಳಗಾವಿ ಹಿಂಡಲಗಾ ಕಾರ್ಯಗೃಹದಲ್ಲಿರುವ ಬಿಜೆಪಿ ಸದಸ್ಯ ಉಮೇಶ ಕಾಂಬಳೆ ಕೋರ್ಟ್ ಅನುಮತಿ ಪಡೆದುಕೊಂಡು ಸಾಮಾನ್ಯ ಸಭೆಗೆ ವಿಡಿಯೋ ಕಾಲ್ ಮೂಲಕ ಹಾಜರಾಗಿದ್ದಾರೆ.

ನ್ಯಾಯಾಲಯದ ಅನುಮತಿ ಮೇರೆಗೆ ಸಭೆಗೆ ವಿಡಿಯೋ ಕಾಲ್ ಮೂಲಕ ಹಾಜರಾದ ಆರೋಪಿ ಉಮೇಶ ಕಾಂಬಳೆ ಸಭೆಯಲ್ಲಿ ತನ್ನ ವಾರ್ಡ್ ಕೆಲಸಗಳು ಆಗುತ್ತಿಲ್ಲ ಎಂದು ಸಭೆಯಲ್ಲಿ ತಿಳಿಸಿದ್ದಾರೆ.

Share This Article
";