ಲಿಂಗಸೂಗೂರ: ತಾಲೂಕಿನ ನಾಗರಹಾಳ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ 5 ಲಕ್ಷ ವೇಚ್ಚದ ಸಿ ಸಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ ಎಂದು ನಾಗರಹಾಳದ ಭೀಮ್ ಆರ್ಮಿ ಘಟಕ ಅಧ್ಯಕ್ಷ ನಾಗರಾಜ ಚಲವಾದಿ ಆರೋಪಿಸಿದ್ದಾರೆ.
ನಾಗರಹಾಳ ಗ್ರಾಮದ ಹೊರ ಹೊಲಯದ ಕಸ ವಿಲೇವಾರಿ ಘಟಕ್ಕೆ ಹೋಗುವ ದಾರಿಗೆ ಸಿ ಸಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು,ಈ ಕಾಮಗಾರಿಯು ಅಂದಾಜು ಪತ್ರಿಕೆಯ ಪ್ರಕಾರ ಮಾಡಿಲ್ಲವೆಂದು ಮೇಲ್ನೋಟಕ್ಕೆ ಎದ್ದು ಕಾಣತ್ತಾಯಿದೆ.
ರಸ್ತೆ ಕಾಮಗಾರಿಗೆ ಸರಿಯಾಗಿ ಮರಳು,ಸಿಮೆಂಟ್, ಕಡಿ ಬಳಸದೆ ಇರುವುದು ಇನ್ನಿತರ ಸಾಮಗ್ರಿಗಳು ಕಳಪೆ ಮಟ್ಟದಿಂದ ಕೂಡಿದೆ. ಇದರಿಂದ ಅನುದಾನ ದುರ್ಬಬಳಕ್ಕೆ ಆಗುತ್ತಿದೆ. ಈ ಕೂಡಲೆ ಬಿಲ್ ತಡೆಯಿಡಿದು ತನಿಖೆ ನಡೆಸಬೇಕೆಂದು ಭೀಮ್ ಆರ್ಮಿ ಆಗ್ರಹಿಸಿದೆ.
ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಪಂಚಾಯತ್ ಪಿಡಿಓ ಹಾಗೂ ಜೆಇ ಅಧಿಕಾರಿ ಸೂಕ್ತ ಕ್ರಮ ಹಾಗೂ ಸೂಕ್ತ ಕಾಮಗಾರಿ ನೋಡಿ ಬಿಲ್ ಪಾವತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ವರದಿ: ಮಂಜುನಾಥ ಕುಂಬಾರ