ಬೀದರ್: ಜಿಲ್ಲೆಯ ಹುಮನಾಬಾದದ್ ಪಟ್ಟಣದ ಜೇರಪೇಟೆ ಶ್ರೀ ರಾಚೋಟೇಶ್ವರ ಪಲ್ಲಕ್ಕಿ ಉತ್ಸವ ಬುಧವಾರ ರಾತ್ರಿ ಭಕ್ತಿಭಾವ ಮಧ್ಯ ನೆರವೇರಿತು.
ಜೇಟೆಪೇಟೆಯಿಂದ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ರಾಚೋಟೇಶ್ವರ ಪಲ್ಲಕ್ಕಿ ಉತ್ಸವ ಸಹ ಜತೆಗೂಡಿ ಪಟ್ಟಣದ ಬಸವೇಶ್ವರ ವೃತ್ತ, ಬಾಲಾಜಿ ವೃತ್ತಗಳ ಮಾರ್ಗವಾಗಿ ಶ್ರೀ ವೀರಭದ್ರೇಶ್ವರ ರಸ್ತೆಯಿಂದ ಜೈನ್ ಓಣಿಯಿಂದ ಮರಳಿ ಜೇರಪೇಟೆ ತಲುಪಿತು.
ಪಲ್ಲಕ್ಕಿ ವೇಳೆ ದಾರಿಯುದ್ದಕ್ಕೂ ಬಿಡಿಸಿದ್ದ ಅತ್ಯಾಕರ್ಷಕ ರಂಗೋಲಿ ಭಕ್ತರ ಕಣ್ಮನಸೆಳೆದವು. ಜಾತ್ರೆ ಅಂಗವಾಗಿ ಜೇರಪೇಟೆ ನಿವಾಸಿಗಳು ಅಗ್ನಿಕುಂಡ ಪ್ರದಕ್ಷಿಣೆ ಹಾಕಿ ದೇವರಿಗೆ ಶಾಲು ಹೊದಿಸುವ ಮೂಲಕ ಭಕ್ತಿಸೇವೆ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಬಿ.ಪಾಟೀಲ, ಭೀಮರಾವ ಪಾಟೀಲ, ಬಿಜೆಪಿ ಮುಖಂಡ ಡಾ.ಸಿದ್ದು ಪಾಟೀಲ, ಪುರಸಭೆ ಸದಸ್ಯ ಕಾಳಪ್ಪ ಪಾಟೀಲ, ಮಹೇಶ ಪಾಟೀಲ, ಗಣ್ಯರಾದ ವಿಜಯಕುಮಾರ ಪತ್ರಿ, ನಿಜಪ್ಪ ಪತ್ರಿ, ಮಲ್ಲಿಕಾರ್ಜುನ ಮಾಳಶೆಟ್ಟಿ, ಬಾಬುರಾವ ಪತ್ರಿ, ಡಾ.ಸದಾನಂದ ಪತ್ರಿ, ಬಾಬುರಾವ ಪೋಚಂಪಳ್ಳಿ, ರೇವಣಸಿದ್ದಯ್ಯ ಮಠಪತಿ, ಶಶಿಧರ ಮಾಲಿ ಪಾಟೀಲ, ವೀರಯ್ಯ ಪಾಟಾ, ಶಂಕರ ದೇವಷಿ, ಸಿದ್ದು ಚಕಪಳ್ಳಿ, ಮಾಕಾ ಬಸವರಾಜ, ದಯಾನಂದ ಡಿ.ಎನ್.ಪತ್ರಿ, ಶ್ರೀಶೈಲ್ ಪರಡೀಮಠ್, ಶ್ರೀನಾಥ ದೇವಣಿ ಮೊದಲಾದವರು ಇದ್ದರು.