ಬೆಳಗಾವಿ ಜಿಲ್ಲಾ ಔಷಧ ಉಗ್ರಾಣದ ಅಧಿಕಾರಿಯಿಂದ ​ಮಹೀಳಾ ಸಿಬ್ಬಂದಿಗೆ ನಿತ್ಯ  ಕಿರುಕುಳ; ಸುಳ್ಳು ಕೇಸ್ ಹಾಕುವುದಾಗಿ ಬೆದರಿಕೆ.

ಉಮೇಶ ಗೌರಿ (ಯರಡಾಲ)

ಇತ್ತೀಚೆಗೆ ಮಹಿಳೆಯರ ಮೇಲೆ ಮಾನಸಿಕ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಅದರಂತೆ ಇದೀಗ ಬೆಳಗಾವಿ ಜಿಲ್ಲಾ ಔಷಧ ಉಗ್ರಾಣದ ಅಧಿಕಾರಿಯಿಂದ ​ಮಹೀಳಾ ಸಿಬ್ಬಂದಿಗೆ ಅಸಭ್ಯ ಮತ್ತು ಮಾನಸಿಕ ಕಿರುಕುಳ ನೀಡಿದ ಘಟನೆ ನಡೆದಿದ್ದು, ಅಧಿಕಾರಿ ವಿರುದ್ದ ಮೇಲಾಧೀಕಾರಿಗೆ ದೂರು.

ಬೆಳಗಾವಿ (ಡಿ.09):  ಜಿಲ್ಲಾ ಕೇಂದ್ರ ಔಷಧ ಉಗ್ರಾಣದ ಅಧಿಕಾರಿ ಶಿವಾನಂದ ಸೊಂಟಕ್ಕಿ ಯಿಂದ ಮಹೀಳಾ ಸಿಬ್ಬಂದಿಗೆ ನಿತ್ಯ ಮಾನಸಿಕ ಕಿರುಕುಳ ನೀಡಿದ ಘಟನೆ ನಡೆದಿದ್ದು , ಅಸಹ್ಯವಾಗಿ ವರ್ತಿಸುವದನ್ನು ಪ್ರಶ್ನಿಸಿದರೆ  ಹಾಗೂ ತನ್ನ ಬಗ್ಗೆ ಬಾಯಿ ಬಿಟ್ಟರೆ ಸುಳ್ಳು ಕೇಸ್‌ ಹಾಕುವುದಾಗಿ ಶಿವಾನಂದ ಸೊಂಟಕ್ಕಿ  ಬೆದರಿಕೆವೊಡ್ಡಿದ್ದಾನಂತೆ. ಇನ್ನು ಅಧಿಕಾರಿಯ ಅಸಭ್ಯ ವರ್ತನೆ ಬಗ್ಗೆ ಸಂತ್ರಸ್ಥ ಮಹಿಳೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಹಿರಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವಂತೆ.

ಶಿವಾನಂದ ಸೊಂಟಕ್ಕಿ ಈ ಮೊದಲು ಕೆಲಸ ಮಾಡುತ್ತಿದ್ದ ಹೀರೆಬಾಗೇವಾಡಿಯ ಸಮುದಾಯ ಆರೋಗ್ಯ ಕೇಂದ್ರದ ಮಹಿಳಾ ಮುಖ್ಯ
ವೈದ್ಯಾಧಿಕಾರಿ ಜೊತೆ  ಅಸಭ್ಯವಾಗಿ ಸನ್ನೆ ಮಾಡಿ ವಾಗ್ವಾದ ನಡೆಸಿದ್ದಕ್ಕಾಗಿ ಹೀರೆಬಾಗೇವಾಡಿ ಪೊಲೀಸ್ ಠಾಣೆಯಲ್ಲಿ  ದೂರು ನೀಡಿದಾಗ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿ ಬಂದಿದ್ದಾನಂತೆ. ಹಾಗೂ  ಸವದತ್ತಿಯ ಮಹಿಳಾ ವೈದ್ಯಾಧಿಕಾರಿಗಳ ಜೊತೆ ದೂರವಾಣಿಯಲ್ಲಿ ಅಸಭ್ಯವಾಗಿ ಮಾತನಾಡಿದ್ದಕ್ಕಾಗಿ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು ಕಛೇರಿಗೆ ಕರೆಯಿಸಿ ತಾಕಿತ್ತು ಮಾಡಿದ್ದರಂತೆ. ಇದಲ್ಲದೇ   ಈ ಮೊದಲು ಜಿಲ್ಲಾ ಔಷಧ ಉಗ್ರಾಣ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿ ಒಬ್ಬರು ಕೂಡ ಮಾನಸಿಕ ಕಿರುಕುಳ ನೀಡುತ್ತಿರುವುದರ ಬಗ್ಗೆ  ಬೆಳಗಾವಿಯ ಶಾಸಕರಿಗೆ ದೂರು ಕೊಟ್ಟಿದ್ದರಂತೆ. ಹೀಗೆ ಮಹಿಳಾ ಉದ್ಯೋಗಿಗಳ ಜೊತೆ ಅಸಭ್ಯವಾಗಿ ವರ್ತಿಸುವ ಕಿರುಕುಳ ನೀಡುವ ಪ್ರವೃತ್ತಿಯನ್ನು ನನ್ನ ಮೇಲೆ ಮುಂದುವರೆಸಿದ್ದು, ಇದಕ್ಕೆ ಕಡಿವಾಣ ಹಾಕಿ ಶಿವಾನಂದ ಸೊಂಟಕ್ಕಿ  ಮೇಲೆ ಸೂಕ್ತ ಕ್ರಮ ಕೈಗೊಂಡು  ನ್ಯಾಯ ಕೊಡಿಸಬೇಕೆಂದು ಕೆ.ಎಸ್.ಎಮ್.ಎಸ್.ಸಿ.ಎಲ್ ಬೆಂಗಳೂರಿನ ವ್ಯವಸ್ಥಾಪಕ  ನಿರ್ದೇಶಕರಿಗೆ ಪತ್ರದ  ಮುಖಾಂತರ ದೀಪಾ ನಂದಿಹಳ್ಳಿ ದೂರು ಕೊಟ್ಟಿದ್ದಾರೆ. 

ಘಟನೆ ಬಗ್ಗೆ  ಬೆಳಗಾವಿಯ ಎ.ಪಿ.ಎಮ್.ಸಿ ಪೋಲಿಸ್‌ ಠಾಣೆಯಲ್ಲಿ  ದೂರು ನೀಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ರಾಜಿ ಮಾಡಿಸಿ ಕೈತೊಳ್ಳಿದುಕೊಂಡಿದ್ದಾರಂತೆ.

ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು , ಸಚಿವರು ಗಂಭಿರವಾಗಿ ಪರಿಗಣಿಸಿ  ಶಿವಾನಂದ ಸೊಂಟಕ್ಕಿ  ಮೇಲೆ ಸೂಕ್ತ ಕ್ರಮ ಕೈಗೊಂಡು  ಸಂತ್ರಸ್ಥ ಮಹಿಳೆಗೆ ನ್ಯಾಯ ಕೊಡಸುತ್ತಾರೇ ಎಂದು ಕಾದು ನೋಡಬೇಕಾಗಿದ್ದೆ.

 

 

Share This Article
";