ಸುದ್ದಿ ಸದ್ದು ನ್ಯೂಸ್
ಬೆಳಗಾವಿ: ಕುಂದಾ ನಗರದ ಸೈಬರ್ ಪೋಲೀಸ್ ಠಾಣೆಗೆ ಪಿ ಐ ಗಡ್ಡೇಕರ ಅವರು ಬಂದಾಗಿನಿಂದ ಈ ಠಾಣೆಯ ದೂರುದಾರರಿಗೆ ಬಹು ಬೇಗ ನ್ಯಾಯ ಸಿಗುತ್ತಿದೆ. ಠಾಣೆಯ ಸಿಬ್ಬಂಧಿಗಳ ಕ್ರಿಯಾಶೀಲ ಕಾರ್ಯ ಪ್ರಾಮಾಣಿಕ ಪ್ರಯತ್ನಗಳೆ ಇದಕ್ಕೆ ಕಾರಣ. ಈ ಪರಿಣಾಮ ಬೆಳಗಾವಿ ಸೈಬರ್ ಠಾಣೆಯ ಗೋಲ್ಡನ್ ಹವರ್ ಶುರುವಾಗಿದೆ.
ಬೆಳಗಾವಿಯ ಸೈಬರ್ ಪೋಲೀಸ್ ಠಾಣೆಯಲ್ಲಿ ಕಳೆದ ಒಂದು ವರ್ಷದಿಂದ ಸುಮಾರು 1300 ಸೈಬರ್ ಪ್ರಕರಣಗಳು ದಾಖಲಾಗಿದ್ದವು. ಸದರಿ ಪ್ರಕರಣಗಳಿಗೆ ಸಂಭಂದ ಪಟ್ಟಂತೆ ದೂರುದಾರರು ಸುಮಾರು ರೂ 2-45 ಕೋಟಿ ಹಣವನ್ನು ಕಳೆದುಕೊಂಡಿದ್ದರು.
ಬೆಳಗಾವಿಯ CEN ಪೋಲೀಸರ ಸಮಯ ಪ್ರಜ್ಞೆಯಿಂದ ಕೇವಲ ಒಂದೇ ವರ್ಷದಲ್ಲಿ ಎಲ್ಲಾ ಪ್ರಕರಣಗಳನ್ನು ಭೇದಿಸಿ 1825 ಬ್ಯಾಂಕ್ ಖಾತೆಗಳಲ್ಲಿ ಇದ್ದ ರೂ 2-33 ಕೋಟಿ ಹಣವನ್ನು ಪ್ರೀಜ್ ಮಾಡಿಸಿ,ಈಗಾಗಲೇ ಸುಮಾರು 90 ಲಕ್ಷ ಹಣವನ್ನು ದೂರುದಾರರಿಗೆ ಮರಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿವಿಧ ಪ್ರಕರಣಗಳಿಗೆ ಸಮಂಧಿಸಿದ ,ಈಗಾಗಲೇ ಪ್ರಿಜ್ ಮಾಡಿಸಿರುವ ರೂ 1-44 ಲಕ್ಷ ಹಣವನ್ನು ದೂರುದಾರರಿಗೆ ಮರಳಿಸಲು ಕ್ರಮ ಕೈಗೊಳ್ಳಲಾಗಿದೆ.ಈ ಕುರಿತು ಪ್ರಕ್ರಿಯೆಗಳು ಚುರುಕಾಗಿ ನಡೆಯುತ್ತಿವೆ ಎಂದು ಬೆಳಗಾವಿ ಡಿಸಿಪಿ ವಿಕ್ರಂ ಅಮಟೆ ಅವರು ತಿಳಿಸಿದ್ದಾರೆ.
ಸೈಬರ್ ವಂಚನೆಯಾದ ಸಂಧರ್ಭದಲ್ಲಿ ತಕ್ಷಣ 112 ಸಂಖ್ಯೆಗೆ ಕಾಲ್ ಮಾಡಿ ದೂರು ಸಲ್ಲಿಸಬಹುದು.ಇಲ್ಲವಾದಲ್ಲಿ ತಕ್ಷಣ ಸೈಬರ್ ಠಾಣೆಗೆ ದೂರು ನೀಡಬೇಕು. ವಂಚನೆಯಾದ ಬಳಿಕ ಎಷ್ಟು ಬೇಗ ದೂರು ಕೊಡ್ತಾರೋ ಅಷ್ಟೇ ಬೇಗ ಪ್ರಕರಣ ಭೇದಿಸಲು ಸಾದ್ಯವಿದೆ.