ಎಂಇಎಸ್ ವಿರುದ್ಧ ಬೆಳಗಾವಿ ಪಾಲಿಕೆ ಅಧಿಕಾರಿ ದೂರು

ಬೆಳಗಾವಿ: ನಗರದಲ್ಲಿ ಅನುಮತಿ ಪಡೆಯದೇ ಮಹಾಮೇಳ ಆಯೋಜಿಸಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ವಿರುದ್ಧ ಮಹಾನಗರ ಪಾಲಿಕೆ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.

ರಸ್ತೆಯ ಮೇಲೆ ಅನಧಿಕೃತವಾಗಿ ವೇದಿಕೆ ನಿರ್ಮಿಸಲಾಗಿದೆ. ವೇದಿಕೆಯನ್ನು ತೆರವುಗೊಳಿಸಲು ಬಂದ ಪಾಲಿಕೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಮಹಾನಗರ ಪಾಲಿಕೆ ಅಭಿವೃದ್ಧಿ ವಿಭಾಗದ ಅಧಿಕಾರಿ ಲಕ್ಷ್ಮೀ ಸುಳಗೇಕರ್ ಬೆಳಗಾವಿಯ ಟಿಳಕವಾಡಿ ಠಾಣೆಗೆ ದೂರು ನೀಡಿದ್ದಾರೆ. ಇದಕ್ಕೂ ಮೊದಲು ವೇದಿಕೆಯತ್ತ ಬರುತ್ತಿದ್ದ ಎಂಎಎಸ್ ಮುಖಂಡನ ಮುಖಕ್ಕೆ ಕಪ್ಪು ಮಸಿ ಎರಚಿದ ಪ್ರಸಂಗವೂ ನಡೆಯಿತು.

ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಕಪ್ಪು ಮಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತನ ವಿರುದ್ಧ ಎಂಇಎಸ್ ಕಾರ್ಯಕರ್ತರು ದೂರು ನೀಡಿದ್ದಾರೆ. ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಟಿಳಕವಾಡಿ ಠಾಣೆ ಎದುರೆ ಎಂಇಎಸ್ ಕಾರ್ಯಕರ್ತರು ಮಹಾರಾಷ್ಟ್ರಪರ ಘೋಷಣೆ ಕೂಗಿದರು. ಠಾಣೆಯ ಹೊರಗೆ ಜಮಾವಣೆಗೊಂಡ ನೂರಾರು ಜನರು ರಸ್ತೆ ಮೇಲೆ ಧರಣಿ ನಡೆಸಿದರು.

ಬೆಳಗಾವಿಯ ವ್ಯಾಕ್ಸಿನ್ ಡಿಪೊದಲ್ಲಿ ನಡೆಯುತ್ತಿದ್ದ ಎಂಇಎಸ್ ಮಹಾಮೇಳ ಮುಕ್ತಾಯವಾಗಿದೆ. ಇಡೀ ಸರ್ಕಾರವೇ ಬೆಳಗಾವಿಯಲ್ಲಿದ್ದರೂ ಎಂಇಎಸ್ ಕಾರ್ಯಕರ್ತರು ಮಹಾಮೇಳ ನಡೆಸಿದ್ದಾರೆ. ಮಹಾವೇಳ ಮುಕ್ತಾಯವಾದ ನಂತರ ಎಲ್ಲರೂ ಟಿಳಕವಾಡಿ ಪೊಲೀಸ್ ಠಾಣೆಯತ್ತ ಹೊರಟರು. ಮಾರ್ಗ ಮಧ್ಯೆ ತಮ್ಮನ್ನು ತಡೆಯಲು ಬಂದ ಪೊಲೀಸರನ್ನೇ ಎಂಇಎಸ್ ಕಾರ್ಯಕರ್ತರು ತಳ್ಳುವ ಮೂಲಕ ಪುಂಡಾಟ ನಡೆಸಿದರು. ಇಂದು ನಡೆದ ಬೆಳವಣಿಗೆಗಳನ್ನು ಖಂಡಿಸಿ ಎಂಇಎಸ್ ಮಂಗಳವಾರ (ಡಿ.14) ಬೆಳಗಾವಿ ಬಂದ್‌ಗೆ ಕರೆನೀಡಿದೆ. ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ವಿಕ್ರಂ ಆಮಟೆ, ಶಾಂತಿಯುತವಾಗಿ ಮೆರವಣಿಗೆಯಲ್ಲಿ ತೆರಳಿ, ಗಲಾಟೆ ಮಾಡಬೇಡಿ ಎಂದು ಎಂಇಇಎಸ್​ ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಎಂಇಎಸ್ ನಾಯಕನ ಮುಖಕ್ಕೆ ಮಸಿ
ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರವು ವಿಧಾನಸಭೆ ಅಧಿವೇಶನ ನಡೆಸುತ್ತಿರುವ ಸಂದರ್ಭದಲ್ಲಿಯೇ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಮಹಾಮೇಳಾವ ನಡೆಸಲು ಯತ್ನಿಸಿದ್ದನ್ನು ಕನ್ನಡ ಪರ ಸಂಘಟನೆಗಳು ವಿರೋದಿಸಿದರು. ಈ ಸಂದರ್ಭದಲ್ಲಿ ಎಂಇಇಎಸ್ ಮುಖಂಡ ದೀಪಕ್ ದಳವಿ ಅವರ ಮುಖಕ್ಕೆ ಕೆಲವರು ಮಸಿ ಬಳಿದರು.

ಈ ಸಂದರ್ಭದಲ್ಲಿ ಎಂಇಎಸ್ ಹಾಗೂ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ನೂಕಾಟ-ತಳ್ಳಾಟ ನಡೆಯಿತು. ಮಸಿ ಬಳಿದ ಯುವಕನನ್ನು ಪೊಲೀಸರು ಬಂಧಿಸಿದರು.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";