ಬೆಳಗಾವಿ: ದೀರ್ಘ ಅವಧಿಯ ಬಳಿಕ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕೆಡಿಪಿ ಸಭೆ ಜರುಗಿತು. ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಬೆಳಗಾವಿ ಡಿಹೆಚ್ಒ ಮುನ್ಯಾಳ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಕೆಡಿಪಿ ಸಭೆಯಲ್ಲಿ ರಾಮದುರ್ಗ ದಡಾರ ಲಸಿಕೆಯಿಂದ ಮೂರು ಜನ ಮಕ್ಕಳ ಸಾವಿನ ಕುರಿತು ಚರ್ಚೆ ನಡೆಯಿತು. ಈ ಪ್ರಕರಣದ ಕುರಿತು ಇನ್ನುವರೆಗೆ ವರದಿ ಬಂದಿಲ್ಲ, ಸಂಬಂಧಿಸಿದ ಡಾಕ್ಟರ್ ಮೇಲೆ ಕ್ರಮ ಯಾಕೆ ಕೈಗೊಂಡಿಲ್ಲ ಎಂದು ಕಾರಜೋಳ ಅವರು ಡಿಹೆಚ್ಒ ಮುನ್ಯಾಳ ವಿರುದ್ಧ ಗರಂ ಆದರು. ಇದೇ ವೇಳೆ ರಾಮದುರ್ಗ ಶಾಸಕರು ಪ್ರಕರಣದ ಕುರಿತು ಪ್ರಶ್ನೆಗಳನ್ನ ಕೇಳಿದ್ರೆ, ಅದಕ್ಕೂ, ಡಿಎಚ್ಒನಿಂದ ಸರಿಯಾದ ಉತ್ತರ ಬಾರದ ಹಿನ್ನೆಲೆ ಸಚಿವರು ಡಿಎಚ್ಒ ಮೇಲೆ ಗರಂ ಆದರು.
ಸಭೆಯಲ್ಲಿಯೇ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಣದೀಪ್ ಸಿಂಗ್ ಅವರಿಗೆ ಕರೆ ಮಾಡಿದ ಸಚಿವ ಕಾರಜೋಳ, ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು ಇಲ್ಲಿಯ ಡಿಹೆಚ್ಒ ಮುನ್ಯಾಳ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಯಾವುದೇ ಮಾಹಿತಿ ಕೇಳಿದ್ರೂ ಕೊಡುತ್ತಿಲ್ಲ. ಅತ್ಯಂತ ಬೇಜವಾಬ್ದಾರಿಯಾಗಿ ಕೆಲಸ ಮಾಡುತ್ತಿದ್ದು ಇವರನ್ನು ತಕ್ಷಣ ಬೆಳಗಾವಿ ಜಿಲ್ಲೆಯಿಂದ ರಿಲೀವ್ ಮಾಡಿ, ದೊಡ್ಡ ಜಿಲ್ಲೆಗೆ ಕ್ರಿಯಾಶಿಲ ಅಧಿಕಾರಿಯನ್ನು ನಿಯುಕ್ತಿಗೊಳಿಸಿ ಎಂದು ಆದೇಶಿಸಿದರು.