ಸುದ್ದಿ ಸದ್ದು ನ್ಯೂಸ್
ಬೆಳಗಾವಿ: ಪಂಜಾಬ್‌ನ ಅಮೃತಸರ ಜಿಲ್ಲೆಯ ಖಾಸಾದಲ್ಲಿ ಇರುವ ಬಿಎಸ್‌ಎಫ್ ಪಡೆಯ ಪ್ರಧಾನ ಕಚೇರಿಯೊಳಗೆ ಬೆಳಗಾವಿ ಮೂಲದ ಗಡಿ ಭದ್ರತಾ ಪಡೆಯ ಸೈನಿಕನೋರ್ವ ತನ್ನ ಗನ್‌ನಿಂದ ನಾಲ್ವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ನಂತರ ತಾನು ಗುಂಡು ಹಾರಿಸಿಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ಇತ್ತೀಚೆಗೆ ನಡೆದಿದೆ.
ನಾಲ್ವರ ಪ್ರಾಣ ತೆಗೆದ ಯೋಧ ಕರ್ನಾಟಕದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದ ಸತ್ಯಪ್ಪ ಸಿದ್ದಪ್ಪ ಕಿಲಾರಗಿ ಎಂದು ಎಂದು ತಿಳಿದು ಬಂದಿದೆ.
ಈ ಹೃದಯ ವಿದ್ರಾವಕ ಘಟನೆಯಲ್ಲಿ ಗುಂಡು ಹಾರಿಸಿದ ಯೋಧ ಸತ್ಯಪ್ಪ ಸಿದ್ದಪ್ಪ ಕಿಲಾರಗಿ ಸೇರಿದಂತೆ ಉಳಿದ ನಾಲ್ವರೂ ಮೃತಪಟ್ಟರೆ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಬಿಎಸ್‌ಎಫ್ಸಿ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದು ಅಮೃತಸರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೃತಪಟ್ಟ ದುರ್ದೈವಿಗಳು ಬಿಹಾರದ ಹೆಡ್ ಕಾನ್‌ಸ್ಟೆಬಲ್ ರಾಮ್ ಬಿನೋದ್, ಮಹಾರಾಷ್ಟ್ರದ ಡಿಎಸ್ ತೊರಸ್ಕರ್, ಜಮ್ಮು ಕಾಶ್ಮೀರದ ರತನ್ ಸಿಂಗ್ ಮತ್ತು ಹರಿಯಾಣದ ಬಲ್ವಿಂದರ್ ಕುಮಾರ್ ಎಂದು ತಿಳಿದುಬಂದಿದೆ.
ವೈಯಕ್ತಿಕ ಸಾಲ ಹಾಗೂ ಕೌಟುಂಬಿಕ ವಿಚಾರಕ್ಕೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಈ ರೀತಿ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಗುಂಡಿನ ದಾಳಿ ನಡೆಸಿದ ಯೋಧನ ಕುಟುಂಬದ ಸದಸ್ಯರು ಹೇಳಿದ್ದಾರೆ.
ತಮ್ಮದಲ್ಲದ ತಪ್ಪಿಗೆ ಜೀವ ಕಳೆದುಕೊಂಡಿರುವ ಉಳಿದ ನಾಲ್ವರು ಯೋಧರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ ಎನ್ನಲಾಗಿದೆ.