ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕೃತ ಕೃತಿ
“ಸಿಕ್ಕ ಸಿಕ್ಕ ಕಲ್ಲುವಿಗ್ರಹಗಳನ್ನು ದೇವರೆಂದು ಪೂಜಿಸುತ್ತಿದ್ದೆವು. ಹೀಗಿರುವಾಗ ನಮ್ಮ ನಡುವೆ ಒಬ್ಬ ಸಜ್ಜನರು ಹುಟ್ಟಿ ಬಂದರು. ಅವರ ಹೆಸರು ಮೊಹಮ್ಮದ್. ಪ್ರತಿಷ್ಠಿತ ಹಾಸಿಮ್ ಮನೆತನದವರು.
ಅವರು ಎಲ್ಲರಂತಿರಲಿಲ್ಲ.ಅವರ ನಾಲಿಗೆಯಿಂದ ಒಂದೇ ಒಂದು ಸುಳ್ಳು ಹೊರಬಿದ್ದುದನ್ನು ನಾವು ಕೇಳಿರಲಿಲ್ಲ. ಅವರಷ್ಟು ನಿಷ್ಕಲ್ಮಶವಾಗಿ ನಗು ಸೂಸುವವರನ್ನು ನಾವು ಕಂಡಿರಲಿಲ್ಲ. ಅವರು ನಮಗೆ ಹೊಸ ಧರ್ಮವೊಂದನ್ನೂ ಭೋದಿಸಿದರು. ನಮ್ಮ ಕಣ್ಣು ತೆರೆಸಿದರು.
ಕಳವು ಮಾಡದಿರಿ, ಕೊಲೆ ಮಾಡದಿರಿ, ಸುಳ್ಳುಹೇಳದಿರಿ, ಸಿಟ್ಟು ಮಾಡದಿರಿ, ಎದುರುವಾದಿಸದಿರಿ, ತಾವೇ ಶ್ರೇಷ್ಠರೆಂದು ಹೆಮ್ಮೆ ಪಡದಿರಿ, ಬೇರೆಯವರ ಬಗ್ಗೆ ಅಸಹ್ಯ ಪಡದಿರಿ, ಬಹುದೇವವಿಶ್ವಾಸ ಮಾಡದಿರಿ ಎಂದರು. ದೇವರು ಒಬ್ಬನೇ ಎಂದರು. ಅವನು ನಿರಾಕಾರನು ಎಂದರು, ಅವನೆ ಅಲ್ಲಾಹು ಅಂದರು. “
ಹಾಸಿಗೆಯಲ್ಲಿ ಮಲಗಿ ಅದ್ಭುತ ಎನ್ನಬಹುದಾದ ಕುರಾನ್ ಪುಸ್ತಕ ಓದುತ್ತಿದ್ದವನು ಘಕ್ಕನೆ ಎದ್ದು ಕುಳಿತೆ.ಶಾಕ್ ಹೊಡೆದ ಅನುಭವ. ನಾನು ಓದುತ್ತಿದ್ದುದು “ಓದಿರಿ” (ಕುರಾನ್ ಕನ್ನಡದ ಅರ್ಥ ಓದಿರಿ) ಎಂಬ ಪ್ರವಾದಿ ಮೊಹಮ್ಮದರ ಜೀವನಾಧಾರಿತ ಮೊತ್ತ ಮೋದಲ ಐತಿಹಾಸಿಕ ಕಾದಂಬರಿ ಅದು.
ಎರಡು ಭಾರಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಕನ್ನಡದ ಶ್ರೇಷ್ಠ ಲೇಖಕ ಬೋಳುವಾರು ಮೊಹಮ್ಮದ್ಕುಂಞ ಅವರು ಬರೆದ ಕಾದಂಬರಿ. ಕಣ್ಣುಜ್ಜಿಕೊಂಡೆ. ಬೆವರಿಳಿಯಲಾರಂಬಿಸಿತು.
ಬಸವಣ್ಣನವರು ಅಲ್ಲಾ ಹೇಳಿದ್ದನ್ನು ಪುನಃರುಚ್ಚಿಸಿದ್ದಾರೆಯೇ..? ಏಳನೇ ಶತಮಾನದ ಮೊಹಮ್ಮದ್ ರು ನುಡಿದಿದ್ದನ್ನು ಬಸವಣ್ಣನವರು ಹನ್ನೆರಡನೆ ಶತಮಾನದಲ್ಲಿ ಮರು ನುಡಿದರೆ..? ಮನಸ್ಸು ವಿಚಲಿತಗೊಂಡಿತು. ಸಮಯ ನೋಡಿದೆ. ಗಡಿಯಾರದ ಮುಳ್ಳುಗಳು ರಾತ್ರಿ 1.30 ರ ಮೇಲಿದ್ದವು.
ಸತ್ಯವನ್ನು ತಿಳಿಯಲೇಬೇಕು. ಲೇಖಕರಿಗೆ ಈಗಲೆ ಕರೆ ಮಾಡಿದರೆ? ಓದಲೇಬೇಕಾದ ಕೃತಿ ಎಂದು ಹೇಳಿದ ಸ್ನೇಹಿತನ ಮಾತುಗಳು ನೆನಪಾದವು. ಬೋಳುವಾರು ಬೆಂಗಳೂರಿನಲ್ಲಿ ನೆಲಸಿದ್ದಾರೆ ಅವರಿಗೀಗ 85 ವರ್ಷವೆಂದು ಹೇಳಿದ್ದರು. ಹಿರಿಯ ಜೀವ ಈಗ ವಿಶ್ರಾಂತಿಯಲ್ಲಿರಬೇಕು. ಬೆಳಗ್ಗೆ ಕೇಳು’ ಎಂದಿತು ಇನ್ನೊಂದು ಮನಸ್ಸು. ನಿದ್ರೆ ಹಾರಿಹೋಗಿತ್ತು. ಹಾಸಿಗೆಯಲ್ಲಿ ಹೊರಳಾಟ ಪ್ರಾರಂಭವಾಯಿತು. ಕಣ್ಣುಬಿಟ್ಟಾಗ ಆಗಲೆ ಸೂರ್ಯ ತನ್ನ ಪ್ರಭಾವ ಹೆಚ್ಚಿಸಿಕೊಂಡಿದ್ದ.
ಚಹಾ ಕುಡಿದೆ.ಬೋಳುವಾರು ನನ್ನ ಮೆದುಳಿನಲ್ಲಿ ಮಲಗಿದ್ದರು.ಕರೆ ಮಾಡಲೆ? ಶಿಷ್ಟಾಚಾರ ಅಡ್ಡಬಂತು. ಇನ್ನು ಸ್ವಲ್ಪ ತಡೆ ಎಂದಿತು.ವಾಕಿಂಗ್ ಹೋದೆ. ಗಡಿಯಾರ ತನ್ನ ಕೆಲಸ ಮಾಡುತಿತ್ತು. ಮುಳ್ಳುಗಳು 9.30 ತಲುಪಿದ್ದವು.ಸರಿಯಾದ ಸಮಯ ನಂಬರಗಳ ಮೇಲೆ ಕೈ ಬೆರಳು ಚಲಿಸಿದವು.ಫೋನ್
ರಿಂಗುಣಿಸಲಾರoಭಿಸಿತು.
‘ಹಲೋ ಯಾರು’ ಜೇನು ಸುಸುವ ತಣ್ಣನೆಯ ಧ್ವನಿ ಅತ್ತಿಂದ.’ಸರ್ ನಾನು ಪಾಟೀಲ ಎಂದು, ಬೆಂಗಳೂರಿನಿಂದ ಕರೆ ಮಾಡುತ್ತಿರುವೆ ನೀವು ಬರೆದ ‘ಓದಿರಿ’ ಓದುತ್ತಿದ್ದೆ. ಅದರಲ್ಲಿ ಕೆಲ ವಿಷಯಗಳ ಬಗ್ಗೆ ಚರ್ಚಿಸಬೇಕಾಗಿದೆ ಮಾತನಾಡಬಹುದೇ? “”ಧಾರಾಳವಾಗಿ ಸರ್” ಎಂದಿತು ಹಿರಿಯ ಜೀವ.
….ಮುಂದುವರೆಯುವದು ಓದುಗರೆ ನಿರೀಕ್ಷೆಸಿ
ಲೇಖಕರು:-ಜಿ ಬಿ ಪಾಟೀಲ
ಚಿಂತಕರು:-ಬೆಂಗಳೂರು.
(M)-9448087657