ಬಸವಲಿಂಗಯ್ಯ ಹಿರೇಮಠ ಅವರ ಪಾರ್ಥಿವ ಶರೀರ ಧಾರವಾಡದಿಂದ ಸ್ವಗ್ರಾಮ ಆಗಮನ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು

ಜಾನಪದ ಲೋಕದ ಮಾಂತ್ರಿಕ ಗಾಯಕ ಬಸವಲಿಂಗಯ್ಯ ಹಿರೇಮಠ ಅವರ ಪಾರ್ಥಿವ ಶರೀರ ಧಾರವಾಡದಿಂದ ಸ್ವಗ್ರಾಮ ಬೈಲೂರಿಗೆ ತಡ ರಾತ್ರಿ 9.40 ಕ್ಕೆ ತಲುಪಿದೆ. ದಿ.ಬಸವಲಿಂಗಯ್ಯ ಹಿರೇಮಠ ಅವರ ಧರ್ಮಪತ್ನಿ ವಿಶ್ವೇಶ್ವರಿ ಪುತ್ರ ಭೂಷಣ್ ಮತ್ತು ಸೊಸೆ ಜತೆಯಲ್ಲಿದ್ದರು.

ಬೈಲೂರಿನ ಅವರ ಸ್ವಂತ ಮನೆಗೆ ಪಾರ್ಥೀವ ಶರೀರ ಹೊತ್ತ ವಾಹನ ಬಂದೊಡನೆ ಸ್ಥಳೀಯ ನಿಷ್ಕಲ ಮಂಟಪದ  ಪೂಜ್ಯ ನಿಜಗುಣಾನಂದ ಶ್ರೀಗಳು ಪಾರ್ಥೀವ ಶರೀರಕ್ಕೆ ಗೌರವ ನಮನ ಸಲ್ಲಿಸಿದರು.

ಈ ವೇಳೆ ಯುವ ಸಾಹಿತಿ ಸಿದ್ದರಾಮ ತಳವಾರ, ಚಂದ್ರಕಾಂತ ಹೈಬತ್ತಿ, ವಿಠ್ಠಲ ಮಿರಜಕರ, ಮಹೇಶ ಪತ್ರಿ, ಸೇರಿದಂತೆ ಗ್ರಾಮಸ್ಥರು ಹಾಗೂ ಸಂಬಂಧಿಕರು ಇದ್ದರು.

Share This Article
";