ಸುದ್ದಿ ಸದ್ದು ನ್ಯೂಸ್ (1 ಡಿಸೆಂಬರ್ 2021
ನವ ದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವ ಹುನ್ನಾರದ ವಿರುದ್ಧ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಮಂಗಳವಾರ ರಾಷ್ಟ್ರವ್ಯಾಪಿ ಚಳವಳಿಯನ್ನು ಪ್ರಾರಂಭಿಸಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮಂಗಳವಾರ ರಾಷ್ಟ್ರರಾಜಧಾನಿಯ ಜಂತರ್ಮಂತರ್ನಲ್ಲಿ “ಬ್ಯಾಂಕ್ “ಬಚಾವೋ ದೇಶ್ ಬಚಾವೋ” ರ್ಯಾಲಿ’ನಡೆದಿದ್ದು ದೇಶದ ವಿವಿಧ ಭಾಗಗಳಿಂದ ಬ್ಯಾಂಕ್ ಅಧಿಕಾರಿಗಳು ಹಾಗೂ ಬ್ಯಾಂಕ್ನ ಇತರ ಪಾಲುದಾರರು ಭಾಗವಹಿಸಿದ್ದರು.
ರ್ಯಾಲಿಯನ್ನು ಉದ್ದೇಶಿಸಿ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸೌಮ್ಯಾ ದತ್ತಾ ಮಾತನಾಡಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸಲು ಹಾಗೂ ಅಂಗೀಕರಿಸಲು ಪಟ್ಟಿ ಮಾಡಲಾದ ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಮಸೂದೆ-2021 ಅನ್ನು ಹಿಂಪಡೆಯುವಂತೆ ಸರಕಾರಕ್ಕೆ ಮನವಿ ಮಾಡಿದರು.
ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣಕ್ಕೆ ದಾರಿ ಮಾಡಿ ಕೊಡುವ ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಮಸೂದೆ-2021 ಮಸೂದೆಯನ್ನು ಸರಕಾರ ಮಂಡಿಸಿ ಅಂಗೀಕರಿಸಿದರೆ, ಬ್ಯಾಂಕ್ ಅಧಿಕಾರಿಗಳು ಬ್ಯಾಂಕಿಂಗ್ ಕ್ಷೇತ್ರದ ಎಲ್ಲಾ ಪಾಲುದಾರರನ್ನು ಒಗ್ಗೂಡಿಸಿ ರಾಷ್ಟ್ರವ್ಯಾಪಿ ಬೃಹತ್ ಆಂದೋಲನವನ್ನು ಆರಂಭಿಸಬಕಾಗುತ್ತದೆ ಎಂದು ಎಚ್ಚರಿಸಿದರು.