ಅಭಿವೃದ್ಧಿಕಡೆ ಗಮನ ಹರಿಸದ ಬಳ್ಳಿಗೇರಿ ಗ್ರಾಮ ಪಂಚಾಯತ್

ಉಮೇಶ ಗೌರಿ (ಯರಡಾಲ)

ಅಥಣಿ: ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಕನಿಷ್ಠ ಮೂಲಭೂತ ಸೌಕರ್ಯಯವಿಲ್ಲದೆ ಗ್ರಾಮಸ್ತರು ಗ್ರಾಮ ಪಂಚಾಯತಿ ವಿರುದ್ದ ಹಿಡಿಶಾಪ್ ಹಾಕುತ್ತಿದ್ದಾರೆ. ಒಂದು ವರ್ಷ್ ಗತಿಸಿದರು ಕಾಮಗಾರಿ ಮಾಡಲು ಅಭಿವೃದ್ಧಿ ಅಧಿಕಾರಿ ಹಾಗೂ ಚುನಾಯಿತ ಪ್ರತಿನಿಧಿಗಳು ಮೀನಾ ಮೆಷ ಎನಿಸುತ್ತಿದ್ದಾರೆ

ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಗಬ್ಬು ನಾಥದಿಂದ ಕೂಡಿವೆ. ಸೊಳ್ಳೆಗಳ ಉಗಮ ಸ್ಥಾನವಾಗಿ ಗ್ರಾಮದಲ್ಲಿ ರೋಗದ ವಾತಾವರಣ ಸೃಷ್ಟಿಯಾಗಿದೆ.ಗ್ರಾಮದಲ್ಲಿ ಕೆಲವು ಮನೆಗಳಿಗೆ ವಿದ್ಯುತ ಕಂಬಗಳಿಲ್ಲದೆ ಸಂಪರ್ಕದಿಂದ ವಂಚಿತರಾಗಿದ್ದಾರೆ. ಇನ್ನೂ ಹಲವಾರು ಸಮಸ್ಯೆಗಳಿದ್ದು ಪರಿಹಾರ ಸಿಗದೆ ಗ್ರಾಮಸ್ಥರು ಪರಿದಾಡುತ್ತಿದ್ದಾರೆ. ಆದರೂ ಅಧಿಕಾರಿಗಳಾಗಲಿ ಚುನಾಯಿತ ಜನಪ್ರತಿನಿಧಿಗಳಾಗಲಿ ಕ್ಯಾರೇ ಅನ್ನುತ್ತಿಲ್ಲ.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದ್ರೆ ಇವತ್ತು ನೋಡುತ್ತೇವೆ ನಾಳೆ ನೋಡುತ್ತೇವೆ ಅಂತಾ ಉಡಾಫೆ ಉತ್ತರ ನೀಡುತ್ತಾರೆ ಅಂತಾರೆ ಬಳ್ಳಿಗೇರಿ ಗ್ರಾಮಸ್ಥರು.ಒಟ್ಟಿನಲ್ಲಿ ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ ಬಳ್ಳಿಗೇರಿ ಗ್ತಾಮಸ್ತರಿಗೆ ಸ್ಪಂದಿಸಬೇಕಾಗಿದೆ.

ವರದಿ: ಅಬ್ಬಾಸ ಮುಲ್ಲಾ

Share This Article
";