ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು: ವಿಶ್ವಗುರು ಬಸವಣ್ಣವರ ವಿಚಾರಗಳನ್ನು ಯಾರು ಗಟ್ಟಿಯಾಗಿ ತಿಳಿದುಕೊಳ್ಳುತ್ತಾರೆ ಅವರನ್ನು ಯಾವುದೇ ಶಕ್ತಿ,ಯಾವುದೇ ಜಾತಿ, ಧರ್ಮ, ಯಾವುದೇ ಸರ್ಕಾರ ಏನು ಮಾಡಲಿಕ್ಕೆ ಆಗಲ್ಲ ಎಂದು ನೂತನ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸಚಿವರಾಗಿ ಬೆಳಗಾವಿ ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಿ ತಾಲೂಕಿನ ಬೈಲೂರು ನಿಷ್ಕಲ ಮಂಟಪಕ್ಕೆ ಭೇಟಿ ನೀಡಿ ಶ್ರೀ ನಿಜಗುಣಾನಂದ ಮಹಾಸ್ವಾಮೀಜಿ ಅವರನ್ನು ಸತ್ಕರಿಸಿ ಅವರಿಂದ ಆಶೀರ್ವಾದ ಪಡೆದು ಮಾತನಾಡಿದ ಅವರು ನಾನು ಸಚಿವನಾದ ಮೇಲೆ ಬೈಲೂರು ಮಠದ ಶ್ರೀ ನಿಜಗುಣಾನಂದ ಮಹಾಸ್ವಾಮೀಜಿ ಅವರ ಆರ್ಶೀವಾದ ಪಡೆಯಲು ಇಲ್ಲಿಗೆ ಬಂದಿದೇನೆ. ಸ್ವಾಮೀಜಿಯವರ ಮತ್ತು ನಮ್ಮ ಹೋರಾಟ ಒಂದೇ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಸವಣ್ಣವರ ವಿಚಾರಗಳನ್ನು ಮನೆ ಮನೆಗೆ ತಿಳಿಸಲಾಗುವುದು ಎಂದರು. ಸಿಎಂ ಸಿದ್ದರಾಮಯ್ಯ ನೇತೃತ್ವದ ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಬಸವಣ್ಣವರ ಪೋಟೋ ಇಡಲಾಗಿತ್ತು. ಕಿತ್ತೂರಿನ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೂಂದೆಯೂ ಕಿತ್ತೂರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ನೂತನ ಶಾಸಕ ಬಾಬಾ ಸಾಹೇಬ್ ಪಾಟೀಲ್ ಮಾತನಾಡಿ ಸಚಿವ ಸತೀಶ್ ಜಾರಕಿಹೊಳಿಯವರು ಕಿತ್ತೂರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ವಹಿಸಲಿದ್ದು ಅವರು ಸಚಿವರಾಗಿದ್ದರಿಂದ ನನಗೂ ಹೆಚ್ಚಿನ ಶಕ್ತಿ ಬಂದಿದೆ ಕಾರಣ ಕಿತ್ತೂರು ಕ್ಷೇತ್ರದ ಸರ್ವ ಅಭಿವೃದ್ಧಿಗೆ ಹಗಲಿರಳು ಶ್ರಮಿಸುತ್ತೇನೆ ಎಂದರು.
ಬೈಲೂರು ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಮಾತನಾಡಿ ನಾನು ಸತೀಶ ಜಾರಕಿಹೊಳಿ ಅವರೊಂದಿಗೆ ವೈಚಾರಿಕತೆ ಸಂಬಂಧ ಇಟ್ಟುಕೊಂಡಿದ್ದೇನೆ. ಹೊರತು ದುಡ್ಡಿನ ವ್ಯವಹಾರ ಇಟ್ಟುಕೊಂಡಿಲ್ಲ. ವ್ಯವಹಾರ ಬೇರೆ, ವೈಚಾರಿಕತೆ ಬೇರೆ. ಅವರ ಮತ್ತು ನಮ್ಮ ವಿಚಾರಗಳು ಸಮವಾಗಿವೆ ಆದ್ದರಿಂದ ಸಚಿವರಾದ ಮೇಲೆ ಸತೀಶ ಜಾರಕಿಹೊಳಿ ಅವರು ನಮ್ಮ ಮಠಕ್ಕೆ ಆಗಮಿಸಿದ್ದಾರೆ. ಸಮಾಜದಲ್ಲಿ ತಾರತಮ್ಯ ಮೌಡ್ಯ ಕಂದಾಚಾರ ಹೋಗಬೇಕಾದರೆ ಶಿಕ್ಷಣದ ಪ್ರಮಾಣ ನೂರಕ್ಕೆ ನೂರರಷ್ಟು ಅವಶ್ಯಕ ಆದ್ದರಿಂದ ಸಚಿವ ಸತೀಶ ಜಾರಕಿಹೊಳಿ ಅವರು ಕಿತ್ತೂರು ಭಾಗದಲ್ಲಿ ಗ್ರಾಮೀಣ ಮಹಿಳೆಯರಿಗಾಗಿ ಒಂದು ಮಹಿಳಾ ಇಂಜನೀಯರಿಂಗ್ ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ವೇಳೆ ಮಹಾಸ್ವಾಮಿಗಳು ನೂತನ ಶಾಸಕರಾದ ಬಾಬಾ ಸಾಹೇಬ್ ಪಾಟೀಲ್, ವಿಶ್ವಾಸ ವೈದ್ಯ ಅವರನ್ನು ಸನ್ಮಾನಿಸಿದರು.
ಪ್ರಾಸ್ಥಾವಿಕವಾಗಿ ಶರಣ ವಿಜಯ ದೊಡವಾಡ ಮಾತನಾಡಿದರು, ಶಿಕ್ಷಕ ವಿವೇಕ ಕುರುಗುಂದ ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ರೋಹಿಣಿ ಪಾಟೀಲ್, ಕಾಂಗ್ರೆಸ್ ಮುಖಂಡ ಶಂಕರ ಹೊಳಿ, ಮಲಪ್ರಭಾ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ವಿರೇಶ ಕಂಬಳಿ, ಶರಣರಾದ ಉಮೇಶ ಗೌರಿ, ವಿರೇಶ ಹಲಕಿ ಸೇರಿದಂತೆ ಕಿತ್ತೂರು ಮತಕ್ಷೇತ್ರದ ಹಲವು ಮುಖಂಡರು ಇದ್ದರು.
ನೂತನ ಸಚಿವ ಸತೀಶ ಜಾರಕಿಹೊಳಿ ತಾಲೂಕಿನ ಬೈಲೂರು ಗ್ರಾಮದ ನಿಷ್ಕಲ ಮಂಟಪಕ್ಕೆ ಬೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾನತಡಿ ಚುನಾವಣಾ ಪೂರ್ವ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳ ಬಗ್ಗೆ ನಾನು ಗ್ಯಾರಂಟಿ ಕೊಡೋದಿಕ್ಕೆ ಆಗುತ್ತಾ ಅನ್ನೋ ಮೂಲಕ ಕಾಂಗ್ರೆಸ್ ಹಿರಿಯ ಸಚಿವ ಸತೀಶ ಜಾರಕಿಹೊಳಿ ಗ್ಯಾರಂಟಿ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದ್ದಾರೆ ಐದು ಗ್ಯಾರಂಟಿಗಳ ಬಗ್ಗೆ ಮಾತನಾಡಿದ ಅವರು ಪ್ರತಿ ಗ್ಯಾರಂಟಿಯೂ ಬಡ ಮಧ್ಯಮ ವರ್ಗದ ಕುಟುಬಗಳ ನೆರವಿಗೆ ಬರುತ್ತಿವೆಯಾದ್ದರಿಂದ ಫಲಾನುಭವಿಗಳ ಆಯ್ಕೆಯಲ್ಲಿ ಸಮೀಕ್ಷೆ ಕೈಗೊಂಡು ಅರ್ಹರಿಗೆ ಮಾತ್ರ ಸೌಲಭ್ಯ ಕಲ್ಪಿಸುವ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆದಿದೆ ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ನಂತರ ಗ್ಯಾರಂಟಿ ಭಾಗ್ಯಗಳನ್ನು ಅನುಷ್ಠಾನಗೊಳಿಸಲು ಅಗತ್ಯ ರೂಪುರೇಷೆ ಸಿದ್ದಪಡಿಸಲಾಗುವುದು ಇದು ಸರ್ಕಾರದ ತೀರ್ಮಾನ ಆದ್ದರಿಂದ ನಾನು ವೈಯಕ್ತಿಕವಾಗಿ ಗ್ಯಾರಂಟಿ ನೀಡಲು ಸಾಧ್ಯವಿಲ್ಲ ಎಂದರು