ಕಾಮಗಾರಿ ಪರಿಶೀಲಿಸಿದ ಬೈಲಹೊಂಗಲ ತಾಪಂ ಸಹಾಯಕ ನಿರ್ದೇಶಕ ವಿಜಯ ಪಾಟೀಲ

ಉಮೇಶ ಗೌರಿ (ಯರಡಾಲ)

ಬೈಲಹೊಂಗಲ:ತಾಲೂಕಿನ ದೇವಲಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೇರೆಗಾ ಸಹಾಯಕ ನಿರ್ದೇಶಕ ವಿಜಯ ಪಾಟೀಲ ಬೇಟಿ  ನೀಡಿ ಶಾಲೆಯ ಮೈದಾನಕ್ಕೆ ಪೇವರ್ಸ್ ಅಳವಡಿಸಿರುವ ಕಾಮಗಾರಿಯನ್ನು ಪರಿಶೀಲಿಸಿದರು.

ಅವರು ಮಾತನಾಡಿ ತಾಲೂಕಿನಾದ್ಯಂತ ಎಲ್ಲ ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ  ಶೌಚಾಲಯ,ಶಾಲಾ ಕಂಪೌಂಡ, ಆಟದ ಮೈದಾನ, ಅಡುಗೆ ಕೋಣೆ, ಶಾಲಾ ಮೈದಾನಕ್ಕೆ ಪೇವರ್ಸ್ ಗಳ ಅಳವಡಿಕೆ ಹೀಗೆ ಹತ್ತು ಹಲವಾರು ಶಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು ಅದರಲ್ಲಿ ಒಂದಿಷ್ಟು ಕಾಮಗಾರಿಗಳು ಪೂರ್ಣ ಗೊಂಡಿದ್ದು, ಇನ್ನುಳಿದ ಕಾಮಗಾರಿಗಳು ಪ್ರಾರಂಭದ ಹಂತದಲ್ಲಿವೆ, ಆದಷ್ಟು ಬೇಗನೆ ಇನ್ನುಳಿದ ಕಾಮಗಾರಿಗಳನ್ನು ಪೂರ್ಣ ಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

ದೇವಲಾಪುರ ಶಾಲೆಯ ಮಕ್ಕಳು ಅಭ್ಯಾಸ ಮಾಡುವುದು ಮತ್ತು ಆಟ ಆಡುವುದನ್ನು ಗಮನಿಸಿದ ಅವರು ಮಕ್ಕಳ ಖುಷಿ ನೋಡಿ ತಮ್ಮ ಬಾಲ್ಯವನ್ನು  ನೆನಪು ಮಾಡಿಕೊಂಡರು. 

ಈ ಸಂದರ್ಭದಲ್ಲಿ ದೇವಲಾಪುರ ಗ್ರಾಪಂ ಪಿಡಿಓ ರಾಯನಾಯ್ಕರ ಅಧ್ಯಕ್ಷ ಮಂಜುನಾಥ ಗೊಡಿ, ಉಪಾಧ್ಯಕ್ಷ ಕೊಟುರಸಾಬ ನಧಾಪ್, ತಾಪಂ ಐಇಸಿ ಸಂಯೋಜಕರು ಎಸ್. ವಿ ಹಿರೇಮಠ, ಮತ್ತು ಶಾಲಾ ಸಿಬ್ಬಂದಿಗಳು ಹಾಗೂ ಮಕ್ಕಳು ಉಪಸ್ಥಿತರಿದ್ದರು.

Share This Article
";