ಚನ್ನಮ್ಮನ ಕಿತ್ತೂರು: ಶತಾಯ ಗತಾಯ ಅಧಿಕಾರದ ಗದ್ದುಗೆ ಹಿಡಿಯುವ ನಿಟ್ಟಿನಲ್ಲಿ ಅಳೆದೂ ತೂಗಿ ಪಕ್ಕಾ ಗೆಲ್ಲುವ ಕುದುರೆಗಳಿಗೆ ಈ ಬಾರಿ ಕಾಂಗ್ರೆಸ್ ಹೈ ಕಮಾಂಡ್ ಟಿಕೇಟ್ ಘೋಷಣೆ ಮಾಡಿದ್ದಾರೆ.
ಮೊದಲ ಹಂತದಲ್ಲಿ ಹಾಲಿ ಶಾಸಕರು ಮತ್ತು ಯಾವುದೇ ಪ್ರತಿಸ್ಪರ್ಧಿಗಳು ಇರದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಇಬ್ಬರು ಮೂವರು ಆಕಾಂಕ್ಷಿಗಳು ಇರುವಲ್ಲಿ ಟಿಕೇಟ್ ವಿಳಂಬ ಮಾಡಿ ಅಳೆದು ತೂಗಿ ಟಿಕೇಟ್ ಘೋಷಿಸಿದ್ದಾರೆ.
ನಾಲ್ಕು ದಶಕಗಳಿಗೂ ಹೆಚ್ಚು ಸಕ್ರಿಯ ರಾಜ್ಯರಾಜಕಾರಣದಲ್ಲಿ ಗುರುತಿಸಿಕೊಂಡ ಪ್ರಭಾವಿ ನಾಯಕ ಡಿ.ಬಿ.ಇನಾಮದಾರ ಅವರು ಅನಾರೋಗ್ಯದ ಕಾರಣದಿಂದಾಗಿ ಟಿಕೇಟ್ ವಂಚಿತರಾಗಿದ್ದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ಗೆಲುವಿನ ರೇಸ್‌ನಲ್ಲಿರುವ ಡಿ. ಬಿ ಇನಾಮದಾರ ಅವರ ಅಳಿಯ ಬಾಬಾಸಾಹೇಬ ಪಾಟೀಲ ಅವರನ್ನು ಈ ಬಾರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಅವರ ಅಸಂಖ್ಯಾತ ಅಭಿಮಾನಿಗಳಲ್ಲಿ ಸಂತಸವನ್ನುಂಟು ಮಾಡಿದೆ.
ಟಿಕೇಟ್ ಘೋಷಣೆಯಾಗುತ್ತಿದ್ದಂತೆ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಬಾಬಾಸಾಹೇಬ ಪಾಟೀಲ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಗೆಲುವಿನ ಹೊಸ್ತಿಲಲ್ಲಿ ನಿಂತಿರುವಂತೆ ಸಂಭ್ರಮಿಸುತ್ತಿದ್ದಾರೆ.
ಕಿತ್ತೂರಲ್ಲಿ ಕಾಂಗ್ರೆಸ್ ಕಮಾಲ್
ಕಳೆದ ಬಾರಿಯೂ ಮಾವ-ಅಳಿಯನ ಜಿದ್ದಾಜಿದ್ದಿಗೆ ಕಾಂಗ್ರೆಸ್ ಮತವಿಭಜನೆಯಾಗಿತ್ತು ಈ ಭಾರಿ ಇದಕ್ಕೆ ಅವಕಾಶ ನೀಡದಂತೆ ಜಾಗರೂಕತೆ ವಹಿಸಿದ ನಾಯಕರು ಗೆಲುವನ್ನೇ ಮಾನದಂಡ ವನ್ನಾಗಿಸಿ ಟಿಕೇಟ್ ಹಂಚಿಕೆ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ದಿಸಿ ಸುಮಾರು25 ಸಾವಿರಕ್ಕೂ ಹೆಚ್ಚು ಮತ ಪಡೆದು ಸೋಲುಂಡರೂ ಎದೆಗುಂದದೇ ನಿರಂತರವಾಗಿ ಕ್ಷೇತ್ರದಲ್ಲಿ ಸಕ್ರಿಯವಾಗಿ ಸಮಾಜ ಸೇವೆ ಮಾಡುತ್ತ ಮತ್ತಷ್ಟು ಪ್ರತಿಯನ್ನು ಕಾಯ್ದುಕೊಂಡು ಇದೀಗ ಕೈ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.
ಭರವಸೆಯ ನಾಯಕ ಬಾಬಾಸಾಹೇಬ ಪಾಟೀಲ
ಬದಲಾದ ರಾಜಕೀಯ ವಿದ್ಯಮಾನದಲ್ಲಿ ನಿರಂತರ ಜನಸಂಪರ್ಕದಿಂದಾಗಿ ಬಾಬಾಸಾಹೇಬ ಪಾಟೀಲ ಪ್ರತಿ ಬೂತ್ ಮಟ್ಟದಲ್ಲೂ ತನ್ನದೇಯಾದ ಅಭಿಮಾನಿಗಳನ್ನು ಸಂಪಾದಿಸಿದ್ದು ಹಾಲಿ ಬಿಜೆಪಿ ಶಾಸಕರ ಆಡಳಿತ ವಿರೋಧಿ ನಿಲುವು ಮತ್ತು ಸ್ಥಳೀಯ ಬಿಜೆಪಿ ಮುಖಂಡರ ಮನಸ್ತಾಪ ಮತ್ತು ಬಿಜೆಪಿ ಮೂಲ ಕಾರ್ಯಕರ್ತರ ಕಡೆಗಣನೆ ಮತದಾರ ಈ ಬಾರಿ ಬದಲಾವಣೆ ಬಯಸಿರುವುದು ಸ್ಪಷ್ಟವಾಗಿದೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಗೆಲುವಿನ ಬತ್ತಳಿಕೆಯಲ್ಲಿ ಕಿತ್ತೂರು ಸೇರುವ ನಿರೀಕ್ಷೆ ಹೆಚ್ಚಾಗಿದೆ.
• ಕಾಂಗ್ರೇಸ್ ಹೈಕಮಾಂಡ್ ಯಾರಿಗೆ ಟಿಕೇಟ್ ನೀಡಿದ್ದರು ನಾನು ಕೆಪಿಸಿಸಿ ಸದಸ್ಯೆಯಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದು ನನ್ನ ಕರ್ತವ್ಯೆ. ಬಾಬಾಸಾಹೇಬ ಪಾಟೀಲರಿಗೆ ಪಕ್ಷ ಟಿಕೇಟು ನಿಡಿದ್ದು ಸಂತಸ ತಂದಿದೆ ಅವರ ಗೆಲುವಿಗೆ ಹಗಲಿರಳು ಶ್ರಮಿಸುವೆ. ರೋಹಿಣಿ ಬಾ ಪಾಟೀಲ ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ ನೇಗಿನಹಾಳ