ಮಹಿಳೆ ಜೊತೆ ಠಾಣೆಯಲ್ಲೇ ರಾಸಲೀಲೆ!ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎ.ಎಸ್‌.ಐ

ಉಮೇಶ ಗೌರಿ (ಯರಡಾಲ)

ವಿಶಾಖಪಟ್ಟಣಂ(ಆ.29): ಠಾಣೆಯಲ್ಲೇ ಸರಸ-ಸಲ್ಲಾಪ, ಪ್ರತಿ ದಿನ ಮಹಿಳೆಯರ ಜೊತೆ ಚಕ್ಕಂದ ದಿನವೂ ನಡೆಯುತ್ತಿತ್ತು. ದಿಢೀರ್ ಆಗಿ ಹಿರಿಯ ಪೊಲೀಸ್ ಅಧಿಕಾರಿ ಠಾಣೆಗೆ ಭೇಟಿ ನೀಡಿದಾಗ ಅಧಿಕಾರಿಗೆ ಕಂಡಿದ್ದು ರಾಸಲೀಲೆ. ಇದೀಗ ಹಿರಿಯ ಎಎಸ್‌ಐ ಅಮಾನತ್ತುಗೊಂಡಿದ್ದಾರೆ. ಇತ್ತ ಆಂತರಿಕ ತನಿಖೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಈ ಪೊಲೀಸಪ್ಪನ ಕೆಲ ವಿಡಿಯೋಗಳು ಹೊರಬಂದಿದೆ.

ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್‌ ರಾತ್ರಿಯಾದರೆ ಸಾಕು ಪೊಲೀಸ್ ಠಾಣೆಯನ್ನೇ ಬೆಡ್ ರೂಂ ಮಾಡಿಕೊಂಡಿದ್ದ. ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ. ಕಂಠಪೂರ್ತಿ ಕುಡಿದು ಒಬ್ಬೊಬ್ಬ ಮಹಿಳೆಯರ ಜೊತೆ ಸರಸ ಸಲ್ಲಾಪ ನಡೆಸುತ್ತಿದ್ದ. ಆದರೆ ದಿಢೀರ್ ಆಗಿ ಹಿರಿಯ ಅಧಿಕಾರಿ ಪೊಲೀಸ್ ಠಾಣೆಗೆ ಎಂಟ್ರಿಕೊಟ್ಟಿದ್ದಾರೆ. ಹಿರಿಯ ಅಧಿಕಾರಿ ಒಂದು ಕ್ಷಣ ಗೊಂದಲಕ್ಕೀಡಾಗಿದ್ದಾರೆ.ತಾನೂ ಯಾರದ್ದೂ ಮನೆಯ ಬೆಡ್ ರೂಂ ಗೆ ಪ್ರವೇಶ ಮಾಡಿದೆನಾ ಅಥವಾ ಪೊಲೀಸ್ ಠಾಣೆಗೆ ಬಂದಿದ್ದೇನಾ ಅನ್ನೋ ಗೊಂದಲ ಶುರುವಾಗಿದೆ. ಕಾರಣ ಎಎಸ್‌ಐ ದೃಶ್ಯಗಳು ಹಾಗಿತ್ತು. ಹಿರಿಯ ಅಧಿಕಾರಿ ಕೈಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಎಎಸ್‌ಐ ಅಮಾನತ್ತುಗೊಂಡಿದ್ದಾರೆ. ವಿಶಾಖಪಟ್ಟಣದ ಕೊಥಕೋಟ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. 

ರವಿಕಾಮಥಮ್ ಪೊಲೀಸ್ ಠಾಣೆಯ ಎಎಸ್ಐ ಅಪ್ಪಾರಾವ್ ಅವರನ್ನು ಅದೇ ಜಿಲ್ಲೆಯ ಕೊಥಕೊಟ ಪೊಲೀಸ್ ಠಾಣೆಯ ಸಿಬ್ಬಂದಿ ಕೊರತೆಯಿಂದ ಕೆಲ ದಿನಗಳ ಕಾಲ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಅದರಲ್ಲೂ ಪ್ರಮುಖವಾಗಿ ರಾತ್ರಿ ಪಾಳಿಯ ಜವಾಬ್ದಾರಿ ನೀಡಲಾಗಿತ್ತು. ಈ ಪೊಲೀಸ್ ಠಾಣೆ ಪಟ್ಟಣದಿಂದ ಹೊರವಲಯದಲ್ಲಿರುವ ಎಎಸ್ಐ ಅಪ್ಪಾರಾವ್‌ಗೆ ಸಿಕ್ಕಿದ್ದೇ ಚಾನ್ಸ್ ಎಂಬಂತಾಗಿದೆ. 

ಕಂಠಪೂರ್ತಿ ಕುಡಿದು ಕರ್ತವ್ಯಕ್ಕೆ ಹಾಜರಾದ ಅಪ್ಪಾರಾವ್, ರಾತ್ರಿ 10.30 ಸುಮಾರಿಗೆ ಮಹಿಳೆಯೊಬ್ಬರನ್ನು ಕರೆದುಕೊಂಡು ಠಾಣೆಗೆ ಬಂದಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪೊಲೀಸ್ ಪೇದೆ, ಈ ರೀತಿಯ ವರ್ತನೆ ಸರಿಯಲ್ಲ. ತಕ್ಷಣವೇ ಮಹಿಳೆಯನ್ನು ಸುರಕ್ಷಿತವಾಗಿ ಬಿಡುವಂತೆ ತಾಕೀಕು ಮಾಡಿದ್ದಾರೆ. ಇದರಿಂದ ಕೆರಳಿದ ಎಎಸ್ಐ ಅಪ್ಪಾರಾವ್, ನಾನು ಎಎಸ್ಐ ನಿನ್ನ ಆದೇಶ ಪಾಲಿಸುವುದು ನನ್ನ ಕೆಲಸವಲ್ಲ ಎಂದು ಗದರಿಸಿದ್ದಾನೆ.

ಇತ್ತ ಪೊಲೀಸ್ ಪೇದೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಇದರಿಂದ ಹಿರಿಯ ಅಧಿಕಾರಿಗಳ ತಂಡ ನೇರವಾಗಿ ಪೊಲೀಸ್ ಠಾಣೆಗೆ ಆಗಮಿಸಿದೆ. ಈ ವೇಳೆ ಅಪ್ಪಾರಾವ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ತಕ್ಷಣವೇ ಅಪ್ಪಾರಾವ್ ಅವರನ್ನು ಅಮಾನತುಗೊಳಿಸಾಗಿದೆ. ಇದೀಗ ತನಿಖೆ ನಡೆಯುತ್ತಿದೆ. ಇನ್ನೇನು ಕೆಲ ತಿಂಗಳಲ್ಲಿ ನಿವೃತ್ತಿಯಾಗಬೇಕಿದ್ದ ಅಪ್ಪಾರಾವ್ ಅಸಲಿಯತ್ತು ಇದೀಗ ಹೊರಬಂದಿದೆ.

Share This Article
";