ಪೊಲೀಸ್ ಇಲಾಖೆಗೆ 200 ಕೋಟಿ ರೂ.ಅನುದಾನ ಇಲಾಖೆಗೆ ಬಂಪರ್ ಗಿಟ್ಟ: ಆರಗ ಜ್ಞಾನೇಂದ್ರ

ಮಂಡ್ಯ (ಅ.15): ಮಂಡ್ಯದ ಡಿಎಆರ್ ಆವರಣದಲ್ಲಿ 36 ಪೊಲೀಸ್ ವಸತಿ ಗೃಹ, ಡಿಎಆರ್ ಆಡಳಿತ ಕಚೇರಿ ಕಟ್ಟಡ, ಶ್ವಾನದಳ, ಸೆಂಟ್ರಲ್ ಪೊಲೀಸ್ ಠಾಣೆ ಕಟ್ಟಡಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಕಳೆದರಡು ವರ್ಷಗಳಲ್ಲಿ ಪೊಲೀಸ್ ಇಲಾಖೆಗೆ 200 ಕೋಟಿ ರು. ಅನುದಾನವನ್ನು ರಾಜ್ಯ ಸರ್ಕಾರ ನೀಡಿದೆ.ಆದರೆ ಸ್ವಾತಂತ್ರ್ಯ ಬಂದ ನಂತರದಲ್ಲಿ ಇಷ್ಟು ಮೊತ್ತದ ಹಣವನ್ನು ಯಾರ ಕಾಲದಲ್ಲಿಯೂ ನೀಡಿಲ್ಲ ಎಂದರು.

ಪ್ರಸಕ್ತ ವರ್ಷ ರಾಜ್ಯದಲ್ಲಿ 100 ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿದೆ. ಇದುವರೆಗೆ ವರ್ಷಕ್ಕೆ 4 ರಿಂದ 5 ಪೊಲೀಸ್ ಠಾಣೆಗಳು ಮಾತ್ರ ನಿರ್ಮಾಣ ವಾಗುತ್ತಿದ್ದವು ಎಂದರು.

ಪೊಲೀಸ್ ವಸತಿ ಗೃಹದ ಸಮಸ್ಯೆ ತೀವ್ರವಾಗಿರುವು ದನ್ನು ಮನಗಂಡು 11 ಸಾವಿರ ವಸತಿಗೃಹಗಳನ್ನು ಪೂರ್ಣಗೊಳಿಸಿ ಹಸ್ತಾಂತರಿಸಲಾಗಿದೆ. ಇನ್ನೂ 10 ಸಾವಿರ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲು ನಿರ್ಧರಿಸಿ ಟೆಂಡರ್ ಕರೆಯಲಾಗಿದೆ.

ಇದುವರೆಗಿದ್ದ ಸಿಂಗಲ್ ಬೆಡ್‌ರೂಂಗೆ ಬದಲಾಗಿ ಎರಡು ಬೆಡ್ ರೂಂಗಳುಳ್ಳ ವಸತಿ ಗೃಹಗಳನ್ನು ನಿರ್ಮಿಸಲಾಗುವುದು ಎಂದರು.

ರಾಜ್ಯದಲ್ಲಿ ಪಿಎಸ್‌ಐ ಹಂತದ140 ಪೊಲೀಸ್ ಠಾಣೆಗಳನ್ನು ಸಿಪಿಐ ದರ್ಜೆಗೇರಿಸಲಾಗಿದೆ.ಸೈಬರ್ ವಿಭಾಗವನ್ನು ಶಕ್ತಿಯುತಗೊಳಿಸಿದ್ದೇವೆ. .ಸೈಬರ್ ವಿಭಾಗವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಗುಜರಾತ್ ರಾಜ್ಯದ ಸೈಬರ್ ವಿಭಾಗದೊಂದಿಗೆ ಒಪ್ಪಂದ ಮಾಡಿಕೊಂಡು ಹೆಚ್ಚಿನ ತರಬೇತಿ ಕೊಡಿಸಲಾಗುತ್ತಿದೆ.

ರಾಜ್ಯದಲ್ಲಿ ಕೊಲೆ, ಅತ್ಯಾಚಾರ ಸೇರಿದಂತೆ ಇನ್ನಿತರ ಅಪರಾಧ ಪ್ರಕರಣಗಳು ನಡೆದ ಸಂದರ್ಭದಲ್ಲಿ ಎಫ್‌ಎಸ್ ಎಲ್ ತಜ್ಞರು ಸ್ಥಳಕ್ಕೆ ಆಗಮಿಸಬೇಕು, ಸಾಕ್ಷ್ಯಗಳನ್ನು ನೇರವಾಗಿ ಸಂಗ್ರಹಿಸಬೇಕೆಂಬ ಕಾರಣಕ್ಕೆ 250 ವಿಧಿ ವಿಜ್ಞಾನ ತಜ್ಞರನ್ನು ನೇಮಕ ಮಾಡಿಕೊಳ್ಳಲು ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸಲಾಗಿದೆ.

ಈ ಸಂದರ್ಭದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ, ವಿಧಾನಪರಿಷತ್ ಸದಸ್ಯರಾದ ಎನ್. ಅಪ್ಪಾಜಿಗೌಡ, ಶಾಸಕ ಎಂ. ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ನಗರಸಭಾ ಅಧ್ಯಕ್ಷ ಎಚ್.ಎಸ್.ಮಂಜು, ರಾಜ್ಯ ಐಜಿಪಿ ಪ್ರವೀಣ್‌ಸೂದ್, ಐಪಿಎಸ್ ಅಧಿಕಾರಿ ಎ.ಎಸ್. ಎನ್.ಮೂರ್ತಿ, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ಎಂ.ಅಶ್ವಿನಿ, ಎಎಸ್‌ಪಿ ಡಾ.ಧನಂಜಯ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";