ಬೈಲಹೊಂಗಲ: ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದರ ರೈತರಿಗೆ ಕಬ್ಬಿನ ಬಿಲ್ಲ ಪಾವತಿ ಮಾಡುವಂತೆ ಒತ್ತಾಯಿಸಿ, ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಮಂಗಳವಾರ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅಖಂಡ ಕರ್ನಾಟಕ ರೈತ ಸಂಘಟನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ವಾಲಿ, ಧಾರವಾಡ ಜಿಲ್ಲಾಧ್ಯಕ್ಷ ಶಿವಾನಂದ ಹೊಳೆಹಡಗಲಿ, ತಾಲೂಕಾ ಮುಖಂಡ ಮಲ್ಲಿಕಾರ್ಜುನ ಹುಂಬಿ ಮಾತನಾಡಿ, ಜಿಲ್ಲೆಯ ರೈತರು ಕಬ್ಬು ಬೆಳೆದು ಕಾರ್ಖಾನೆಗಳಿಗೆ ಕಬ್ಬು ಪೂರೈಸಿ ಎರಡು ತಿಂಗಳಾದರೂ ಯಾವುದೇ ಕಂತು ಬಿಡುಗಡೆ ಮಾಡಿಲ್ಲ. ರೈತರು ಸಾಲ ಮಾಡಿ , ಕಷ್ಟಪಟ್ಟು ಬೆಳೆ ಬೆಳೆದು ಕಾರ್ಖಾನೆಗಳಿಗೆ ಕಳುಹಿಸಿದ್ದು ಸಕಾಲಕ್ಕೆ ಸಾಲ ಮರುಪಾವತಿ ಮಾಡದೇ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಒಂದು ಕಡೆ ಸರ್ಕಾರ ಕಬ್ಬು ಬೆಳೆ ಬೆಳೆದ ರೈತರಿಗೆ ಕಬ್ಬು ಕಾರ್ಖಾನೆಗೆ ಪೂರೈಸಿದ 15 ದಿನಗಳ ಒಳಗಾಗಿ ಕಂತು ಪಾವತಿಸಬೇಕೆಂದು ಆದೇಶವಿದ್ದರೂ ಕೆಲವು ಕಾರ್ಖಾನೆಗಳು ಮಾತ್ರ ಕಂತು ಬಿಡುಗಡೆ ಮಾಡಿದ್ದು, ಇನ್ನೂಳಿದ ಕಾರ್ಖಾನೆಗಳು ರೈತರ ಖಾತೆಗೆ ಯಾವೂದೇ ಒಂದು ಕಂತು ಬಿಡುಗಡೆ ಮಾಡಿಲ್ಲ. ಸರ್ಕಾರ ಆದೇಶ ಕೇವಲ ಕಾಗದ ಪತ್ರದಲ್ಲಿ ಮಾತ್ರ ಸೀಮಿತವಾಗಿದೆ. ಕೂಡಲೇ ಸಂಭಂದಪಟ್ಟ ಸಚಿವರು ಕಾರ್ಖಾನೆಗಳಿಗೆ ನಿರ್ದೇಶನ ನೀಡಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದರು.
ರೈತರು ಬೆಳೆದ ಕಬ್ಬುಗಳನ್ನು 12 ತಿಂಗಳ ಒಳಗಾಗಿ ಕಟಾವು ಮಾಡಬೇಕು, 15 ತಿಂಗಳೂ ಗತಿಸಿದರೂ ಕೂಡ ಇನ್ನು ಹೊಲಗಳಲ್ಲಿ ಕಬ್ಬು ಬೆಳೆದು ನಿಂತಿದೆ. ಇದರಿಂದ ರೈತರಿಗೆ ಇಳುವರಿ ಕಡಿಮೆಯಾಗಿ ನಷ್ಟ ಅನುಭಸುವಂತಾಗಿದೆ. ಕಾರ್ಖಾನೆಗಳು ಉಳಿದ ಕಬ್ಬನ್ನು ಕಟಾವು ಮಾಡಿಕೊಳ್ಳಬೇಕು. ಕೂಡಲೇ ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಸದಸ್ಯರು, ರೈತ ಮುಖಂಡರ ಸಭೆ ಕರೆದು ಸಮಸ್ಯೆಯನ್ನು ಇತ್ಯರ್ಥಪಡಿಸಬೆಕೇಂದು ಒತ್ತಾಯಿಸಿದರು.
ನಮ್ಮ ಬೇಡಿಕೆಯನ್ನು 15 ದಿನಗಳ ಒಳಗಾಗಿ ಈಡೇರಿಸದಿದ್ದರೇ ಉಗ್ರ ಪ್ರತಿಭಟನೆ ಮಾಡುವುದಾಗಿ ಮನವಿ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಕಾಂತ ಶಿರಹಟ್ಟಿ, ಬಿ.ಎಂ.ದಳವಾಯಿ, ನಿಂಗಪ್ಪ ನಂದಿ, ಮಹೇಶ ಕಾದ್ರೊಳಿ, ಚನ್ನಪ್ಪ ಗಣಾಚಾರಿ, ಬಸವರಾಜ ಡೊಂಗರಗಾವಿ, ಯಲ್ಲಪ್ಪ ಕರಡಿಗುದ್ದಿ, ಶೇಖಪ್ಪ ಪರವನ್ನವರ, ಅರ್ಜುನ ನಾಯ್ಕರ, ಶಿವನಪ್ಪ ಮರೇದ, ಬಾಬು ಸಂಗೊಳ್ಳಿ, ಮಂಜುನಾಥ ಮೂಲಿಮನಿ, ಮಡಿವಾಳಪ್ಪ ಮತ್ತಿಕೊಪ್ಪ, ಸೋಮಲಿಂಗಪ್ಪ ಖೇಮನ್ನವರ, ಗೋಪಾಲ ಹುಲಮನಿ, ರುದ್ರಪ್ಪ ಹಳೇಮನಿ, ಬಸವರಾಜ ತುಪ್ಪದ, ಬಸಯ್ಯ ಹಿರೇಮಠ, ಶಿವನಾಯ್ಕ ಪಾಟೀಲ ಸೇರಿದಂತೆ ಅನೇಕ ರೈತ ಮುಂಖಡರು ಇದ್ದರು.