ಮಲ್ಲಮ್ಮನ ಬೆಳವಡಿಯ ಸರ್ಕಾರಿ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ .

ಉಮೇಶ ಗೌರಿ (ಯರಡಾಲ)

ಬೈಲಹೊಂಗಲ: ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ಮಲ್ಲಮ್ಮನ ಬೆಳವಡಿಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಏಳನೇ ತರಗತಿ ವಿದ್ಯಾರ್ಥಿನಿಯರ ಬೀಳ್ಕೊಡುವ ಸಮಾರಂಭ ಜರುಗಿತು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎನ್. ಪ್ಯಾಟಿ ಅವರು ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ ಇಂದಿನ ಅಗತ್ಯವಾಗಿದೆ ಎಂದು ಮಾತನಾಡಿದರು. ತಾಲೂಕಾ ಅಕ್ಷರ ದಾಸೋಹ ಅಧಿಕಾರಿ ಪಿ.ಡಿ.ಮೆಳವಂಕಿ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಕಸಾಳೆ, ಗ್ರಾಮ ಪಂಚಾಯತಿ ಬೆಳವಡಿಯ ಅಧ್ಯಕ್ಷೆ ರೇಣುಕಾ ಕುರಿ ಪಾಲ್ಗೊಂಡು ಚೈಲ್ಡ್ ಪ್ರೋಫೈಲ್ ಗಳನ್ನು ಉದ್ಘಾಟಿಸಿದರು. ಸರ್ಕಾರಿ ಶಾಲೆಯ ಬಲವರ್ಧನೆಗಾಗಿ ಗ್ರಾಮಸ್ಥರ ಸಹಕಾರದ ಅಗತ್ಯತೆ ಕುರಿತು ಅತಿಥಿಗಳು ಮಾತನಾಡಿದರು.

ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದ ಸಂದರ್ಭ

ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಚಯ್ಯ ಹಿರೇಮಠ ಮಾತನಾಡಿ ಮಾದರಿ ಶಾಲೆಯನ್ನಾಗಿಸುವ ತಮ್ಮ ಕನಸನ್ನು ಬಿಚ್ಚಿಡುತ್ತಾ ಪ್ರಸ್ತುತ ಹೆಣ್ಣು ಮಕ್ಕಳ ಶಾಲೆಯನ್ನು ವೀರರಾಣಿ ಬೆಳವಡಿ ಮಲ್ಲಮ್ಮ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ಎಂದು ಪುನರ್ ನಾಮಕರಿಸುವ ಇಂಗಿತ ಹಾಗೂ ಅವಶ್ಯಕತೆಯನ್ನು ವ್ಯಕ್ತಪಡಿಸಿದರು.

ವಿವಿಧ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಶಾಲೆಗೆ ದೇಣಿಗೆ ನೀಡಿದ  ಕಾಮಧೇನು ಗೆಳೆಯರ ಬಳಗದ  ಫಕ್ಕೀರ ಬಡದೆಮ್ಮಿ, ನೇತಾಜಿ ತರುಣ ಸಂಘದ ಕಾಂತಯ್ಯ ಕಾರಿಮನಿ, ಎಸ್.ಎಂ ಕರೀಕಟ್ಟಿ ಶಿಕ್ಷಕರು,  ಉಸ್ಮಾನ ನದಾಫ ಪಂಚಾಯತಿ ಅಭಿವೃದ್ಧಿ ಅಧಿಕಾರಿ,  ಚನ್ನಬಸಪ್ಪ ಭರಮಗೌಡರ,  ಈರಣ್ಣಾ ತುರಾಯಿ,  ವಿಠಲ ಪಿಸೆ,  ಶಂಕರ ಶೆಟ್ಟಿ,ನಿರ್ಮಲಾ‌ ರಾಚಪ್ಪ ಮಟ್ಟಿ, ಮಂಜುಳಾ ಫ ಬಡದೆಮ್ಮಿ, ಬಸಮ್ಮ ಪರಮನಾಯ್ಕರ,  ಅನಸೂಯಾ ಪರಮನಾಯ್ಕರ,  ಆದರ್ಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಯ್ಯನಗೌಡಾ ಪಾಟೀಲ,  ರಾಚಯ್ಯ ಹಿರೇಮಠರವರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು ಮೂಡಿ ಬಂದವು.

ವಿವಿಧ ಶಾಲೆಯ ಮುಖ್ಯೋಪಾಧ್ಯರು, ಶಿಕ್ಷಕರು ಹಾಗೂ ಎಸ,ಡಿ,ಎಂ,ಸಿ ಯ ಸದಸ್ಯರು, ಬೆಳವಡಿ ಗ್ರಾಮಪಂಚಾಯತ ಸದಸ್ಯರು, ಮುದ್ದು ಮಕ್ಕಳು, ಪಾಲಕರು ಮಕ್ಕಳ ಕಾರ್ಯಕ್ರಮಗಳನ್ನು ವೀಕ್ಷಿಸಿ ಪ್ರೋತ್ಸಾಹಿಸಿದರು.
ಶಾಲಾ ಮುಖ್ಯೋಪಾಧ್ಯೆ ಎನ್.ಎಸ್.ಪಡಸಲಗಿ ಸ್ವಾಗತಿಸಿದರು, ಶಿಕ್ಷಕ ಆನಂದ ಮಾಲಗಿತ್ತಿಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";