ಎದೆನೋವು: ಆಸ್ಪತ್ರೆಗೆ ದಾಖಲಾದ ಅಣ್ಣಾ ಹಝಾರೆ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಮುಂಬೈ: ಸಾಮಾಜಿಕ ಹೋರಾಟಗಾರ ಕಿಷನ್ ಬಾಬುರಾವ್ ಹಜಾರೆ (ಅಣ್ಣಾ ಹಜಾರೆ) ಅವರನ್ನು ಗುರುವಾರ ಎದೆನೋವು ಕಾಣಿಸಿಕೊಂಡ ನಂತರ ಪುಣೆಯ ರೂಬಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಆಸ್ಪತ್ರೆಗೆ ದಾಖಲಾದ ಕ್ಷಣದಿಂದ ಅವರನ್ನು ನಿಗಾದಲ್ಲಿ ಇರಿಸಲಾಗಿದೆ ಹಾಗೂ ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ ಎಂದು ರೂಬಿ ಹಾಲ್ ಕ್ಲಿನಿಕ್‌ನ ವೈದ್ಯಕೀಯ ಅಧೀಕ್ಷಕ ಡಾ. ಅವಧೂತ್ ಬೋಡಮ್‌ವಾಡ್ ಹೇಳಿದ್ದಾರೆ.

 

Share This Article
";