ಪಬ್‌ಗೆ ಹೋಗಿಲ್ಲ ಅಂದ್ರೆ ಪ್ರತಾಪ್ ಸಿಂಹಗೆ ನಿದ್ದೆ ಬರಲ್ಲ:ಡಾ. ಪುಷ್ಪ ಅಮರನಾಥ್

ಉಮೇಶ ಗೌರಿ (ಯರಡಾಲ)

ಮೈಸೂರು: ಸಂಸದ ಪ್ರತಾಪ್ ಸಿಂಹಗೆ ಪಬ್ ಸಂಸ್ಕೃತಿಯಿದೆ. ಪಬ್‌ಗೆ ಹೋಗಿಲ್ಲ ಅಂದ್ರೆ ಪ್ರತಾಪ್ ಸಿಂಹಗೆ ನಿದ್ದೆ ಬರಲ್ಲ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ವಾರಕ್ಕೆರಡು ಬಾರಿ ಪಬ್​ಗೆ ಹೋಗುತ್ತಾರೆ. ಅದಕ್ಕೆ ಸಾಕ್ಷಿ ವಿಡಿಯೋಗಳು ನಮ್ಮ ಬಳಿ ಇವೆ . ಪ್ರತಾಪ್ ಸಿಂಹ ಮಾತನಾಡಲು ಯೋಗ್ಯತೆ ಇಲ್ಲದಿರುವ ವ್ಯಕ್ತಿ ಎಂದಿದ್ದಾರೆ.

ಇನ್ನು ಪ್ರತಾಪ್ ಸಿಂಹಗೆ ಬಾಯಲ್ಲೊಂದು ಮಾತು, ನಡೆದುಕೊಳ್ಳೊದು ಒಂದು ರೀತಿ. ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅದ್ಯಾವುದೋ ವಿಡಿಯೋಗಳು ಬಿಡಬಾರದು ಅಂತಾ ಕೋರ್ಟ್​ನಿಂದ ಇಂಜೆಕ್ಷನ್ ಆರ್ಡರ್ ಯಾಕೆ ತಂದಿದ್ದಾರೆ. ಅವರು ಸರಿಯಾಗಿದ್ದಿದರೆ ಯಾಕೆ ತಡೆಯಾಜ್ಞೆ ತರುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

Share This Article
";