ಚಿಕ್ಕಬಳ್ಳಾಪುರ : ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಮಹಿಳೆ ಲಕ್ಷ್ಮೀ ವಿಠ್ಠಲ ಕಳ್ಳಿಮನಿ ಇವರು ವಲಸೆ ಕುರಿಗಾರರ ಕುಂಟುಂಬವಾಗಿದೆ. ಫೇ.18 ರಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಕುರಿ ಹಟ್ಟಿಯಿಂದ ಅಡುಗೆ ಮಾಡಲು ಕಟ್ಟಿಗೆ ತರಲು ಹೋದಾಗ ಮಹಮ್ಮದ ಕೋಲಕಾರ ಅಲಿಯಾಸ ಮುಕಬಲ್ ಎಂಬ ವ್ಯಕ್ತಿ ಅತ್ಯಾಚಾರ ವೆಸಗಿ ಕೋಲೆ ಮಾಡಿರುತ್ತಾರೆ.
ಈ ಘೋರ ಕೃತ್ಯವನ್ನು ವಿರೋಧಿಸಿ ಚಿಕ್ಕಬಳ್ಳಾಪುರ ತಾಲ್ಲೂಕು ಶ್ರೀ ಕನಕದಾಸ ಕುರುಬರ ಸಂಘ(ರಿ’) ಸಂಸ್ಥಾಪಕ ಸದಸ್ಯ ಮತ್ತು ರಾಜ್ಯ ಕಾರ್ಯದರ್ಶಿ ಎಸ್ ಟಿ ಮೀಸಲಾತಿ ಹೋರಾಟ ಸಮಿತಿ ಹಾಗೂ ಪ್ರಧಾನ ಕಾರ್ಯದರ್ಶಿ ಪತ್ರಕರ್ತರಾದ ಆನಂದ್ ಎಂ ಮಾತನಾಡಿದರು, ಈಗಾಗಲೇ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿಯನ್ನು ಬಂದಿಸಲಾಗಿದ್ದು, ಆದರೆ, ಈ ಕೃತ್ಯೆದಲ್ಲಿ ಇನ್ನೂ ಹಲವಾರು ಜನ ಪಾಲ್ಗೋಂಡಿದ್ದಾರೆ ಎಂದು ಮೃತ ಲಕ್ಷ್ಮೀ ಕುಂಟುಂಬಸ್ಥರು ಅನುಮಾನ ವ್ಯಕ್ತ ಪಟ್ಟಿರುತ್ತಾರೆ. ಆದ್ದರಿಂದ ಈ ಕುರಿತು ಸೂಕ್ತ ತನಿಖೆಯನ್ನು ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಮತ್ತು ಮೃತ ಲಕ್ಷ್ಮಿ ಇವರಿಗೆ ಮೂರು ಚಿಕ್ಕ ಮಕ್ಕಳಿದ್ದು, ಇವರ ಕುಂಟುಂಬ ಸಂಪೂರ್ಣ ಕುರಿ ಸಾಕಾಣಿಕೆಯ ಮೇಲೆ ಅವಲಂಬಣೆಯಾಗಿದ್ದು, ರಾಜ್ಯ ಸರ್ಕಾರ ಕುಂಟುಂಬಕ್ಕೆ ಐದು ಲಕ್ಷ ಪರಿಹಾರ ಘೋಷಿಸಿದೆ. ಆದರೆ, ಸರ್ಕಾರ ಘೋಷಣೆ ಮಾಡಿರುವ 5ಲಕ್ಷ ರೂ ಪರಿಹಾರ ತೃಪ್ತಿಕರವಾಗಿಲ್ಲ ಮತ್ತು ವಯಸ್ಸಿನ ಮಿತಿ ಅನುಸಾರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಹುದ್ದೆಯನ್ನು ನೀಡಬೇಕೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ತ್ವರಿತವಾಗಿ ಸಂತ್ರಸ್ತರಿಗೆ ಸ್ಪಂದಿಸಿದ ಘನವೆತ್ತ ಸರ್ಕಾರಕ್ಕೆ ಅಬಿನಂದನೆ ಮತ್ತು ರಾಜ್ಯದ ಎಲ್ಲಾ ಸಂಚಾರಿ ಕುರಿಗಾರರಿಗೆ ಅರಣ್ಯದಲ್ಲಿ ಅಧಿಕಾರಿಗಳಿಂದ ತೊಂದರೆ, ಕಳ್ಳತನ ಮತ್ತು ಹಲವು ಘಟನೆಗಳಲ್ಲಿ ಸಾವನ್ನಪ್ಪಿರುವ ಕುರಿಗಳಿಗೆ ಪರಿಹಾರ ನೀಡದಿರುವುದು ಸೇರಿದಂತೆ ಅನೇಕ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಅವರಿಗೆ ಸುಕ್ತವಾದ ಭದ್ರತೆಯನ್ನು ನೀಡಬೇಕು. ಆರೋಪಿಗೆ ಕಠಿಣವಾದ ಶಿಕ್ಷೆ ಆಗಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ವರದಿ: ಎ ಧನಂಜಯ್ ಚಿಕ್ಕಬಳ್ಳಾಪುರ.