ಸುದ್ದಿ ಸದ್ದು ನ್ಯೂಸ್
ಬೆಳಗಾವಿ: ಈಗಿನ ಕಾಲದಲ್ಲಿ ನಾವು ನೀವೆಲ್ಲರು ಕೆಲಸಗಳಲ್ಲಿ ಅದೆಷ್ಟು ಬ್ಯೂಸಿ ಆಗ್ತಿದ್ದೀವೋ ಅದೇರೀತಿ ಮಾರಣಾಂತಿಕ ಖಾಯಿಲೆಗಳು ಅಂದರೆ ಕೈ, ಕಾಲು ಮೊನಕಾಲು,ಮೊನಕೈ, ನಡನೋವು ಸೇರಿದಂತೆ ಇನ್ನೂ ಅನೇಕ ರೀತಿಯ ನೋವುಗಳು ಅತ್ಯಂತ ವೇಗವಾಗಿ ಹೆಚ್ಚುತಿವೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಯುವ ಪೀಳಿಗೆಗೆ ಹೆಚ್ಚಾಗಿ ಕಾಡುತ್ತಿರುವದು ಇಂತಹ ಅನೇಕ ತರಹದ ನೋವುಗಳು. ಪ್ರತಿಷ್ಟಿತ ಆಸ್ಪತ್ರೆಗಳನ್ನ ತಿರುಗಾಡಿ ಲಕ್ಷಾಂತರ ಹಣ ಖರ್ಚುಮಾಡಿದರು ಇಂತಹ ನೋವಿರುವ ಖಾಯಿಲೆಗಳು ಮತ್ತು ನೋವುಗಳು ವಾಸಿಯೆ ಆಗುತ್ತಿಲ್ಲ. ಆದರೆ ಇಂತಹ ಅನೇಕ ನೋವುಗಳಿಗೆ ಕ್ಷಣಮಾತ್ರದಲ್ಲಿ ದೂರುಮಾಡುವ ನಾಟಿ ವೈದ್ಯರೊಬ್ಬರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ಇದ್ದಾರೆ. ಇವರು ವೈದ್ಯಲೋಕಕ್ಕು ಕಡಿಮೆಯಾಗದ ತಿರ್ವವಾದ ನೋವುಗಳನ್ನು ಕ್ಷಣಾರ್ದದಲ್ಲಿ ಮಾಯ ಮಾಡುವ ನಾಟಿ ವೈದ್ಯ. ಮುನವಳ್ಳಿ ಮತ್ತು ಆರೇಳು ತಾಲೂಕಿಗೆ ಇವರೆ ಸಂಜೀವಿನಿ. “ವೈದ್ಯೋ ನಾರಾಯಣ ಹರಿ” ಎಂಬ ನಾನ್ನುಡಿಯನ್ನು ಇಂತಹ ನಾಟಿ ವೈದ್ಯರನ್ನು ನೋಡಿಯೆ ಹೇಳಿರಬೇಕು. ಅದು ಅಕ್ಷರ ಸಹ ನಿಜ ಅನ್ನುವದು ಈ ನಾಟಿ ವೈದ್ಯ ಸಂಗಪ್ಪ ಬಸಪ್ಪ ಉಜ್ಜಿನಕೊಪ್ಪ ಅವರನ್ನು ನೋಡಿದರೆ ತಿಳಿಯುತ್ತದೆ.
ಇಡಿ ವಿಶ್ವವೆ ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಮುಂದುವರೆದಿದ್ದರೂ ಇಂತಹ ನಾಟಿ ವೈದ್ಯರು ಅನ್ನೋದು ಇಂದಿಗೂ ಕೂಡ ನಮ್ಮ ಪರಂಪರೆಯನ್ನು ನಮ್ಮ ಭಾರತ ಜೀವಂತವಾಗಿ ಇರಿಸಿಕೊಂಡಿದೆ. ಅದು ಇಂದಿಗೂ ಅದೆಷ್ಟೋ ಜನರಿಗೆ ನಿತ್ಯ ಸಂಜೀವಿನಿಯಾಗಿ ಜೀವ ನೀಡುತ್ತಾ ಬರುತ್ತಿದೆ.
ತಮ್ಮ ಪಾರಂಪರಿಕ ಕೈ ಗುಣದಿಂದಲೆ ಪ್ರಸಿದ್ದವಾಗಿರುವ ನಾಟಿ ವೈದ್ಯರಾದ ಸಂಗಪ್ಪ , ಇವರು ಸುಮರು ೫೫ ವರ್ಷಗಳಿಂದ ತಮ್ಮ ಜೀವನವನ್ನು ರೋಗಿಗಳ ಶ್ರುಶ್ರೂಷೆಗಾಗಿ ಮುಡಿಪಾಗಿಟ್ಟು ಬಡವರ ಕೂಲಿಕಾರ್ಮಿಕರ, ದೀನದಲಿತರ, ಶ್ರೀಮಂತರ ಪಾಲಿಗೆ ನೋವು ನೀವಾರಿಸುವ ಜನ್ಮಜಾತ ವೈದ್ಯರಿವರು. ಇಂದು ಇವರಗೆ ಸುಮಾರು ೬೯ ವರ್ಷವಾದರು ಇವರು ಇಂದಿಗೂ ನವ ಯುವಕರಂತೆ, ಸೈಕಲ್ಲ ಮೇಲೆಯೆ ತಿರುಗಾಡುತ್ತಾರೆ.
ತಮ್ಮ ಅಜ್ಜ ಮತ್ತು ತಂದೆಯವರಿಂದ ಈ ನಾಟಿ ಚಿಕಿತ್ಸೆಯನ್ನು ಶುರು ಮಾಡಿದ ಇವರು ಇಂದು ಜಿಲ್ಲೆಯಲ್ಲಿ ಹಲವಾರು ಆಸ್ಪತ್ರೆಗಳು ಇದ್ದರು ಸಂಗಪ್ಪ ಅಜ್ಜನವರ ಹಸ್ತದ ನಾಟಿ ಚಿಕಿತ್ಸೆ ಮಾತ್ರ ಎಲ್ಲಾ ಆಸ್ಪತ್ರೆಗಳ ಚಿಕಿತ್ಸೆಗಿಂತ ವಿಭಿನ್ನ ಮತ್ತು ಮತ್ತು ಅತ್ಯಂತ ಪರಿಣಾಮಕಾರಿ ಜೊತೆಗೆ ಅಗ್ಗ ಕೂಡಾ. ನಾಡಿನ ಮೂಲೆ ಮೂಲೆಯಿಂದ ಸಾವಿರಾರು ರೋಗಿಗಳು ಬಂದು ಚಿಕಿತ್ಸೆ ಪಡೆದು ಹೋಗುತ್ತಾರೆ. ಸುಮಾರು 60 ವರ್ಷದಿಂದ ಚಿಕಿತ್ಸೆ ನೀಡುತ್ತಾ ಬಂದಿರುವ ಇವರು ಯಾವುದೇ ಫಲಾಪೇಕ್ಷೆ ಇಲ್ಲದೆ ಅಲ್ಲಿಯಿಂದ ಇಲ್ಲಿಯ ತನಕ ಉಚಿತವಾಗಿ ಚಿಕಿತ್ಸೆಯನ್ನು ನೀಡುವ ಪ್ರತ್ಯಕ್ಷ ದೇವರು.
ಇವರು ಓದಿದ್ದು ಸ್ವಲ್ಪ ಸಾಧನೆ ಮಾತ್ರ ಅಪಾರ. ಸಂಗಪ್ಪಜ್ಜನ ಮನೆಯ ಬಳಿ ಪ್ರತಿದಿನ ರೋಗಿಗಳು ಸಾಲು ಸಾಲಾಗಿ ನಿಲ್ಲುತ್ತಾರೆ. ಅವರ ಹತ್ತಿರ ಹೋಗಿ ಬಂದ ಜನರು ಹೇಳುವ ಹಾಗೆ ಸಂಗಪ್ಪಜ್ಜನವರ ಚಿಕಿತ್ಸೆ ಎಂತದು ಅಂದರೆ ಅರ್ಹ ವೈದ್ಯರು ಇನ್ನು ನಮ್ಮ ಕೈಯಿಂದ ಆಗುವುದಿಲ್ಲ ಎಂದು ಮರಳಿ ಮನೆಗೆ ಕಳಿಸಿದ ಅನೇಕ ರೋಗಿಗಳು ಸಂಗಪ್ಪಜ್ಜನವರ ಬಳಿ ಬಂದು ಚಿಕಿತ್ಸೆ ಪಡೆದು ಗುಣಮುಖರಾಗಿ ಎಂದಿನಂತೆ ತಿರುಗಾಡುತ್ತಿದ್ದಾರೆ. ಅಂತವರಲ್ಲಿ ನಾನು ಒಬ್ಬ ಪ್ರತಿಷ್ಟಿತ ಆಸ್ಪತ್ರೆಗಳೆಲ್ಲವನ್ನು ತಿರುಗಾಡಿ ಸಾವಿರಾರು ರೂಪಾಯಿ ಖರ್ಚು ಮಾಡಿದರು ಗುಣ ಕಾಣದ ನಾನು ಇವರ ಹಸ್ತಗುಣದಿಂದ ಗುಣಮುಖವಾಗಿದ್ದೇನೆ.
ಸಾವಿರಾರು ರೋಗಿಗಳಿಗೆ ಸಂಗಪ್ಪಜ್ಜ ನಾಟಿ ಚಿಕಿತ್ಸೆ ನೀಡಿ ನೋವು ನಿವಾರಿಸಿ ಜೀವದಾನ ಮಾಡಿರೋ ಮೃತ್ಯುಂಜಯ. ಸಂಗಪ್ಪಜ್ಜನವರ ನಿಸ್ವಾರ್ಥ ಸೇವೆಯನ್ನು ಸರ್ಕಾರಗಳಾಗಲಿ, ಸಂಘ-ಸಂಸ್ಥೆಗಳಾಗಲಿ ಇಂತಹ ನಾಟಿ ವೈದರನ್ನ ಗುರುತಿಸಿ ಗೌರವಿಸಿ ಪ್ರೇರೇಪಿಸುವ ಅವಶ್ಯಕತೆ ಇದೆ. ಸಂಗಪ್ಪಜ್ಜನವರ ನಿಸ್ವಾರ್ಥ ಸೇವೆ ಹೀಗೆಯೇ ಸದಾಕಾಲ ಮುಂದುವರೆಯಲಿ ಅನ್ನುವುದು ನಾಡಿನ ಜನರ ಆಶೆಯಾಗಿದೆ. ಯಾರಿಗಾದರೂ ಅವರ ಸಂಪರ್ಕಮಾಡುವ ಅವಶ್ಯಕತೆ ಇದ್ದರೆ ಅವರ ಪೋನ್ ನಂಬರಗೆ ಸಂಪರ್ಕಕಿಸಿ. ಸಂಗಪ್ಪಜ್ಜನವರ ಸಂಪರ್ಕ ಸಂಖ್ಯೆ 9739676539
ವರದಿ: ಬಸವರಾಜ ಚಿನಗುಡಿ ಚನ್ನಮ್ಮನ ಕಿತ್ತೂರು
ಮೋಬೈಲ್ ನಂಬರ್:9008869423