ಬಾರದ ಸಿಂಧುತ್ವ ಪ್ರಮಾಣಪತ್ರ: ಸಾರಿಗೆ ಇಲಾಖೆ ನೌಕರ ನೇಣು ಬಿಗಿದುಕೊಂಡು ಆತ್ಮಹತ್ಯೆ

ಉಮೇಶ ಗೌರಿ (ಯರಡಾಲ)

ಬೀದರ್: ಸಿಂಧುತ್ವಪತ್ರ ಬಾರದರಿಂದ ಬೇಸತ್ತ ಜಿಲ್ಲೆಯ ಹುಮನಾಬಾದ ತಾಲ್ಲೂಕು ಕುಮಾರಚಿಂಚೋಳಿ ಗ್ರಾಮದ ಓಂಕಾರ ರೇವಣಪ್ಪ ಶೇರಿಕಾರ( 35) ಭಾನುವಾರ ನಸುಕಿನ ಜಾವ ತಮ್ಮ ಹೊಲದಲ್ಲಿ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತನಿಗೆ 4ಜನ ಹೆಣ್ಣು ಮಕ್ಕಳಿದ್ದು, ನೌಕರಿ ಖಾಯಂ ಆಗುವ ಭರವಸೆ ಮೇಲೆ ಬಾಕಿ ಮಾಡಿ ಈಗಾಗಲೇ ಇಬ್ಬರ ಮದುವೆ ಮಾಡಿದ್ದಾರೆ. ರಾಜ್ಯ ಸರ್ಕಾರ ಎಸ್.ಟಿ.ಗೊಂಡ ಪ್ರಮಾಣಪತ್ರ ಆದೇಶದ ಮೇಲೆ ನೇಮಕಗೊಂಡಿದ್ದಾನೆ. ಪ್ರಮಾಣಪತ್ರ ಪರಿಶೀಲನೆಗಾಗಿ ಕಲ್ಬುರ್ಗಿ ಕಳಿಸಲಾಗಿದೆ.

ವ್ಯಕ್ತಿ ಸಾವಿಗೆ ರಾಜ್ಯ ಸರ್ಕಾರ ಸಿಂಧುತ್ವ ಕಲ್ಪಿಸದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಘಟನೆಗೆ ನೇರವಾಗಿ ಸರ್ಕಾರದ ಧೋರಣೆಯೇ ಎಸ್.ಟಿ.ಗೊಂಡ ಕಾರಣ ಎಂದು ನ್ಯಾಯವಾದಿ ಸತೀಶ ರಾಂಪೂರೆ ಮೊದಲಾದವರು ಆಕ್ರೋಶ ವ್ಯಕ್ತಪಡಿಸಿದರು. ಲೋಕೇಶ ಹಣಮಂತವಾಡಿ, ಸಂಜೀವಕುಮಾರ ವಡ್ಡನಕೇರಿ, ಮಲ್ಲಿಕಾರ್ಜುನ ಮೋಳಕೇರಿ, ವಿಜಯಕುಮಾರ ಚಿಂಚೋಳಿ, ಬಾಬಾ ಕುಮಾರ ಚಿಂಚೋಳಿ, ಅನೀಲ ಕುಮಾರಚಿಂಚೋಳಿ ಮತ್ತಿತರರಿದ್ದರು.

Share This Article
";