ಸರ್ವರೂ ಸಮಾನರು ರಾಜಯೋಗಿನಿ: ಬ್ರಹ್ಮಾಕುಮಾರಿ ಅಂಬಿಕಾ

ಯರಗಟ್ಟಿ (ಅ.09): ಸ್ಥಳೀಯ ಯರಗಟ್ಟಿಯ ಮಹಾಂತ ದುರದುಂಡೇಶ್ವರ ಮಠದ ಆವರಣದಲ್ಲಿ ಬ್ರಹ್ಮಾಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದಯದಿಂದ ದೀಪಾವಳಿ ಅಂಗವಾಗಿ ಚೈತನ್ಯ ದೇವಿಯರ ದಿವ್ಯ ದರ್ಶನ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿತ್ತು.

ಚೈತನ್ಯ ದೇವಿಯರ ಕುರಿತು ಬಿ. ಕೆ. ಸವಿತಾ ಅಕ್ಕನವರು ಮಾತನಾಡಿದರು ಪರಮಪಿತ ಪರಮಾತ್ಮ ನಿರಾಕಾರ ಶಿವನು ಕ್ರಿ. ಶ. 1937 ರಲ್ಲಿ ಒಬ್ಬ ವೃದ್ಧಮಾನವರ (ಬ್ರಹ್ಮಾ)ಶರೀರದಲ್ಲಿ ಪರಕಾಯ ಪ್ರವೇಶಮಾಡಿ ಈಶ್ವರೀಯ ಜ್ಞಾನ ಮತ್ತು ರಾಜಯೋಗದ ಶಿಕ್ಷಣವನ್ನು ಕಳೆದ 35 ವರ್ಷಗಳಿಂದ ಕೊಡುತ್ತಿದ್ದಾರೆ.

ಕಾಮ, ಕ್ರೋಧ, ಲೋಭ, ಮೋಹಗಳೆಂಬ ಪಂಚ ವಿಕಾರ ಗಳಿಗೆ ಮನುಷ್ಟ ವಶನಾಗಿ ಅಜ್ಞಾನದ ಕತ್ತಲೆಯಲ್ಲಿ ಅಲೆಯುತ್ತಿದ್ದಾನೆ.

ಘೋರ ಅಜ್ಞಾನದ ರಾತ್ರಿಯಾದ ಈ ಕಲಿಯುಗದ ಅಂತ್ಯದಲ್ಲಿ ಈಗ ಸ್ವಯಂ ಜ್ಞಾನ ಸೂರ್ಯ ಪರಮಪಿತ ಪರಮಾತ್ಮನು ಜ್ಞಾನದ ಬೆಳಕನ್ನು ಕೊಡುತ್ತಿರುವರು. ಪರಮಾತ್ಮನ ಸತ್ಯ ಪರಿಚಯವನ್ನು ಪಡೆಯಿರಿ.

ಮುಕ್ತಿ ಹಾಗೂ ಜೀವನ-ಮುಕ್ತಿ ಇದು ಪ್ರತಿಯೊಬ್ಬರ ಈಶ್ವರೀಯ ಜನ್ಮಸಿದ್ಧ ಹಕ್ಕು.ಪರಮಾತ್ಮ ಶಿವನ ನೆನಪು ಮಾಡಿ ಜನ್ಮ ಜನ್ಮಾಂತರದ ಪಾಪ ಕರ್ಮಗಳಿಂದ ಮುಕ್ತರಾಗಿರಿ ಹಾಗೂ ಪರಮಾತ್ಮನು ಸ್ಥಾಪನೆ ಮಾಡುತ್ತಿರುವ ಸುವರ್ಣ ಭಾರತದ ದೈವೀರಾಜ ಪದವಿಯನ್ನು ಪಡೆಯಿರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಳಗಾವಿ ಉಪವಲಯದ ಮುಖ್ಯಸ್ಥರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಅಂಬಿಕಾ ಅಕ್ಕನವರು ದಿವ್ಯ ಸಾನಿಧ್ಯ ವಹಿಸಿದ್ದರು, ಗೋಕಾಕ-ಜಮಖಂಡಿ ಸೇವಾ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಮೀರಾ ಅಕ್ಕನವರು ಅಧ್ಯಕ್ಷತೆಯನ್ನು ವಹಿಸಿದ್ದರು, ಅತಿಥಿಗಾಳಾಗಿ ಡಾ: ಕೆ. ವಿ. ಪಾಟೀಲ, ಡಾ: ಎಮ್. ಜಿ. ಪಾಟೀಲ, ಡಾ: ಚಿದಾನಂದ ಗಲಗಲಿ, ಡಾ: ಕೆ. ಎಸ್. ಮುಲ್ಲಾ, ಡಾ: ಪಿ. ಎಲ್. ತೇರಣಿ, ಡಾ: ವಿಶ್ವನಾಥ ತಾಂವಶಿ, ಡಾ: ಶ್ರೀಮತಿ ಶೀತಲ್ ತಾಂವಶಿ, ಡಾ: ಕಾಶಿನಾಥ ಅಂಗಡಿ, ಡಾ: ಬಿ. ಕೆ. ಬಡಿಗೇರ, ಡಾ: ವಿ. ಎಂ. ಪಟ್ಟಣ, ಬಿ. ಕೆ. ಜ್ಯೋತಿ ಅಕ್ಕನವರು, ಬ್ರಹ್ಮಾಕುಮಾರಿ ಜಯಶ್ರೀ ಅಕ್ಕನವರು, ಸ್ಥಳೀಯರು ಉಪಸ್ಥಿತಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";