ಸಾವೆ ಬೆಳೆಯುವ ನಾಡಿನಲ್ಲಿ ಅಕ್ಷರ ಬಿತ್ತಿದರು

ಇತ್ತೀಚಿಗೆ ಅಕ್ಷರ ಸಂತ ಹಾಜಬ್ಬ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದರು. ಒಬ್ಬ ಕಿತ್ತಳೆ ಮಾರುವವ ಶಾಲೆಯನ್ನು ತೆರದು ಅಕ್ಷರವನ್ನು ನೀಡಿದರು. ಅಂತಹದೇ ಪ್ರೇರಣಾದಾಯಕ ಕತೆ ನಮ್ಮ ಚ.ಕಿತ್ತೂರ ತಾಲೂಕಿನ ಚಿಕ್ಕ ಗ್ರಾಮ ಖೋದನಪುರದಲ್ಲಿ ನಡೆದಿದೆ. ಇಲ್ಲಿ ಇಡೀ ಸಮುದಾಯ ಸರಕಾರಿ ಶಾಲೆಗೆ ಮೂಲಸೌಕರ್ಯ ಒದಗಿಸಿ ಮೆರಗು ತಂದಿದ್ದಾರೆ. ಸುಮಾರು 2 ಸಾವಿರ ಜನಸಂಖ್ಯೆಯಿಂದ ಕೂಡಿದ ಈ ಊರಿನ ಮುಖ್ಯ ಉದ್ಯೋಗ ಕೃಷಿ. ಇಲ್ಲಿ ನಶಸಿ ಹೋಗುತ್ತಿರುವ ಸಿರಿಧಾನ್ಯ ಸಾವೆಯನ್ನು ಇಂದಿಗೂ ಬೆಳೆಯುತ್ತಿದ್ದಾರೆ.ಇಂತಹ ಊರಿನ ನಾಗರಿಕರು ಇಂದು ಸರಕಾರಿ ಶಾಲೆಯಲ್ಲಿ ಅಕ್ಷರವನ್ನು ಬಿತ್ತಿದ್ದಾರೆ.

ಕೋವಿಡ್ ನಂತರ ಶಾಲೆಯ ಅಂಗಳದಲ್ಲಿ ಮಕ್ಕಳ ಕಲರವ ಶಾಲೆಯ ಘಂಟೆಯ ಶಬ್ದ ಕೇಳಿಸುತ್ತಿವೆ.ನಿಧಾನವಾಗಿ ಶೈಕ್ಷಣಿಕ ಚಟುವಟಿಕೆಗಳು ಹಳಿಗೆ ಬರುತ್ತಿವೆ. ಆಟ ಪಾಠಗಳನ್ನು ಗ್ರಾಮದಲ್ಲಿ ಕುತೂಹಲದಿಂದ ಜನ ಗಮನಿಸುತ್ತಿದ್ದಾರೆ ಇಂತಹ ಸಂಧರ್ಬದಲ್ಲಿ ಚ ಕಿತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಆರ.ಟಿ.ಬಳಿಗಾರ ತಮ್ಮ ವಲಯದ ಎಲ್ಲ ಶಿಕ್ಷಕರ ಸಭೆಯಲ್ಲಿ ಶಾಲೆಗಳನ್ನು ಹೇಗೆಲ್ಲಾ ಬಲವರ್ಧನೆ ಮಾಡಬಹುದು ಎನ್ನುವದನ್ನು ಹೇಳಿದ್ದರು. ಇದರಿಂದ ಶಿಕ್ಷಕರೆಲ್ಲ ಪ್ರೇರಿತರಾಗಿದ್ದರು.

ಇಂತಹ ಸಂಧರ್ಬದಲ್ಲಿ ಖೋದನಪುರದ ಶಾಲೆಗೆ ಸುಮಾರು 15 ವರ್ಷದಿಂದ ಬಣ್ಣ ಇಲ್ಲದೇ ಇರುವದನ್ನು ಗಮನಿಸಿದ್ದ ಅಲ್ಲಿ ಶಿಕ್ಷಕಿಯಾದ ಜಿ.ಬಿ ಬಡಸ್ ಹಾಗೂ ಅಲ್ಲಿಯ ಮುಖ್ಯೋಪಾದ್ಯಾಯರಾದ ವಿ.ಜಿ ಕರೆರುದ್ರನ್ನವರ, ಶಿಕ್ಷಕರರಾದ ವಿ.ಎಸ್ ಹುಲ್ಲೂರ, ಎ.ಬಿ.ಚಚಡಿ ಕೆ.ಎಸ್.ಜುಲಪಿ, ಎನ್.ಆಯ್.ಖುದ್ದುನ್ನವರ, ಎಸ್.ಎ.ನಧಾಪ್ ,ಎ.ಎಸ್ ಮುಜಾವರ ಇದಕ್ಕೆ ಕಾಯಕಲ್ಪ ಮಾಡಬೇಕು ಎಂದು ನಿರ್ಧರಿಸಿದರು.

ಶಾಲೆಯ ಮೇಲ್ಛಾವಣಿ ದುರಸ್ಥಿ ಮಾಡುತ್ತಿದ್ದ ಚಿತ್ರ

ಅದರಂತೆ ಅಲ್ಲಿ ಸುಮಾರು 15 ವರ್ಷದಿಂದ ಪಾಠ ಮಾಡಿ ಊರಿನ ಪರಿಚಯವಿದ್ದ ಶಿಕ್ಷಕಿ ಜಿ.ಬಿ.ಬಡಸ ಅಂದು ಸಮುದಾಯದ ಎದುರಿನಲ್ಲಿ ತಮ್ಮ ಮನದಿಂಗಿತವನ್ನು ವ್ಯಕ್ತ ಪಡಿಸಿದಾಗ ಎಲ್ಲರೂ ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಸಭೆ ಸೇರಿದರು.

ಹೀಗೆ ಮುಂದೆ ಬಂದವರಲ್ಲಿ ಶಾಲೆಯಲ್ಲಿ ಕಲಿತು ಉದ್ಯೋಗಸ್ಥರಾದ ಆರಕ್ಷರು ಶಿಕ್ಷಕರು,ಚುನಾಯಿತ ಜನಪ್ರತಿನಿಧಿಗಳು, ಶಿಕ್ಷಣ ಪ್ರೇಮಿಗಳು ,ಅರಣ್ಯ ಸೇವಕರು, ಕೆ.ಇ.ಬಿಯವರು, ವೈದ್ಯರು. ಸ್ವ ಸಹಾಯ ಸಂಘದವರು, ಸೈನಿಕರು, ಮುಖ್ಯವಾಗಿ ಅಡುಗೆ ಸಿಬ್ಬಂದಿಯವರು ಕೂಡಾ ತಮ್ಮ ಅಳಿಲು ಸೇವೆಯ ಮೂಲಕ ಸಹಾಯ ಮಾಡಲು ಮುಂದೆ ಬಂದದ್ದು ಕೆಲಸಕ್ಕೆ ಕಸವು ಬಂದಿತು. ಮುಂದೆ ಇವರೆಲ್ಲರಿಂದ ಸುಮಾರು 99 ಸಾವಿರ ಹಣ ದೇಣಿಗೆ ರೂಪದಲ್ಲಿ ಬಂದಿತು. ಹಣವನ್ನು ಸದ್ಭಳಕೆ ಮಾಡಲು ಸಭೆಯಲ್ಲಿ ಯೋಜನೆ ರೂಪಿಸಿಕೊಳ್ಳಲಾಯಿತು.

ಶಾಲೆಗೆ ದೇಣಿಗೆ ನೀಡಿದವರ ವಿವರ

ಇಂದಿಗೂ ಅಲ್ಲಿ ಕಲಿತ ಯೋಧರು ಬಂದು ರಾಷ್ಟ್ರೀಯ ಧ್ಜಜಾರೋಹಣ ಕಾರ್ಯಕ್ರಮದಲ್ಲಿ ಸಮವಸ್ತ್ರದಲ್ಲಿ ಬಂದು ಪಾಲ್ಗೊಳುತ್ತಾರೆ.

ಗೋಡೆಗಳಿಗೆ ರಂಗು ತುಂಬಿದರು ನಮ್ಮೂರಿನ ಮಕ್ಕಳು ಮಳೆಯಿಂದ ನೆನೆಯಬಾರದು ಎಂದು ಶಾಲೆಯ ಮೇಲ್ಛಾವಣೆಯನ್ನು ಸುಭದ್ರ ಮಾಡಿಕೊಂಡರು. ನಂತರ ಶಾಲೆಯ ಆವರಣ ಹಾಗೂ ವರ್ಗಕೋಣೆಯ ಗೋಡೆಗಳನ್ನು ಬಣ್ಣದಿಂದ ಕಂಗೋಳಿಸುವಂತೆ ಮಾಡಿ ಕಲಿಕಾ ವಾತಾವರಣಕ್ಕೆ ಪೂರಕ ಮಾಡಿಕೊಂಡಿದ್ದಾರೆ. ಇಂದು ಅಲ್ಲಿಯ ಮಕ್ಕಳು ಸಂತಸದಿಂದ ಸರಕಾರಿ ಶಾಲೆಗೆ ಬಲು ಅಕ್ಕರೆಯಿಂದ ಬರುತ್ತಿದ್ದಾರೆ. ಆಟ ಪಾಠಗಳ ಕಲರವ ಅಲ್ಲಿರುವ ಗದ್ದೆ ಕೆಲಸದಲ್ಲಿ ನಿರತರಾದ ಪಾಲಕರಿಗೆ ಕೇಳಿಸುತ್ತಿದೆ. ಇದರಿಂದ ನನ್ನ ಮಗು ಶಾಲೆಯಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಿದ್ದಾನೆ ಎನ್ನುವ ಭಾವನೆ ಮೂಡಿದೆ.ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲೀಷ, ಗಣಿತ, ವಿಜ್ಞಾನ ವಿಷಯಗಳ ಕಲಿಕೆ ಈ ಶಾಲೆಯಲ್ಲಿ ಪರಿಣಿತ ಹೊಂದಿದ ಶಿಕ್ಷಕರು ಪಾಠ ಮಾಡುವದರಿಂದ ಮಕ್ಕಳು ಕಲಿಕೆಯಲ್ಲಿ ಪ್ರಗತಿ ಕಂಡಿದೆ.

ಆ ಶಾಲೆಯ ಶಿಕ್ಷಕರು ಹಾಗೂ ಖೋದಾನಪುರದ ಗ್ರಾಮಸ್ಥರು ಸರಕಾರಿ ಶಾಲೆಗೆ ಮೂಲಸೌಕರ್ಯ ಒದಗಿಸಿ ಮಕ್ಕಳ ಕಲಿಕೆಗೆ ಪೂರಕ ಕಾರ್ಯ ಶ್ಲಾಘನೀಯ. ಶಿಕ್ಷಣ ಇಲಾಖೆ ವತಿಯಿಂದ ಎಲ್ಲರಿಗೂ  ವಿಶೇಷವಾದ ಧನ್ಯವಾದಗಳನ್ನು ತಿಳಿಸುತ್ತೇನೆ.

ಆರ.ಟಿ.ಬಳಿಗಾರ.ಕ್ಷೇತ್ರ ಶಿಕ್ಷಣಾಧಿಕಾರಿ ಚ.ಕಿತ್ತೂರು.

 

ಸ್ಥಳೀಯ ಶಿಕ್ಷಕರು ಸಮುದಾಯದ ಸಹಭಾಗಿತ್ವವನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದು ಇಲಾಖೆಗೆ ಹೆಸರು ತಂದಿದೆ ಇದರಿಂದ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಕೊಳ್ಳಬಹುದಾಗಿದೆ.ಆ ಶಾಲೆಯ ಎಲ್ಲ ಶಿಕ್ಷಕರಿಗೂ ಧನ್ಯವಾದಗಳು

    ಅಶೋಕ ಸಾಲಸ್ಕರ ಸಿ.ಆರ್.ಪಿ

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";