ಪನಾಮಾ ಪೇಪರ್​​ ಹಗರಣ! ಇಡಿ ತನಿಖಾಧಿಕಾರಿಗಳ ಮುಂದೆ ಹಾಜರ ; ನಟಿ ಐಶ್ವರ್ಯಾ ರೈ

ಉಮೇಶ ಗೌರಿ (ಯರಡಾಲ)

ಬೆಂಗಳೂರು : ವಿಶ್ವದಾದ್ಯಂತ ಭಾರೀ ಚರ್ಚೆಯಾಗಿದ್ದ ಪನಾಮಾ ಪೇಪರ್ ಹಗರಣಕ್ಕೆ ಸಂಬಂಧಿಸಿ ಖ್ಯಾತ ನಟಿ ಐಶ್ವರ್ಯಾ ರೈ ಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ನೀಡಿದೆ. ಇಂದು ನಟಿ ಐಶ್ವರ್ಯಾ ರೈ ಲೋಕನಾಯಕ್‌ ಭವನದಲ್ಲಿ ಇಡಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

ವಿದೇಶಗಳಲ್ಲಿ ರಹಸ್ಯ ಆಸ್ತಿ-ಪಾಸ್ತಿ ಹೊಂದಿರೋ ಮಾಹಿತಿಯಿಂದಾಗಿ ದೆಹಲಿಯ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಐಶ್ವರ್ಯಾ ರೈ ಅವರು ವಿಚಾರಣೆಗೆ ಹಾಜರಾಗಿ ಮತ್ತಷ್ಟು ಕಾಲಾವಕಾಶ ಕೇಳಿದ್ದರು. 48 ವರ್ಷದ ಐಶ್ವರ್ಯಾ ಹೇಳಿಕೆ ದಾಖಲಿಸಿಕೊಂಡಿರೋ ಮಾಹಿತಿಯ ಬಗ್ಗೆ ವಿಚಾರ. ಇಡಿಯು 2017ರಿಂದಲೇ ವಿದೇಶಿ ಆಸ್ತಿ ಬಗ್ಗೆ ತನಿಖೆ ಆರಂಭಿಸಿದ್ದು, ಎರಡು ಬಾರಿ ಸಮನ್ಸ್ ಕೊಟ್ಟರೂ ಐಶ್ವರ್ಯ ವಿಚಾರಣೆಗೆ ಬಂದಿರಲಿಲ್ಲ.

Share This Article
";