ಸುಧಾಪುರ:ಕ್ಷೇತ್ರ ಸ್ವಾಧಿ ದಿಗಂಬರ ಜೈನ ಮಠ ಸೊಂದಾದಿಂದ ಕೊಡಮಾಡಲಾದ “ಆಚಾಯ೯ ಅಕಲಂಕ ದೇವ ಪುರಸ್ಕಾರ” ವನ್ನು ಅಕಲಂಕ ಕೇಸರಿ ಸ್ವಸ್ತಿ ಭಟ್ಟಾಕಳಂಕ ಭಟ್ಟಾರಕ ಮಹಾಸ್ವಾಮೀಜಿಯವರು ಸೊಂದಾದಲ್ಲಿ ವಿ.ತೇಜಸ್ವಿನಿ ಅವರಿಗೆ ಪ್ರದಾನ ಮಾಡಿದರು.
ಖಾನಾಪುರ್ ತಾಲೂಕ ಕಸಾಪ ಗೌರವ ಕಾರ್ಯದರ್ಶಿ ಕಿರಣ್ ಸಾವಂತ ಹಾಗೂ ಬೆಳಗಾವಿ ಜಿಲ್ಲಾ ಕಸಾಪ ಸಹ ಮಾಧ್ಯಮ ಪ್ರತಿನಿಧಿ ಆಕಾಶ್ ಅರವಿಂದ ಥಬಾಜ ಸಂಶೋಧನಾ ಗ್ರಂಥವನ್ನು ನೀಡಿ ಸನ್ಮಾನಿಸಿದರು ಜೊತೆಗೆ ಗೇರುಸೊಪ್ಪೆಯ ಜ್ವಾಲಾಮಾಲಿನಿ ದೇವಿಯ ಅರ್ಚಕ ನಾಗರಾಜ್ ಅವರನ್ನು ಸಹ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರದ ಭಾಷಾಂತರ ನಿರ್ದೇಶನಾಲಯದ ನಿರ್ದೇಶಕ ಮತ್ತು ಕರ್ನಾಟಕ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ ಬೆಂಗಳೂರು ಅಧ್ಯಕ್ಷರಾದ ಅಜಿತ್ ಮುರುಗುಂಡೆ ಮಾತನಾಡಿ ವಿದುಷಿ ತೇಜಸ್ವಿನಿಯವರು ಮಂಗಳೂರುನಲ್ಲಿ ಜನಿಸಿದರೂ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದು ತಮ್ಮ ನೆಲೆ ಕಂಡುಕೊಂಡರು. ತಂದೆಯ ಹೆಸರು:ಕೆ.ಎಚ್.ಧಮ೯ರಾಜ (ಯೋಗ ಶಿಕ್ಷಕರು).ತಾಯಿಯ ಹೆಸರು:ರಾತ್ನಮ್ಮ(ರಾಧಾ). ತಮ್ಮ ಪ್ರಾಥಮಿಕ, ಮಾಧ್ಯಮಿಕ, ಪದವಿ ಶಿಕ್ಷಣವನ್ನು ಮೈಸೂರಿನಲ್ಲಿ ಪೂರೈಸಿದರು. ಇವರು 10ನೇ ಕ್ಲಾಸಿನ ಪರೀಕ್ಷೆ ಮುಗಿಸಿದ ತಕ್ಷಣವೇ 10ದಿನ ಸಂಸ್ಕೃತ ಸಂಭಾಷಣೆ ಶಿಬಿರದ ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಕಲಿಸಿದ ಪ್ರವಿಣೆ.ಪದವಿ ಶಿಕ್ಷಣ ಮುಗಿದ ಬಳಿಕ ದೇಶದಾದ್ಯಂತ 150ಕ್ಕೂ ಹೆಚ್ಚು ಸಂಸ್ಕೃತ ಸಂಭಾಷಣೆ ಶಿಬಿರಗಳಲ್ಲಿ ಪಾಲ್ಗೊಂಡು ಸಂಸ್ಕೃತವನ್ನು ಮಾತನಾಡಲು ವಿದ್ಯಾರ್ಥಿಗಳಿಗೆ ಕಲಿಸಿ ವಿದ್ವಾಂಸರ ಗಮನ ಸೆಳೆದರು.
ಸಹಜವಾಗಿಯೇ ಚಿಕ್ಕಂದಿನಿಂದಲೂ ಸಂಸ್ಕೃತ ಅಭ್ಯಾಸವೆಂದರೆ ಅಚ್ಚುಮೆಚ್ಚು. ಇದನ್ನು ಮನಗಂಡ ಪಾಲಕರು ಮಗಳು ಉತ್ಸಾಹಕ್ಕೆ ನೀರು ಎರೆದು ಬೆಳೆಸಿದರು.ಉನ್ನತ ಶಿಕ್ಷಣವನ್ನು ಸಂಸ್ಕೃತ ಎಂ ಎ. ಅನ್ನು ಮೈಸೂರು ವಿ.ವಿ, ಅಲಂಕಾರ ಶಾಸ್ತ್ರ ವಿದ್ವತ್ ಎಂ.ಎ. ಹಾಗೂ ಜೈನ ಸಿದ್ಧಾಂತ ವಿದ್ವತ್ ಅನ್ನು ಕ.ಸಂಸ್ಕೃತ. ವಿ.ವಿ.ಬೆಂಗಳೂರು, ಜೈನಾಮಗ ಪ್ರವೀಣ ಮೈಸೂರಿನಲ್ಲಿ,ಹಿಂದಿ ಪ್ರವಿಣ ಚೆನ್ನೈನಲ್ಲಿ ಪೂರೈಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಸಹಾಯಕಿ ಆಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಸಂಸ್ಕೃತ ಪೂರ್ಣವಾದ ಪ್ರವಚನ ಜೊತೆಗೆ ಶ್ರದ್ಧೆಯಿಂದ ಸದ್ದಿಲ್ಲದೆ ಜಿನವಾಣಿಯ ಸೇವಕರಾಗಿ ಮನೆಮಾತಾದರು.
ಈ ಮಧ್ಯೆ ಬೆಂಗಳೂರಿನ ವ್ಯಾಪಾರಸ್ಥರಾದ ಶ್ರೀ ನಿತಿನ್ ಅವರನ್ನು ವಿವಾಹವಾದರು.ಈ ದಂಪತಿಗಳಿಗೆ ಕು.ತ್ರಿಶಾ,ಚಿ. ವರುಣ್ ಎಂಬ ಇಬ್ಬರು ಮಕ್ಕಳಿದ್ದಾರೆ. ಪತಿದೇವರನ್ನು ಬಹುಬೇಗನೆ ಕಳೆದುಕೊಂಡರು ಮಕ್ಕಳನ್ನು ಸಾಕುವ ಜವಾಬ್ದಾರಿ ಹೊತ್ತುಕೊಂಡು ಅದನ್ನು ಸಮರ್ಥವಾಗಿ ನಿಭಾಯಿಸಿ ಸಮಾಜಕ್ಕೆ ಮಾದರಿ ಆದರು.
ಸಂಸ್ಕೃತವನ್ನು ಕರಗತ ಮಾಡಿಕೊಂಡು ತಮ್ಮ ಜೀವನವನ್ನು ಅದಕ್ಕಾಗಿ ಮುಡುಪಾಗಿಟ್ಟವರು. ವಿವಾಹವಾದ ಬಳಿಕ ಅತ್ತೆಯವರ ಮೂಲಕ ಜೈನಧರ್ಮದಲ್ಲಿ ಆಸಕ್ತರಾಗಿ ಜೈನ ಧರ್ಮದ ಪ್ರಭಾವನೆಗೆ ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಟ್ಟ ಪ್ರತಿಫಲವಾಗಿ ಪ್ರಸ್ತುತ ನಮೊಸ್ತು ಶಾಸನ ಸೇವಾ ಸಮಿತಿಯ ಕರ್ನಾಟಕದ ಅಧ್ಯಕ್ಷರಾಗಿದ್ದಾರೆ.
ಕೃತಿಗಳು :1)Hampana’s Bibliography. 2)ಯೋಗ ದರ್ಶನ. 3)ಶ್ರಾವಕ ಕರ್ತವ್ಯ 4)ಷಡ್ ಲೇಶ್ಯಾ ದರ್ಪಣ. 5)ಕ್ರಿಯಾ ಸಾರ.6)ಭಟ್ಟ ಅಕಲಂಕ ಚರಿತೆ ಮತ್ತು ದ್ವಾದಶಾನುಪ್ರೇಕ್ಷೆ.7)ವಾರಷಾಣು ಪೇಕ್ಬಾ, ಪ್ರೇಕ್ಷಾ ದೇಶನಾ.8)ಎರ್ತೂರು ಶಾಂತಿರಾಜ ಶಾಸ್ತ್ರಿ.ಇತ್ಯಾದಿ.
ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲೀಷ್ ಮತ್ತು ತುಳು ಭಾಷಾ ಪ್ರವಿಣೆಯಾದ ಇವರು 32ಕ್ಕೂ ಹೆಚ್ಚು ಸಂಸ್ಕೃತ, ಹಿಂದಿ, ಆಂಗ್ಲ, ಕನ್ನಡ ಭಾಷೆಗಳಲ್ಲಿ ತಮ್ಮ ವಿದ್ವತ್ಪೂರ್ಣ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅನೇಕ ಲೇಖನಗಳನ್ನು ಬರೆದು ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜೈನಾರಾಧನಾ ಮಂಡಲಾನಾಮೇಕಮಧ್ಯನಂ (ಸಂಸ್ಕೃತ) ಎಂಬ ವಿಷಯದಲ್ಲಿ ಪಿಎಚ್ ಡಿ ಮಹಾಪ್ರಬಂಧವನ್ನು ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರಕ್ಕೆ ಮಂಡಿಸಿದ್ದಾರೆ. ಅದು ಆವಾಡ೯ ಆಗಬೇಕಷ್ಟೇ. ಜಿನದಶ೯ನ ಪ್ರಶಸ್ತಿಗೆ ಭಾಜನರಾದ ಇವರಿಗೆ ಹಲವಾರು ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌವಿಸಿವೆ.
ಜನ್ಮತಹ: ಅಂಗವೈಕಲ್ಯವಿದ್ದರೂ ಅಂಗವೈಕಲ್ಯ ಮನಸ್ಸಿಗೆ ಅದು ಶರೀರಕ್ಕಲ್ಲ ಎಂಬ ತಮ್ಮ ತಾಯಿಯವರ ವಾಕ್ಯದಂತೆ ಬದುಕು ಸಾಗಿಸುತ್ತಿದ್ದಾರೆ. ಇದು ನಮ್ಮಲ್ಲರಿಗೂ ಸ್ಪೂರ್ತಿಯ ಸೆಲೆ. ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು