ಬೆಳ್ಳಂಬೆಳಗ್ಗೆ ಎಸಿಬಿ ಶಾಕ್:18 ಅಧಿಕಾರಿಗಳ ನಿವಾಸಗಳ ಮೇಲೆ ಎಸಿಬಿ ಏಕಕಾಲಕ್ಕೆ ದಾಳಿ

ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳ ಭ್ರಷ್ಟ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ದಾಳಿ ಮುಂದುವರಿದಿದೆ.

ಬೆಂಗಳೂರು ಸೇರಿದಂತೆ ರಾಜ್ಯದ 75 ಕಡೆಗಳಲ್ಲಿ ಏಕಕಾಲದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿವಿಧ ಇಲಾಖೆಗಳ 18 ಅಧಿಕಾರಿಗಳ ಮನೆ, ಕಚೇರಿ, ಫಾರ್ಮ್ ಹೌಸ್, ಲೆಕ್ಕಪತ್ರ ಪರಿಶೋಧಕರ ಮನೆ ಮುಂತಾದೆಡೆ ಎಸಿಬಿ ದಾಳಿ ನಡೆಸಲಾಗಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿರುವ ಆರೋಪದಲ್ಲಿ ಈ ದಾಳಿ ನಡೆದಿದೆ.

ಭ್ರಷ್ಟಾಚಾರ ನಿಗ್ರಹ ದಳದಿಂದ ಒಟ್ಟು 100 ಅಧಿಕಾರಿಗಳು ಮತ್ತು 300 ಹೆಚ್ಚುವರಿ ಸಿಬ್ಬಂದಿಯನ್ನು ದಾಳಿಗೆ ನಿಯೋಜಿಸಲಾಗಿದೆ. ಬಾದಾಮಿ ಜಿಲ್ಲೆಯ ಬಾಗಲಕೋಟೆಯ ರೇಂಜ್ ಫಾರೆಸ್ಟ್ ಆಫೀಸರ್ (ಆರ್‌ಎಫ್‌ಒ) ಮನೆಯಲ್ಲಿ ಎಸಿಬಿ 3 ಕೆಜಿ ಶ್ರೀಗಂಧವನ್ನು ಪತ್ತೆ ಮಾಡಿದೆ.

ದಾಳಿ ವೇಳೆ ರಾಶಿ ರಾಶಿ ನೋಟುಗಳು, ಕೆಜಿಗಟ್ಟಲೆ ಚಿನ್ನಾಭರಣ, ಬೆಳ್ಳಿ ಪತ್ತೆಯಾಗಿದೆ. ಬೆಂಗಳೂರು, ಕೊಪ್ಪಳ, ಗದಗ, ಮಂಗಳೂರು, ಬೀದರ್ ಸೇರಿದಂತೆ ಹಲವು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆದಿದೆ.

ದಾಳಿಗೊಳಗಾದ  ಅಧಿಕಾರಿಗಳು: 
-ಜ್ಞಾನೇಂದ್ರಕುಮಾರ್, ಹೆಚ್ಚುವರಿ ಆಯುಕ್ತರು ಸಾರಿಗೆ, ಟ್ರಾಡ್ ಸಾರಿಗೆ ಮತ್ತು ಸುರಕ್ಷತೆ, ಬೆಂಗಳೂರು 

-ರಾಕೇಶ್ ಕುಮಾರ್ BDA, ಪಟ್ಟಣ ಯೋಜನೆ
-ರಮೇಶ ಕಣಕಟ್ಟೆ, ಆರ್.ಎಫ್.ಓ. ಸಾಮಾಜಿಕ ಅರಣ್ಯ, ಯಾದಗಿರಿ
-ಬಸವರಾಜ ಶೇಖರ ರೆಡ್ಡಿ ಪಾಟೀಲ್, ಕಾರ್ಯನಿರ್ವಾಹಕ ಅಭಿಯಂತರ, ಕೌಜಲಗಿ ವಿಭಾಗ, ಗೋಕಾಕ
-ಬಸವ ಕುಮಾರ್ ಎಸ್. ಅಣ್ಣಿಗೇರಿ, ಶಿರಸ್ತೇದಾರ್, ಡಿಸಿ ಕಛೇರಿ, ಗದಗ
-ಗಪಿನಾಥ್ ಸಾ ಎನ್ ಮಾಳಗಿ, ಪ್ರಾಜೆಕ್ಟ್ ಮ್ಯಾನೇಜರ್, ನಿರ್ಮಿತಿ ಕೇಂದ್ರ, ವಿಜಯಪುರ
-ಬಿ ಕೆ ಶಿವಕುಮಾರ್, ಹೆಚ್ಚುವರಿ ಡಿಟೆಕ್ಟರ್, ಇಂಡಸ್ಟ್ರಿವ್ಸ್ ಮತ್ತು ಕಾಮರ್ಸ್, ಬೆಂಗಳೂರು
-ಶಿವಾನಂದ್ ಪಿ ಶರಣಪ್ಪ ಖೇಡಗಿ, RFO, ಬಾದಾಮಿ
-ಮಂಜುನಾಥ್, ಸಹಾಯಕ ಆಯುಕ್ತ, ರಾಮನಗರ
-ಶ್ರೀನಿವಾಸ್, ಜನರಲ್ ಮ್ಯಾನೇಜರ್, ಸಮಾಜ ಕಲ್ಯಾಣ ಇಲಾಖೆ
-ಮಹೇಶ್ವರಪ್ಪ, ಜಿಲ್ಲಾ ಪರಿಸರ ಅಧಿಕಾರಿ, ದಾವಣಗೆರೆ
-ಕೃಷ್ಣನ್ ಎಇ, ಎಪಿಎಂಸಿ, ಹಾವೇರಿ
-ಚಲುವರಾಜ್, ಅಬಕಾರಿ ನಿರೀಕ್ಷಕರು, ಗುಂಡ್ಲುಪೇಟೆ ತಾಲೂಕು
-ಗಿರೀಶ್, ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಸುವಿವಿಭಾಗ
-ಬಾಲಕೃಷ್ಣ ಹೆಚ್ ಎನ್, ಪೊಲೀಸ್ ಇನ್ಸ್ ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ, ಮೈಸೂರು
-ಗವಿರಂಗಪ್ಪ, ಎಇಇ, ಪಿಡಬ್ಲ್ಯೂಡಿ, ಚಿಕ್ಕಮಂಗಳೂರು
-ಅಶೋಕ್ ರೆಡ್ಡಿ ಪಾಟೀಲ್, ಎಇಇ, ಕೃಷ್ಣ ಭಾಗ್ಯ ಜಲ ನಿಗಮ ಲಿ, ದೇವದುರ್ಗ ರಾಯಚೂರು
-ದಯಾ ಸುಂದರ್ ರಾಜು, AEE, KPTCL, ದಕ್ಷಿಣ ಕನ್ನಡ

ಮೂರು ತಿಂಗಳ ಹಿಂದೆ ಇದೇ ರೀತಿ ಎಸಿಬಿ ಅಧಿಕಾರಿಗಳು ಹಠಾತ್ ದಾಳಿ ನಡೆಸಿದ ವೇಳೆ ಅಧಿಕಾರಿ ಶಾಂತಗೌಡ ಬಿರಾದಾರ್ ಎಂಬುವವರ ಮನೆಯ ಪೈಪ್ ನಲ್ಲಿ ರಾಶಿರಾಶಿ ಕಂತೆ ಹಣವನ್ನು ಅಡಗಿಸಿಟ್ಟಿದ್ದು ಪತ್ತೆಯಾಗಿದ್ದು ರಾಜ್ಯಾದ್ಯಂತ ಸುದ್ದಿಯಾಗಿ ನಗೆಪಾಟಲಿಗೀಡಾಗಿತ್ತು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";