ಬೈಲಹೊಂಗಲ :ಐತಿಹಾಸಿಕ ಚನ್ನಮ್ಮನ ಕಿತ್ತೂರು ಮತಕ್ಷೇತ್ರದ ರೈತ ಶಕ್ತಿವಾದ ಚಿಕ್ಕಬಾಗೇವಾಡಿಯ ದಿ||ಬಾಬಾಗೌಡ್ರು ಪಾಟೀಲ ಸಭಾ ಭವನದಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಎಎಪಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ ಅವರು ಮಾತನಾಡಿ ರಾಜ್ಯದಲ್ಲಿ ಜನರ ಭಾವನೆಗಳ ಬಗ್ಗೆ ಮೂರು ಪಕ್ಷಗಳು ಆಟವಾಡುತ್ತಿವೆ,ಆದರೆ ಜನಸಾಮಾನ್ಯರ ಬದುಕಿನ ಬಗ್ಗೆ ಯಾರು ಮಾತನಾಡುತ್ತಿಲ್ಲ,ಆದರೆ ಆಮ್ ಆದ್ಮಿ ಪಕ್ಷ ಜನರ ಬದುಕು ಮತ್ತು ಭವನೆಯ ಬಗ್ಗೆ ಕಾಳಜಿವಹಿಸುವ ಏಕೈಕ ಪಕ್ಷ ಆಮ್ ಆದ್ಮಿ ಇದಕ್ಕಾಗಿ ನಾನು ನನ್ನ ಸೇವಾ ಅವದಿ ಇನ್ನೂ ಮೂರು ವರ್ಷ ಬಾಕಿ ಇದ್ದರೂ ರಾಜಿನಾಮೆ ನೀಡಿ ಜನರ ಸೇವೆಗಾಗಿ ಬಂದಿದ್ದೆನೆ ಎಂದರು,
ಪ್ರಾಸ್ತಾವಿಕವಾಗಿ ಮಾತನಾಡಿದ ಚನ್ನಮ್ಮನ ಕಿತ್ತೂರು ಮತಕ್ಷೇತ್ರದ ಅಧ್ಯಕ್ಷ ಆನಂದ ಹಂಪಣ್ಣವರ ಅವರ ನೇತೃತ್ವದಲ್ಲಿ ಅನೇಕ ಯುವಕರು,ಮುಖಂಡರು, ರೈತರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ತೊರೆದು ಆಮ್ ಆದ್ಮಿ ಪಕ್ಷವನ್ನು ಸೇರಿದರು, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಐತಿಹಾಸಿಕ ದಾಖಲೆಯನ್ನು ನಿರ್ಮಾಣ ಮಾಡಿದೆ ಶಿಕ್ಷಣ, ಆರೋಗ್ಯ,ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಜನಪರ ಕಾಳಜಿಯನ್ನು ಹೊಂದಿ ಪಂಜಾಬಿನಲ್ಲೂ ಅಧಿಕಾರದ ಗದ್ದುಗೆ ಹಿಡಿದಿದೆ,ಈಗಿನ ನಮ್ಮ ರಾಜ್ಯದ ಮೂರು ಪಕ್ಷಗಳು ಯುವ ಸಮೂಹವನ್ನು ತಪ್ಪು ದಾರಿಗೆ ಎಳೆಯುತ್ತಿವೆ,ಇವಲ್ಲದಕ್ಕೂ ಕಡಿವಾಣ ಹಾಕುವತ್ತ ನಾವು ಇಂದು ಚಿಂತಿಸಬೇಕಾಗಿದೆ,ನಮ್ಮ ಕ್ಷೇತ್ರದ ಜನ ಬದಲಾವಣೆ ಬಯಸಿ ಜನರು ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ಸಂಯೋಜಕರಾದ ರಾಜಕುಮಾರ ಟೋಪಣ್ಣವರ ಮಾತನಾಡಿ ಭ್ರಷ್ಟ ಬಿಜೆಪಿ ಸರಕಾರ ಇಂದು ಪರಿಸ್ಥಿತಿಯನ್ನು ಹದಗೆಡಿಸಿದೆ,ರಾಜ್ಯದಲ್ಲಿ 40% ತಾಂಡವಾಡುತ್ತಿದೆ,ಇದರಿಂದ ನಾನು ಬಿಜೆಯ ಬಿಟ್ಟು ಆಮ್ ಆದ್ಮಿ ಪಕ್ಷ ಸೇರಿ ಸಂಘಟನೆ ಮಾಡುತ್ತಿದ್ದೆನೆ,ದೆಹಲಿ,ಪಂಜಾಬಿನ ಜನರು ಇತರೆ ಪಕ್ಷಗಳನ್ನು ತ್ಯೆಜಿಸಿ ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬೆಳಗಾವಿ ವಲಯ ಸಂಯೋಜಕರಾದ ವಿಜಯ ಶಾಸ್ತ್ರೀಮಠ ಮಾತನಾಡಿ ಉತ್ತರ ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷದ ಸಂಘಟನೆ ಜೋರಾಗಿಯೆ ನಡೆದಿದೆ,
ಬೆಳಗಾವಿ ಹದಿನೆಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬೊತ ಮಟ್ಟದಿಂದ ಸಂಘಟನೆ ಮಾಡಲಾಗುತ್ತಿದೆ ಎಂದರು,
ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಕ್ಷದ ಬೆಳಗಾವಿ ಜಿಲ್ಲಾ ಮುಖಂಡರು ಶಂಕರ ಹೆಗಡೆ,ಬೈಲಹೊಂಗಲ ಎಎಪಿ ಅಧ್ಯಕ್ಷರಾದ ಬಿ.ಎಮ್ ಚಿಕ್ಕನಗೌಡರ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಈಶಪ್ರಭು ಪಾಟೀಲ, ಸಿದ್ದನಗೌಡ ಪಾಟೀಲ, ಗಣಪತಿ ನೇಗಿನಹಾಳ ,ರೈತ ಮುಖಂಡರಾದ ಈರಪ್ಪ ಹಂಪಣ್ಣವರ ಚನ್ನಮ್ಮನ ಕಿತ್ತೂರು ಮತಕ್ಷೇತ್ರದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಂಕರಗೌಡ ಪಾಟೀಲ ನಿರೂಪಿಸಿದರು