ಬಡಾಲ ಅಂಕಲಗಿ ಗ್ರಾಮದ ಯುವಕ ಪಿಎಸ್ಐ ಹುದ್ದೆಗೆ ಆಯ್ಕೆ.

ಉಮೇಶ ಗೌರಿ (ಯರಡಾಲ)

ಬೆಳಗಾವಿ: ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಶಿಕ್ಷಕರಾದ ರುದ್ರಪ್ಪ ಮತ್ತಿಕೊಪ್ಪ ಹಾಗೂ ಲಲಿತಾ ಎಂಬ ದಂಪತಿಯ ಪುತ್ರ ವಿನಾಯಕ ರುದ್ರಪ್ಪ ಮತ್ತಿಕೊಪ್ಪ ಪೊಲೀಸ್‌ ಅಧಿಕಾರಿಯಾಗಿ(ಪಿಎಸ್ಐ) ಆಯ್ಕೆಯಾಗಿದ್ದಾರೆ.

24 ವರ್ಷದ ಈ ಯುವಕ ತಮ್ಮ ಗ್ರಾಮದ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಪಡೆದು,ಪಿಯು ಶಿಕ್ಷಣವನ್ನು ಬೆಳಗಾವಿಯ ಜಿಎಸ್ಎಸ್ ಕಾಲೇಜಿನಲ್ಲಿ ಮುಗಿಸಿ, ಕೆಎಲ್ಇ ಎಂಜಿನೀಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದಾರೆ.

ಎಂಜಿನಿಯರ್‌ ಆಗಬೇಕೆಂಬ ಗುರಿ ಇದ್ದರೂ ಸಹ ಪೋಲಿಸ್ ಇಲಾಖೆ ಬಗ್ಗೆ ಆಸಕ್ತಿ ಹೊಂದಿರುವ ಯುವಕ ತಂದೆ-ತಾಯಿಯ ಹಾಗೂ ಕಲಿಸಿದ ಗುರುಗಳ ಮಾರ್ಗದರ್ಶನದಲ್ಲಿ ಧಾರವಾಡದ ಚಿಗುರು ಸ್ಪರ್ಧಾತ್ಮಕ ತರಬೇತಿ ಕೇಂದ್ರದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ತರಬೇತಿ ಪಡೆದು ಮೊದಲು 2019ರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆ ಆದರೂ ಅದನ್ನು ತ್ಯಜಿಸಿ 2020 ನೇ ಸಾಲಿನ ಪಿಎಸ್ಐ 545 ಪೋಸ್ಟ್ ನೇಮಕಾತಿಯಲ್ಲಿ 217 ನೇ ಶ್ರೇಣಿ ಪಡೆದು ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಪಿಎಸ್‌ಐ ಆಗಿ ಆಯ್ಕೆಯಾದ ವಿನಾಯಕ ಮತ್ತಿಕೊಪ್ಪ ಯುವಕನಿಗೆ ಕಲಿಸಿದ ಶಿಕ್ಷಕರು, ಜನಪ್ರತಿನಿಧಿಗಳು ಸೇರಿದಂತೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಏನಾದರೂ ಸಾಧನೆ ಮಾಡಬೇಕೆಂಬ ಛಲ ಇತ್ತು, ಅದು ಈಡೇರಿದೆ, ಬಡವರಿಗೆ ಸಹಾಯ ಮಾಡುವ ಅದರಲ್ಲೂ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮಾಡುತ್ತೇನೆ. ಜನರಿಗೆ ನನ್ನ ವಾಪ್ತಿಯಲ್ಲಿ ಸಹಾಯ-ಸಹಕಾರ ಮಾಡುತ್ತೇನೆ ಎಂದು ಪಿಎಸ್‌ಐ ಆಗಿ ಆಯ್ಕೆಯಾದ ಯುವಕ ವಿನಾಯಕ ಮತ್ತಿಕೊಪ್ಪ ಅವರು ಹೇಳಿದ್ದಾರೆ. 
 

 

Share This Article
";