ಕಟ್ಟಿಕೊಂಡವನನ್ನು ಬಿಟ್ಟುಬಂದ ಯುವತಿ ಇಟ್ಟುಕೊಂಡವನ ಕೈಯಿಂದ ಕೊಲೆಯಾದಳು

ಉಮೇಶ ಗೌರಿ (ಯರಡಾಲ)

ಬೆಂಗಳೂರು, (ನ.07): ವಿಚ್ಛೇದಿತ ಮಹಿಳೆಯನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವಿಜಯನಗರ ಬಳಿ ಪಟ್ಟೇಗಾರಪಾಳ್ಯದ ಬಾಡಿಗೆಮನೆಯಲ್ಲಿ ನಡೆದಿದೆ.

ಗಾಯತ್ರಿ (26) ಎಂಬಾಕೆಯನ್ನು ಕೊಲೆ ಮಾಡಲಾಗಿದೆ. ಗಾಯತ್ರಿ ಪ್ರಿಯಕರ ಮಂಜುನಾಥ್ ಪ್ರಸಾದ್ ಕೊಲೆ ಆರೋಪಿ. ಆರೋಪಿಯನ್ನು ವಿಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮನೆಕೆಲಸ ಮಾಡಿಕೊಂಡು ಗಾಯತ್ರಿ ಜೀವನ ಸಾಗಿಸುತ್ತಿದ್ದಳು.

ಮಹಿಳೆಗೆ ಮುಂಚೆಯೇ ಮದುವೆ ಆಗಿ ಎರಡು ಮಕ್ಕಳಿದ್ದವು. ಬಳಿಕ ತನ್ನ ಪತಿಯಿಂದ ಗಾಯತ್ರಿ ವಿಚ್ಛೇದನ ಪಡೆದುಕೊಂಡಿದ್ದಳು, ನಂತರ ಪ್ರಿಯಕರ ಮಂಜುಪ್ರಸಾದ್ ಎಂಬುವನ ಜೊತೆ ಸಂಬಂಧ ಇಟ್ಟುಕೊಂಡಿದ್ದಳು.

ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಅದು ತಾರಕಕ್ಕೇರಿದ್ದು, ಮಂಜುಪ್ರಸಾದ್, ಗಾಯತ್ರಿಯನ್ನು ಕೊಲೆ ಮಾಡಿದ್ದಾನೆ. ಈ ಬಗ್ಗೆ ವಿಜಯನಗರ ಠಾಣಾ ಪೊಲೀಸರು ತನಿಖೆ ನಡೆಸಿದ್ದಾರೆ.

Share This Article
";